2026ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಪ್ರಕಟ
- 2026ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಪ್ರಕಟ
- ಕೇಂದ್ರ ಸರ್ಕಾರ ನೀಡುವ ಪ್ರತಿಷ್ಠಿತ ಪ್ರಶಸ್ತಿಗಳ ಪಟ್ಟಿಯಲ್ಲಿ 'ಅಕ್ಷರ ಯೋಗಿ'ಗೆ ಗೌರವ
- ದೇಶದ ಒಟ್ಟು 45 ಸಾಧಕರ ಹೆಸರಿರುವ ಪಟ್ಟಿ ಅನಾವರಣ
- ಕರ್ನಾಟಕದ ಮೂವರು ಸಾಧಕರಿಗೆ ಪ್ರಶಸ್ತಿ
ನವದೆಹಲಿ: ಜ.26ರಂದು ಗಣರಾಜ್ಯೋತ್ಸವ ದಿನಾಚರಣೆಯ ಹಿನ್ನೆಲೆ ಕೇಂದ್ರ ಸರ್ಕಾರ ತನ್ನ ಪ್ರತಿಷ್ಠಿತ, ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿ ಪಟ್ಟಿಯನ್ನು ಅನಾವರಣಗೊಳಿಸಿದೆ. 2026ನೇ ಸಾಲಿನ ಈ ಪಟ್ಟಿಯಲ್ಲಿ ಒಟ್ಟು ದೇಶದ 45 ಸಾಧಕರ ಹೆಸರಿವೆ. ವಿಶೇಷ ಎಂದರೆ ಕರ್ನಾಟಕದ ಮಂಡ್ಯ ಜಿಲ್ಲೆಯ ಪಾಂಡವಪುರದ ಕನ್ನಡಿಗ, 'ಅಕ್ಷರ ಯೋಗಿ' ಎಂದೇ ಖ್ಯಾತಿ ಗಳಿಸಿರುವ ಅಂಕೇಗೌಡರಿಗೆ ಈ ಬಾರಿಯ ಪದ್ಮಶ್ರೀ ಗೌರವ ಒಲಿದಿದೆ.
'ಪುಸ್ತಕ ಮನೆ' ಒಡೆಯ
ಸಾಹಿತ್ಯ ಲೋಕದಲ್ಲಿ ತಮ್ಮ ಹೆಸರನ್ನು ಬೇರೂರಿರುವ ಮಂಡ್ಯದ ಪಾಂಡವಪುರ ತಾಲೂಕಿನ ಹರಳಹಳ್ಳಿಯ ಅಕ್ಷರ ಯೋಗಿಗೆ ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ಲಭಿಸಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ತಮ್ಮ ಜೀವನದ ಬಹುಪಾಲು ಆದಾಯದ ಹಣವನ್ನು ಪುಸ್ತಕ ಮನೆಗೆ ಮೀಸಲಿಟ್ಟ ಅಂಕೇಗೌಡರು, ಸುಮಾರು 20 ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ಅದೊಂದು ಕೋಣೆಯಲ್ಲಿ ಸಂಗ್ರಹಿಸಿದ್ದಾರೆ. ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅವರ ಅಪಾರ ಸೇವೆಯನ್ನು ಗುರುತಿಸಿರುವ ಕೇಂದ್ರ ಸರ್ಕಾರ, 2026ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ನೀಡಿ ಅವರನ್ನು ಗೌರವಿಸಿದೆ.
ಕರ್ನಾಟಕದ ಮೂವರಿಗೆ ಈ ಪ್ರಶಸ್ತಿ...
ಅಂಕೇಗೌಡರೊಂದಿಗೆ ಜೆಐಎಮ್ ಮೆಡಿಕಲ್ ಕಾಲೇಜು ಪ್ರಾಧ್ಯಾಪಕರಾದ ಡಾ. ಸುರೇಶ್ ಹನಗವಾಡಿ ಮತ್ತು ಬೆಂಗಳೂರಿನ ಸಮಾಜ ಸೇವಕಿ ಎಸ್.ಜಿ.ಸುಶೀಲಮ್ಮ ಅವರಿಗೆ 2026ನೇ ಸಾಲಿನ ಪ್ರತಿಷ್ಠಿತ ಪದ್ಮಶ್ರೀ ಗೌರವ ಒಲಿದಿದೆ.
ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ...
1. ಅಂಕೇಗೌಡ (ಸಾಹಿತ್ಯ, ಕರ್ನಾಟಕ)
2. ತಂಗರಾಜ್ (ವಿಜ್ಞಾನ, ಸಿಸಿಎಂಬಿ, ಹೈದರಾಬಾದ್)
3. ಅರ್ಮಿದಾ ಫೆರ್ನಾಂಡಿಸ್ (ಮಹಾರಾಷ್ಟ್ರ)
4. ಭಗವಾನದಾಸ್ ರಾಯ್ಕರ್ (ಮಧ್ಯಪ್ರದೇಶ)
5. ಭಿಕ್ಖ್ಯಾ ಲದಾಖ್ಯಾ ದಿಂಡಾ
6. ಬ್ರಿಜ್ಲಾಲ್ ಭಟ್ (ಜಮ್ಮು ಮತ್ತು ಕಾಶ್ಮೀರ)
10. ಧಾರ್ಮಿಕ್ಲಾಲ್ ಚುನಿಲಾಲ್ ಪಾಂಡ್ಯ
11. ಗಫ್ರುದ್ದೀನ್ ಮೇವಾಟಿ ಜೋಗಿ
13. ಇಂದ್ರಜಿತ್ ಸಿಂಗ್ ಸಿಂಧು
17. ಕೊಲ್ಲಕ್ಕೈ ದೇವಕಿ ಅಮ್ಮಾ ಜೀ
18. ಮಹೇಂದ್ರ ಕುಮಾರ್ ಮಿಶ್ರಾ
19. ಮೀರ್ ಹಾಜಿಭಾಯಿ ಕಸಂಬಾಯಿ
21. ನರೇಶ್ ಚಂದ್ರ ದೇವ್ ವರ್ಮಾ
22. ನೀಲೇಶ್ ವಿನೋದಚಂದ್ರ ಮಂಡೆವಾಲ
24. ಒಟ್ಟುವರ್ ತಿರುತ್ತಣಿ ಸ್ವಾಮಿ ನಾಥನ್
30.ರಘುವೀರ್ ತುಕಾರಾಂ ಖೇಡ್ಕರ್
31. ರಾಜಸ್ತಪತಿ ಕಾಳಿಪ್ಪ ಗೌಂಡರ್
33. ರಾಮಚಂದ್ರ ಗೋಡ್ಬೋಲೆ - ಸುನೀತಾ ಗೋಡ್ಬೋಲೆ
43. ತಿರುವಾಯೂರ್ ಭಕ್ತವತ್ಸಲಂ