ಗೌರವ್ ಗೊಗೊಯ್ ಮತ್ತು ಸಿಎಂ ಹಿಮಂತ ಬಿಸ್ವಾ ಶರ್ಮಾ 
ದೇಶ

2026ರ ಅಸ್ಸಾಂ ವಿಧಾನಸಭೆ ಚುನಾವಣೆ ಫಲಿತಾಂಶ; ಹ್ಯಾಟ್ರಿಕ್ ಜಯದತ್ತ ಬಿಜೆಪಿ, ಕಾಂಗ್ರೆಸ್ ಗೆ ಮತ್ತೆ ಮುಖಭಂಗ! | Election Results

ಗುವಾಹಟಿ: 2026ರ ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಹ್ಯಾಟ್ರಿಕ್ ಜಯದತ್ತ ಸಿಎಂ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಬಿಜೆಪಿ ದಾಪುಗಾಲಿಡುತ್ತಿದ್ದು, 97 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ವಿಪಕ್ಷ ಕಾಂಗ್ರೆಸ್​ಗೆ ಮತ್ತೆ ಮುಖಭಂಗವಾಗಿದ್ದು ಕೇವಲ 27 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. 
ಚುನಾವಣಾ ಆಯೋಗದ ಇತ್ತೀಚಿನ ವರದಿ ಪ್ರಕಾರ, ಅಸ್ಸಾಂನಲ್ಲಿ ಆಡಳಿತಾರೂಢ ಎನ್‌ಡಿಎ 87 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ,  ಅದರ ಮೈತ್ರಿಕೂಟದ ಪಾಲುದಾರರಾದ ಅಸ್ಸಾಂ ಗಣ ಪರಿಷತ್ (ಎಜಿಪಿ) ಮತ್ತು ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) ಕ್ರಮವಾಗಿ ಏಳು ಮತ್ತು ಒಂಬತ್ತು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. 
ಕಾಂಗ್ರೆಸ್ 21 ಕ್ಷೇತ್ರಗಳಲ್ಲಿ ಮುಂದಿದೆ. ದರ ಮಿತ್ರ ಪಕ್ಷಗಳಾದ ಅಸ್ಸಾಂ ಜಾತಿಯ ಪರಿಷತ್ (ಎಜೆಪಿ) ಮತ್ತು ರೈಜೋರ್ ದಳ ತಲಾ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿವೆ. ಎಐಯುಡಿಎಫ್ ಎರಡು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಸಿಪಿಐ(ಎಂ) ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ ತಲಾ ಒಂದು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿವೆ.
ಅಸ್ಸಾಂ ವಿಧಾನಸಭೆ ಒಟ್ಟು 126 ಕ್ಷೇತ್ರಗಳನ್ನು ಹೊಂದಿದ್ದು, ಬಹುಮತಕ್ಕೆ 64 ಅಗತ್ಯ. ಆದರೆ ಈಗಾಗಲೇ ಆಡಳಿತರೂಢ ಎನ್​ಡಿಎ ಒಕ್ಕೂಟ 87 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಮೂರನೇ ಬಾರಿ ಅಧಿಕಾರಕ್ಕೇರುವ ಸಾಧ್ಯತೆ ಇದೆ. ಸಿಎಂ ಹಿಮಂತ ಬಿಸ್ವಾ ಶರ್ಮಾ ಮೂರನೇ ಬಾರಿ ಸಿಎಂ ಆಗಿ ಮುಂದುವರೆಯಲ್ಲಿದ್ದಾರೆ. 

ಜೋರ್ಹತ್ ಕ್ಷೇತ್ರದಲ್ಲಿ ಗೌರವ್ ಗೊಗೊಯ್ ಹಿನ್ನಡೆ

ಜೋರ್ಹತ್ ವಿಧಾನಸಭಾ ಕ್ಷೇತ್ರದಲ್ಲಿ ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್ ತಮ್ಮ ಬಿಜೆಪಿ ಪ್ರತಿಸ್ಪರ್ಧಿ ಹಿತೇಂದ್ರನಾಥ್ ಗೋಸ್ವಾಮಿಗಿಂತ 4,132 ಮತಗಳಿಂದ ಹಿನ್ನಡೆ ಅನುಭವಿಸಿದ್ದಾರೆ. ಗೌರವ್ ಗೊಗೊಯ್ ಇಲ್ಲಿಯವರೆಗೆ 9,875 ಮತಗಳನ್ನು ಪಡೆದಿದ್ದರೆ, ಅವರ ಎದುರಾಳಿ ಮತ್ತು ಹಾಲಿ ಶಾಸಕ 14,007 ಮತಗಳನ್ನು ಪಡೆದಿದ್ದಾರೆ (ಏಜೆನ್ಸೀಸ್).