- ಸತ್ತ ಎಮ್ಮೆ ತಂದಿಟ್ಟ ಸಂಕಷ್ಟ: 200 ಜನರಿಗೆ ಈಗ ಇಂಜೆಕ್ಷನ್ ಭಯ!
- ಹಾಲಿನ ಮೂಲಕ ಹರಡುತ್ತಾ ರೇಬಿಸ್?
- ಎಮ್ಮೆ ಸಾವಿನ ಬೆನ್ನಲ್ಲೇ ಬೆಚ್ಚಿಬಿದ್ದ ಜನ; ಚುಚ್ಚುಮದ್ದಿಗಾಗಿ ಕ್ಯೂ
- ರೇಬಿಸ್ ಭೀತಿಯಿಂದ ಚುಚ್ಚುಮದ್ದಿಗೆ ದೌಡಾಯಿಸಿದ 200 ಗ್ರಾಮಸ್ಥರು
ಉತ್ತರಪ್ರದೇಶ: (rabies) ರೇಬಿಸ್ ಪೀಡಿತ ನಾಯಿ ಕಚ್ಚಿದ್ದ ಎಮ್ಮೆಯ ಹಾಲಿನಿಂದ ತಯಾರಿಸಿದ 'ರೈತಾ' ಸೇವಿಸಿ ಪಿಪ್ರೌಲಿ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ರೇಬಿಸ್ ಹರಡುವ ಭೀತಿಯಿಂದಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಸುಮಾರು 200 ಜನರಿಗೆ ಲಸಿಕೆ ನೀಡಲಾಗಿದೆ
ಡಿಸೆಂಬರ್ 23 ರಂದು ಗ್ರಾಮದಲ್ಲಿ ಅಂತ್ಯಕ್ರಿಯೆ ಸಮಾರಂಭ ನಡೆದಿದ್ದು, ಅಲ್ಲಿ ಅವರು ರೈತಾ ಸೇವಿಸಿದ್ದರು. ನಂತರ, ಖಾದ್ಯ ತಯಾರಿಸಲು ಹಾಲು ಬಳೆಕೆ ಮಾಡಲಾಗುತ್ತು. ಈ ಹಾಲು ನೀಡಿದ್ದ ಎಮ್ಮೆ ಡಿಸೆಂಬರ್ 26 ರಂದು ಸಾವನ್ನಪ್ಪಿದೆ. ಎಮ್ಮೆ ಯಾಕೆ ಸಾವನ್ನೊಪ್ಪಿತ್ತು ಎನ್ನುವ ಪ್ರಶ್ನೆ ಮುನ್ನೆಲೆಗೆ ಬಂದಾಗ ಎಮ್ಮೆಗೆ ಕೆಲವು ದಿನಗಳ ಹಿಂದೆ ನಾಯಿ ಕಚ್ಚಿತ್ತು ಎನ್ನುವುದು ಬೆಳಕಿಗೆ ಬಂದಿತು. ಈ ವೇಳೆ ಗ್ರಾಮದಲ್ಲಿ ಸೋಂಕಿನ ಸಾಧ್ಯತೆಯ ಬಗ್ಗೆ ಭೀತಿ ಉಂಟಾಗಿದೆ. ಇದಾದ ನಂತರ, ಗ್ರಾಮಸ್ಥರು ಉಜ್ಜಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಲಸಿಕೆ ಹಾಕಿಸಿಕೊಳ್ಳಲು ಬಂದಿದ್ದಾರೆ.
ಉತ್ತರ ಪ್ರದೇಶದ ಬುಡೌನ್ ಜಿಲ್ಲೆಯ ಪಿಪ್ರೌಲಿ ಗ್ರಾಮದ ಸುಮಾರು 200 ನಿವಾಸಿಗಳಿಗೆ ಮುನ್ನೆಚ್ಚರಿಕೆಯಾಗಿ ರೇಬೀಸ್ ವಿರೋಧಿ ಲಸಿಕೆಗಳನ್ನು ನೀಡಲಾಯಿತು.
