Rohit Sharma | 2024 ರ ಟಿ20 ವಿಶ್ವಕಪ್ ಟ್ರೋಫಿಯೊಂದಿಗೆ ರೋಹಿತ್ ಶರ್ಮಾ 
ದೇಶ

2026 ಐಸಿಸಿ ಟಿ20 ವಿಶ್ವಕಪ್‌: ಬ್ರಾಂಡ್ ಅಂಬಾಸಿಡರ್ ಆಗಿ ರೋಹಿತ್ ಶರ್ಮಾ ನೇಮಕ | Rohit Sharma

ಮುಂಬೈ: ಭಾರತದ ಮಾಜಿ ನಾಯಕ ರೋಹಿತ್ ಶರ್ಮಾರನ್ನು(Rohit Sharma) ಮುಂಬರುವ 2026ರ ಐಸಿಸಿ ಟಿ20 ವಿಶ್ವಕಪ್ ಬ್ರಾಂಡ್ ರಾಯಭಾರಿಯಾಗಿ ನೇಮಿಸಲಾಗಿದೆ ಎಂದು ಐಸಿಸಿ ಅಧ್ಯಕ್ಷ ಜಯ್ ಶಾ ಮಂಗಳವಾರ (ನ.25) ಸಂಜೆ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಘೋಷಿಸಿದ್ದಾರೆ.
ಈ ಬಗ್ಗೆ ಮುಂಬೈನಲ್ಲಿ ಮಾತನಾಡಿದ ಶಾ, 2024ರ ಟಿ20 ವಿಶ್ವಕಪ್ ವಿಜೇತ ಮತ್ತು 2025 ರ ಚಾಂಪಿಯನ್ಸ್ ಟ್ರೋಫಿ ವಿಜೇತ ನಾಯಕ ರೋಹಿತ್ ಶರ್ಮಾರನ್ನು ಮುಂಬರುವ ಟಿ20 ವಿಶ್ವಕಪ್‌ನ ಬ್ರಾಂಡ್ ರಾಯಭಾರಿಯಾಗಿ ಘೋಷಿಸಲು ನನಗೆ ಸಂತೋಷವಾಗಿದೆ ಎಂದಿದ್ದಾರೆ.

ರಾಯಭಾರಿಯಾಗಿ ನೇಮಕಗೊಂಡ ನಂತರ ರೋಹಿತ್ ಮಾತು

ಈ ಬಗ್ಗೆ ಮಾತನಾಡಿದ ಮಾಜಿ ನಾಯಕ ರೋಹಿತ್, ಇದು ನನಗೆ ಸಿಕ್ಕಿರುವ ದೊಡ್ಡ ಸೌಭಾಗ್ಯ, ಮತ್ತು ದೊಡ್ಡ ಗೌರವವೂ ಹೌದು. ಕಳೆದ ವರ್ಷ ನಾವು ಸೃಷ್ಟಿಸಿದ ಮ್ಯಾಜಿಕ್​ನ್ನು ಈ ಬಾರಿ ವಿಭಿನ್ನ ಹುಡುಗರ ಗುಂಪಿನೊಂದಿಗೆ ಮರುಸೃಷ್ಟಿಸಬಹುದು ಎಂದು ಆಶಿಸುತ್ತೇವೆ. ಆದರೆ, ಐಸಿಸಿ ಟ್ರೋಫಿಯನ್ನು ಗೆಲ್ಲುವುದು ಒಂದು ದೊಡ್ಡ ಕೆಲಸವಾಗುತ್ತದೆ. ನಾನು ವೈಯಕ್ತಿಕವಾಗಿಯೂ ಸಹ ಇಷ್ಟು ವರ್ಷಗಳಲ್ಲಿ ಅದನ್ನು ನೋಡಿದ್ದೇನೆ ಎಂದು ಹೇಳಿದ್ದಾರೆ.
ನಾನು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 18 ವರ್ಷಗಳನ್ನು ಪೂರೈಸಿದ್ದೇನೆ ಮತ್ತು ಇತ್ತೀಚೆಗೆ 2 ಗೆಲುವುಗಳನ್ನು ಪಡೆಯುವ ಅದೃಷ್ಟಶಾಲಿಯಾಗಿದ್ದೇನೆ. ನನ್ನ ವೃತ್ತಿಜೀವನದ ಆರಂಭದಲ್ಲಿ ಮತ್ತು ನಂತರ ಮಧ್ಯದಲ್ಲಿ, ನಾವು ಐಸಿಸಿ ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ. ಆ ಟ್ರೋಫಿಯನ್ನು ಗೆಲ್ಲಲು ನಾವು ಆಟಗಾರರಾಗಿ, ತಂಡವಾಗಿ ಎಷ್ಟು ಹತಾಶರಾಗಿದ್ದೇವೆಂದು ನನಗೆ ತಿಳಿದಿದೆ ಎಂದು ಹಿಟ್​ಮ್ಯಾನ್​ ತಿಳಿಸಿದ್ದಾರೆ,(ಏಜೆನ್ಸೀಸ್).