2 Dead In Fire At Noida Building  
ದೇಶ

ನೋಯ್ಡಾದಲ್ಲಿ ಬೆಂಕಿ ಅವಘಡ; ಎಲೆಕ್ಟ್ರಿಕ್​ ಚಾರ್ಜಿಂಗ್​ ಕಿಡಿಯಿಂದ ಹೊತ್ತಿ ಉರಿದ ಕಟ್ಟಡ, ಇಬ್ಬರು ಸಾವು..Fire At Noida

ಪ್ರಮುಖ ಮುಖ್ಯಾಂಶಗಳು

  • ನೋಯ್ಡಾದ ಕಟ್ಟಡವೊಂದರಲ್ಲಿ ಕಾಣಿಸಿಕೊಂಡ ಬೆಂಕಿ, ಇಬ್ಬರು ಸಾವು
  • ಇವಿ ವಾಹನ ಚಾರ್ಜಿಂಗ್​ನಿಂದಾಗಿ ಇಡೀ ಕಟ್ಟಡಕ್ಕೆ ಆವರಿಸಿದ ಬೆಂಕಿ
  • ರಕ್ಷಣಾ ಸಿಬ್ಬಂದಿಯಿಂದ 50 ಕುಟುಂಬವನ್ನು ಸುರಕ್ಷಿತವಾಗಿ ಸ್ಥಳಾಂತೆರ
2 Dead In Fire At Noida Building : ಉತ್ತರ ಪ್ರದೇಶದ ಲಕ್ನೋದಲ್ಲಿ ಇತ್ತೀಚೆಗೆ ಅಗ್ನಿ ಅವಘಡ ಸಂಭವಿಸಿದ ಪರಿಣಾಮ 14ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಸದ್ಯ ಆ ಘಟನೆ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ನೋಯ್ಡಾದ ಮಾಮುರಾ ಗ್ರಾಮದಲ್ಲಿ ನಡೆದಿದೆ.ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದು, 50 ಮಂದಿಯನ್ನು ರಕ್ಷಿಸಲಾಗಿದೆ ಎನ್ನಲಾಗಿದೆ.
ನೋಯ್ಡಾದ ಮಾಮುರಾ ಗ್ರಾಮದ ಸೆಕ್ಟರ್ 66ರ ನೆಲಮಹಡಿಯ ಪಾರ್ಕಿಂಗ್ ಪ್ರದೇಶದಲ್ಲಿ ವಿದ್ಯುತ್ ವಾಹನವನ್ನು ಚಾರ್ಜ್ ಮಾಡುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದೆ. ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡ ಅಗ್ನಿಶಾಮಕ ದಳದ ತಂಡ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದವು. ಮನೆಯಲ್ಲೇ ಸಿಲುಕಿದ್ದ 50 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ ಎಂದು ರಕ್ಷಣಾ ಸಿಬ್ಬಂದಿ ಮಾಹಿತಿ ಹಂಚಿಕೊಂಡಿದ್ದಾರೆ.

ಪೊಲೀಸರು ಹೇಳಿದ್ದಿಷ್ಟು

ದೊಡ್ಡ ಪ್ರಮಾಣದಲ್ಲಿ ರಕ್ಷಣಾ ತಂಡವು ಸ್ಥಳಕ್ಕೆ ಬೆಂಕಿ ಆರಿಸುವ ಕೆಲಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವು. ಅವಘಡದಲ್ಲಿ ಹೊಗೆಯಿಂದ ಉಸಿರಾಟದ ತೊಂದರೆಗಳಿಂದ ಬಳಲುತ್ತಿದ್ದ ಒಬ್ಬ ಪುರುಷ ಮತ್ತು ಮಹಿಳೆಯನ್ನುಆಂಬ್ಯುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿದರು ಎಂದು ಗೌತಮ್ ಬುದ್ಧ ನಗರದ ಜಂಟಿ ಪೊಲೀಸ್ ಆಯುಕ್ತ ರಾಜೀವ್ ನಾರಾಯಣ್ ಹೇಳಿದರು.

ದೂರು ದಾಖಲು

ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನಿನ ವಿವಿಧ ಭಾಗದಡಿ ಎಫ್​ಐಆರ್​ ದಾಖಲಿಸಿಲಾಗಿದೆ. ಕಟ್ಟಡದ ಮಾಲೀಕ ಹಾಗೂ ಗುತ್ತಿಗೆ ದಾರರನ್ನು ಬಂಧಿಸಲಾಗಿದೆ ಎಂದು ರಾಜೀವ್ ನಾರಾಯಣ್ ಅವರು ಮಾಹಿತಿ ಹಂಚಿಕೊಂಡರು.
ವಿಡಿಯೋಗಳಲ್ಲಿ ಏನಿದೆ?
ಸದ್ಯ ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯ ಹೇಗಿದೆ ಹಾಗೂ ಬೆಂಕಿ ನಂದಿಸುವ ಕೆಲಸ ಹೇಗಾಗುತ್ತಿದೆ ಎನ್ನವ ಬಗ್ಗೆ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಒಂದು ಬಿಲ್ಡಿಂಗ್​ನಿಂದ ಮತ್ತೊಂದಕ್ಕೆ ದಪ್ಪನೆಯ ಕೋಲುಗಳನ್ನು ಹಾಕಿ ಸೇತುವೆಯಂತೆ ಮಾಡಿ ಒಬ್ಬೊಬ್ಬರನ್ನೇ ಸಾಗಿಸಲಾಗುತ್ತಿದೆ. ಬೆಂಕಿ ಹೊತ್ತಿಕೊಂಡಿರುವ ಕಟ್ಟಡದಿಂದ ದಟ್ಟ ಹೊಗೆ ಬರುತ್ತಿರುವುದು ವಿಡಿಯೋದಲ್ಲಿ ಇದೆ, (ಏಜೆನ್ಸೀಸ್).