Indian Mount Everest climbers death
ನವದೆಹಲಿ: ಮೌಂಟ್ ಎವರೆಸ್ಟ್ (Mount Everest) ಶಿಖರವನ್ನು ಯಶಸ್ವಿಯಾಗಿ ಏರಿ, ಕಳಗೆ ಇಳಿಯುವಾಗ ಪರ್ವತಾರೋಹಿಗಳಿಬ್ಬರು ಪ್ರಾಣ ಕಳೆದುಕೊಂಡ ಘಟನೆ ನಡೆದಿದ್ದು, ಈ ಬಗ್ಗೆ ನೇಪಾಳದ ಅಧಿಕಾರಿಗಳು ಸ್ಪಷ್ಟನೆ ಕೊಟ್ಟಿದ್ದಾರೆ ಎನ್ನಲಾಗಿದೆ.
ಮೃತ ಪರ್ವತಾರೋಹಿಗಳನ್ನು ಅರುಣ್ ತಿವಾರಿ ಮತ್ತು ಸಂದೀಪ್ ಅರೆ ಎಂದು ಗುರುತಿಲಸಾಗಿದೆ. ಇಬ್ಬರು ಶಿಖರ ಏರಿದ ಸಂಭ್ರಮದಲ್ಲಿದ್ದರು. ತೀವ್ರ ದೇಹದ ಬಳಲಿಕೆಯನ್ನು ಹೊತ್ತಿದ್ದ ಇವರು ಕೆಳಕ್ಕಿಳಿಯುವ ವೇಳೆ ಮೃತಪಟ್ಟಿದ್ದಾರೆ ಎಂದು ನೇಪಾಳದ ಎಕ್ಸ್ಪೆಡಿಶನ್ ಆಪರೇಟರ್ಸ್ ಅಸೋಸಿಯೇಷನ್ನ ಪ್ರಧಾನ ಕಾರ್ಯದರ್ಶಿ ರಿಷಿ ಭಂಡಾರಿ ಹೇಳಿದ್ದಾರೆ.
ಅಧಿಕಾರಿ ರಿಷಿ ಭಂಡಾರಿ ಹೇಳಿದ್ದೇನು?
ರಿಷಿ ಭಂಡಾರಿ ಅವರ ಪ್ರಕಾರ ಬುಧವಾರ ಸಂದೀಪ್ ಅರೆ ಅವರು ಎತ್ತರದ ಶಿಖರವನ್ನು ತಲುಪಿದ್ದರು. ಇನ್ನು ಕುಮಾರ್ ತಿವಾರಿ ಗುರುವಾರ 8,848 ಮೀಟರ್ ಎತ್ತರದ ಮೌಂಟ್ ಎವರೆಸ್ಟ್ ಶಿಖರದ ತುತ್ತತುದಿ ತಲುಪಿದ್ದರು. ಇಬ್ಬರು ಶಿಖರ ತಲುಪಿದ್ದ ಸಂಭ್ರಮದ ಕ್ಷಣದಲ್ಲಿದ್ದರು. ಆದರೆ, ವಾಪಸ್ ಬರುವಾಗ ಅವರ ದೇಹ ಸಾಕಷ್ಟು ದಣಿದಿತ್ತು ಎಂದು ಹೇಳಿದ್ದಾರೆ.
ಅರುಣ್ ತಿವಾರಿ ಮತ್ತು ಸಂದೀಪ್ ಅವರ ಜೊತೆಗೆ ಶೆರ್ಫಾ ಗೈಡ್‌ಗಳು ಇದ್ದರು. ಇಬ್ಬರ ಜೀವವನ್ನು ಉಳಿಸಲು ಅವರು ಸಾಕಷ್ಟು ಪ್ರಯತ್ನ ಪಟ್ಟರು. ಶೇರ್ಪಾ ಗೈಡ್‌ಗಳು ಅವರನ್ನು 'ಬಾಲ್ಕನಿ' ಪ್ರದೇಶದಿಂದ ರಾತ್ರೋರಾತ್ರಿ ಸೌತ್ ಕೋಲ್ ವರೆಗೆ ರಕ್ಷಿಸಿ ಕರೆತಂದು ಜೀವ ಉಳಿಸಲು ಶ್ರಮಿಸಿದರು. ಅರುಣ್ ತಿವಾರಿಯನ್ನು ಪ್ರಸಿದ್ಧ 'ಹಿಲರಿ ಸ್ಟೆಪ್' ಮೃತಪಟ್ಟರು. ಇನ್ನು ಸಂದೀಪ್ ಅವರು ಕ್ಯಾಂಪ್ನಲ್ಲಿ ನಿಧನರಾದರು. ಕೊನೆಯ ಕ್ಷಣದವರೆಗೂ ಪ್ರಾಮಾಣಿಕವಾಗಿ ಪ್ರಯತ್ನ ಪಟ್ಟರು. ಆದರೆ, ಇಬ್ಬರ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ ಎಂದು ರಿಷಿ ಭಂಡಾರಿ ಹೇಳಿಕೊಂಡರು.
ಐವರು ನಿಧನ
ಮೌಂಟ್ ಎವರೆಸ್ಟ್ ಪರ್ವತಾರೋಹಣ ಹಂಗಾಮಿನಲ್ಲಿ ಮೌಂಟ್ ಎವರೆಸ್ಟ್ನ ಪರ್ವತಾರೋಹಣ ಆರಂಭವಾದ ದಿನದಿಂದ ಇಲ್ಲಿಯವರೆಗೂ ಮೃತಪಟ್ಟವರ ಸಂಖ್ಯೆ ಐದಕ್ಕೆ ಕೇರಿದೆ. ಇದಕ್ಕೂ ಮುನ್ನ ನೇಪಾಳ ಪರ್ವಾತರೋಹಿಗಳು ಮೃತಪಟ್ಟಿದ್ದರು. ಬುಧವಾರ ಒಂದೇ ದಿನ ನೇಪಾಳದ ಕಡೆಯಿಂದ 274 ಪರ್ವತಾರೋಹಿಗಳು ಮೌಂಟ್ ಎವರೆಸ್ಟ್ ಶಿಖರವನ್ನು ಯಶಸ್ವಿಯಾಗಿ ಏರಿ ಹೊಸ ಇತಿಹಾಸ ಸೃಷ್ಟಿಸಿದ್ದರು, (ಏಜೆನ್ಸೀಸ್).