ಮುಖ್ಯ ವೈದ್ಯಾಧಿಕಾರಿ ಡಾ. ರಾಮೇಶ್ವರ್ ಮಿಶ್ರಾ ಭಾನುವಾರ ಮಾತನಾಡಿ, ಎಮ್ಮೆಯನ್ನು ಹುಚ್ಚು ನಾಯಿ ಕಚ್ಚಿದೆ ಮತ್ತು ಅದು ಸಾಯುವ ಮೊದಲು ರೇಬೀಸ್ ಲಕ್ಷಣಗಳಿದ್ದವು ಎಂಬ ಮಾಹಿತಿ ಅಧಿಕಾರಿಗಳಿಗೆ ಬಂದಿದೆ. ಗ್ರಾಮಸ್ಥರು ಆ ಪ್ರಾಣಿಯ ಹಾಲಿನಿಂದ ತಯಾರಿಸಿದ ರೈತಾವನ್ನು ಸೇವಿಸಿದ್ದಾರೆ ಎಂದು ವರದಿಯಾಗಿದೆ.
ಎಲ್ಲರಿಗೂ ರೇಬೀಸ್ ವಿರೋಧಿ ಲಸಿಕೆ ನೀಡಲಾಯಿತು. ಸಾಮಾನ್ಯವಾಗಿ, ಹಾಲನ್ನು ಕುದಿಸಿದ ನಂತರ ರೇಬೀಸ್ ಬರುವ ಅಪಾಯವಿರುವುದಿಲ್ಲ, ಆದರೆ ಯಾವುದೇ ಸಂಭಾವ್ಯ ಅಪಾಯವನ್ನು ತಡೆಗಟ್ಟಲು ಲಸಿಕೆಯನ್ನು ನೀಡಲಾಯಿತು. ಗ್ರಾಮದಲ್ಲಿ ಇಲ್ಲಿಯವರೆಗೆ ಯಾವುದೇ ರೋಗ ಹರಡಿಲ್ಲ ಮತ್ತು ಪರಿಸ್ಥಿತಿ ಸಂಪೂರ್ಣವಾಗಿ ಸಾಮಾನ್ಯವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಎಮ್ಮೆಯನ್ನು ನಾಯಿ ಕಚ್ಚಿದ್ದರಿಂದ ಅದು ಅನಾರೋಗ್ಯಕ್ಕೆ ಒಳಗಾಯಿತು ಮತ್ತು ನಂತರ ಸತ್ತುಹೋಯಿತು ಎಂದು ಗ್ರಾಮಸ್ಥ ಧರ್ಮಪಾಲ್ ಹೇಳಿದರು. ಅದೇ ಎಮ್ಮೆಯ ಹಾಲಿನಿಂದ 'ರೈತಾ' ತಯಾರಿಸಲ್ಪಟ್ಟಿದ್ದರಿಂದ ಸೋಂಕಿನ ಭಯ ಹುಟ್ಟಿಕೊಂಡಿತು, ಆದ್ದರಿಂದ ಅವರಿಗೆ ರೇಬೀಸ್ ಇಂಜೆಕ್ಷನ್ ಪಡೆದಿದ್ದೇನೆಂದು ಹೇಳಿದ್ದಾರೆ.
ಹೆಚ್ಚಿನ ಮಾಹಿತಿ (ಜಾಗೃತಿಗಾಗಿ):
ಸಾಮಾನ್ಯವಾಗಿ ರೇಬಿಸ್ ವೈರಸ್ ಕುದಿಸಿದ ಹಾಲಿನ ಮೂಲಕ ಹರಡುವುದಿಲ್ಲ. ಆದರೆ, ಹಸಿ ಹಾಲು ಅಥವಾ ಹಾಲಿನ ಉತ್ಪನ್ನಗಳನ್ನು ಬಳಸಿದಾಗ ಮತ್ತು ಬಾಯಿಯಲ್ಲಿ ಸಣ್ಣ ಗಾಯಗಳಿದ್ದಾಗ ಸೋಂಕು ಹರಡುವ ಸಣ್ಣ ಸಾಧ್ಯತೆ ಇರುತ್ತದೆ. ಅದಕ್ಕಾಗಿಯೇ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆಯಾಗಿ ಈ ಕ್ರಮ ಕೈಗೊಳ್ಳಿ.