- ಕ್ರಿಕೆಟ್ ಬ್ಯಾಟ್ ಆಕಾರದ ಕಾರು ವೈರಲ್
- ಕೆ. ಸುಧಾಕರ್ ಯಾದವ್ ಅವರು ನಿರ್ಮಿಸಿದ ಬ್ಯಾಟ್ ಕಾರು
- ವಿವಿಧ ರೀತಿಯ ಕೆಲವು ಪ್ರಸಿದ್ಧವಾದ ಕಾರುಗಳು ಇಲ್ಲಿವೆ..
ತೆಲಂಗಾಣ: ಹೈದರಾಬಾದ್‌ನಲ್ಲಿ ಸುಧಾ ಕಾರ್ಸ್ ಮ್ಯೂಸಿಯಂನ ಕೆ. ಸುಧಾಕರ್ ಯಾದವ್ ಅವರು ನಿರ್ಮಿಸಿದ್ದಾರೆ ಎನ್ನಲಾದ 21 ಅಡಿ ಉದ್ದದ ಕ್ರಿಕೆಟ್ ಬ್ಯಾಟ್ ಆಕಾರದ ಕಾರು ವೈರಲ್ ಆಗಿದೆ!
ಹೌದು, ಇದು ರಸ್ತೆಯಲ್ಲಿ ಓಡಿಸಬಹುದಾದ ವಾಹನವಾಗಿದ್ದು, ಗರಿಷ್ಠ ವೇಗ 40 ಕಿ.ಮೀ/ಗಂಟೆ ಇದೆ, ಇದರ ಜೊತೆಗೆ ಕ್ರಿಕೆಟ್ ಬಾಲ್ ಆಕಾರದ ಕಾರು ಕೂಡ ಇದೆ. ಈ ಕಾರುಗಳು ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿವೆ ಮತ್ತು ICC ವಿಶ್ವಕಪ್‌ಗೆ ಸ್ಫೂರ್ತಿಯಾಗಿವೆ. ಇದು ಹೊಸದೇನಲ್ಲ, ಸುಧಾಕರ್ ಅವರು ಹಲವು ವರ್ಷಗಳಿಂದ ಅಸಾಧಾರಣ ಆಕಾರದ ಕಾರುಗಳನ್ನು ನಿರ್ಮಿಸುತ್ತಿದ್ದಾರೆ.
ಸುಧಾ ಕಾರ್ಸ್ ಮ್ಯೂಸಿಯಂನಲ್ಲಿ ಕ್ರಿಕೆಟ್ ಬ್ಯಾಟ್ ಮತ್ತು ಬಾಲ್ ಆಕಾರದ ಕಾರುಗಳ ಹೊರತಾಗಿ, ಸುಮಾರು 60ಕ್ಕೂ ಹೆಚ್ಚು ಅಸಾಧಾರಣ ಆಕಾರದ ಕಾರುಗಳಿವೆ! ಇವೆಲ್ಲವೂ ಕೆ. ಸುಧಾಕರ್ ಯಾದವ್ ಅವರ ಕೈಯಿಂದ ನಿರ್ಮಿತವಾದವು ಮತ್ತು ರಸ್ತೆಯಲ್ಲಿ ಓಡಿಸಬಹುದಾದವು.
ಕೆಲವು ಪ್ರಸಿದ್ಧವಾದ ಕಾರುಗಳು ಇಲ್ಲಿವೆ..
2.ಶೂ (ಹೈ ಹೀಲ್ ಸ್ಟಿಲೆಟ್ಟೋ) ಆಕಾರದ ಕಾರು
ಆಸಕ್ತಿದಾಯಕ ಕಾರುಗಳು
ಹ್ಯಾಂಡ್‌ಬ್ಯಾಗ್ ಮತ್ತು ಲಿಪ್‌ಸ್ಟಿಕ್ ಆಕಾರದ ಕಾರುಗಳು
ಸೋಫಾ ಸೆಟ್, ಬೆಡ್ ಆಕಾರದ ಕಾರುಗಳು
ಪೆನ್, ಪೆನ್ಸಿಲ್, ಶಾರ್ಪ್ನರ್ (ಮಕ್ಕಳ ದಿನಕ್ಕಾಗಿ)
ಟಾಯ್ಲೆಟ್, ಕಂಡೋಮ್ (ಅವೇರ್ನೆಸ್‌ಗಾಗಿ), ಕಪ್ ಅಂಡ್ ಸಾಸರ್, ಪೂಲ್ ಟೇಬಲ್, ಕಂಪ್ಯೂಟರ್ ಆಕಾರ ಕಾರುಗಳಿವೆ.
ಇವೆಲ್ಲವೂ ಜಂಕ್ ಮೆಟೀರಿಯಲ್‌ನಿಂದ ಮಾಡಿದ್ದು, ಗಿನ್ನೆಸ್ ಮತ್ತು ಲಿಮ್ಕಾ ರೆಕಾರ್ಡ್‌ಗಳಲ್ಲಿ ಸ್ಥಾನ ಪಡೆದಿವೆ. ಮ್ಯೂಸಿಯಂನಲ್ಲಿ ವಿಂಟೇಜ್ ಕಾರುಗಳು ಮತ್ತು ವಿಶೇಷ ಬೈಸಿಕಲ್‌ಗಳೂ ಸಹ ಇವೆ,(ಏಜೆನ್ಸೀಸ್).