Mumbai Drugs Case 
ದೇಶ

ಮ್ಯೂಸಿಕ್ ಕಾನ್ಸರ್ಟ್‌ನಲ್ಲಿದ್ದ ಸ್ಟೂಡೆಂಟ್ಸ್​ ಡ್ರಗ್ ಓವರ್‌ಡೋಸ್​​ನಿಂದ ಮೃತ, ಐವರ ಬಂಧನ..Mumbai Drugs Case

ಪ್ರಮುಖ ಮುಖ್ಯಾಂಶಗಳು

  • ಮುಂಬೈನ ಗೋರೆಗಾಂವ್‌ನ ನೆಸ್ಕೋ ಕೇಂದ್ರದಲ್ಲಿ ನಡೆದ ಮ್ಯೂಸಿಕ್ ಕಾನ್ಸರ್ಟ್‌ನಲ್ಲಿ ದುರಂತ.
  • ಹೆಚ್ಚಾಗಿ ಮಾದಕ ದ್ರವ್ಯ ಸೇವಿಸಿದ ಪರಿಣಾಮ ಇಬ್ಬರು ಸ್ಟೂಡೆಂಟ್ಸ್ ಮೃತ ಐವರು ಆರೋಪಿಗಳ ಬಂಧನ
  • ಮತ್ತೋರ್ವ ವಿದ್ಯಾರ್ಥಿನಿಯ ಸ್ಥಿತಿ ಗಂಭೀರ, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಕೆ
ಮುಂಬಯಿ: ಮುಂಬೈನ ಸಂಗೀತ ಕಾನ್ಸರ್ಟ್​ವೊಂದರಲ್ಲಿ ಭಾಗಿಯಾಗಿದ್ದ  ದಕ್ಷಿಣ ಮುಂಬೈನ ಪ್ರತಿಷ್ಠಿತ ಮ್ಯಾನೇಜ್‌ಮೆಂಟ್ ಕಾಲೇಜಿನ  ಎಂಬಿಎ ವಿದ್ಯಾರ್ಥಿಗಳು ಅತಿಯಾದ ಡ್ರಗ್ ಸೇವನೆಯಿಂದ ​(Mumbai Drugs Case) ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ.  ಸದ್ಯ  ವನ್ರೈ ಪೊಲೀಸರು ಆರು ಶಂಕಿತ ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ.
ಏಪ್ರಿಲ್​ 11ರ ರಾತ್ರಿ ಗೋರೆಗಾಂವ್​​​ ನೆಸ್ಕೋ ಕೇಂದ್ರದಲ್ಲಿ(Nesco) ಮ್ಯೂಸಿಕ್​ ಕಾನ್ಸರ್ಟ್​ ಆಯೋಜಿಸಲಾಗಿತ್ತು. ಇದಕ್ಕೆ  2 ಸಾವಿರ ರೂಪಾಯಿ ಪ್ರವೇಶ ಶುಲ್ಕ ನಿಗದಿ ಪಡಿಸಲಾಗಿತ್ತು. 4 ಸಾವಿರ ಮಂದಿ ಹಾಜರಾಗಿದ್ದರು.15 ಮಂದಿ ವಿದ್ಯಾರ್ಥಿಗಳು ಆ ಲಿಸ್ಟ್​ನಲ್ಲಿದ್ದರು. ಇಲ್ಲಿಗೆ ಬಂದವರಲ್ಲಿ ಕೆಲವರು ಎಂಡಿಎಂಗೆ ಸೇವಿಸಿದ್ದಾರೆ ಎಂದು ಹೇಳಲಾಗಿದೆ.

ಏನಿದು ಘಟನೆ?

ಮೂವರು ವಿದ್ಯಾರ್ಥಿಗಳು ಡ್ರಗ್​ ಸೇವಿಸಿದ ಕಾರಣ. ಏಪ್ರಿಲ್​ 11ರಂದು ಮಧ್ಯರಾತ್ರಿ 12ಕ್ಕೆ ಉಸಿರಾಟದ ಸಮಸ್ಯೆಗೆ ಒಳಗಾಗಿದ್ದಾರೆ. ಕೂಡಲೇ ಸ್ಥಳದಲ್ಲೇ ಇದ್ದವರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ. ಏಪ್ರಿಲ್​ 12 ರಂದು  24 ವರ್ಷದ ಯುವಕ, ಅದೇ ವಯಸ್ಸಿನ ಮತ್ತೊಬ್ಬ ಯುವತಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ.  ಮತ್ತೊಬ್ಬರ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. 
ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಭಾರತೀಯ ನ್ಯಾಯ ಸಂಹಿತೆ  ಮತ್ತು ಎನ್​ಡಿಪಿಎಸ್​​ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಬಂಧಿತ ಆರೋಪಿಗಳಲ್ಲಿ ಐವರು ಸ್ನಾತಕೋತ್ತರ ವಿದ್ಯಾರ್ಥಿಗಳ ಮತ್ತು ಕಾರ್ಯಕ್ರಮದ ಆಯೋಜಕರು ಎನ್ನಲಾಗಿದೆ.  ಡ್ರಗ್​ ಪೂರೈಕೆ ಮಾಡಿದ್ದು ಯಾರು, ವಿದ್ಯಾರ್ಥಿಗಳಿಗೆ ಸಿಕ್ಕಿದ್ದು ಎಲ್ಲಿಂದ ಎಂಬುದನ್ನು ತನಿಖೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ಕಾನ್ಸರ್ಟ್ ಆಯೋಜಿಸಿದ ಸಂಸ್ಥೆ ಹೇಳಿದ್ದೇನು?

ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಘಟನೆಯ ಗಂಭೀರತೆಯ ಬಗ್ಗೆ ನಮಗೆ ಅರಿವಿದೆ. ಈ ಪ್ರಕರಣ ಸಂಬಂಧ ನಾವು ತನಿಖಾಧಿಕಾರಿಗಳಿಗೆ ಎಲ್ಲ ರೀತಿಯಲ್ಲಿ ಸಹಕರಿಸುತ್ತೇವೆ. ಸತ್ಯಾ ಸತ್ಯತೆ ಏನಿದೆ ಎಂಬುದನ್ನು ಹೊರತರುವ ಪ್ರಯತ್ನದಲ್ಲಿರುವ ಪೊಲೀಸರಿಗೆ ನಾವು ಎಲ್ಲ ರೀತಿಯಲ್ಲೂ ಸ್ಪಂದಿಸಲು ಸಿದ್ಧ ಎಂದು ಸಂಗೀತ ಕಾನ್ಸರ್ಟ್​ ಆಯೋಜಕರಾದ ನೆಸ್ಕೋ ಹೇಳಿದೆ, (ಏಜೆನ್ಸೀಸ್​)