ಸಾಂದರ್ಭಿಕ ಚಿತ್ರ 
ದೇಶ

17 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 19ರ ಯುವತಿ; ಮದುವೆಯಾಗುವಂತೆ ಒತ್ತಾಯ; ಪ್ರಕರಣ ದಾಖಲು | Girl

ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿ ಒನ್​ ಸೈಡ್​ ಲವ್ ಪ್ರಕರಣದಲ್ಲಿ 19 ವರ್ಷದ ಯುವತಿಯೊಬ್ಬಳು(Girl) 17 ವರ್ಷದ ಬಾಲಕನನ್ನು ಅಪಹರಿಸಿ, ಆತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಮದುವೆಯಾಗುಂತೆ ಒತ್ತಾಯಿಸಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಮುಂಬೈನ ಮನ್ಖುರ್ಡ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅದೇ ಪ್ರದೇಶದ ಸಾನಿಯಾ(19) ಎಂಬ ಯುವತಿ, ಪಕ್ಕದ ಬೀದಿ 17 ವರ್ಷದ ಬಾಲಕನನ್ನು ಒನ್​ಸೈಡ್ ಲವ್ ಮಾಡ್ತಿದ್ದಳು ಎನ್ನಲಾಗಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಯುವತಿ ಹುಡುಗನನ್ನು ತನ್ನ ಮನೆಗೆ ಕರೆದೊಯ್ದು ದೈಹಿಕ ಸಂಬಂಧಕ್ಕೆ ಒತ್ತಡ ಹೇರಿದ್ದು, ದೌರ್ಜನ್ಯ ಎಸಗಿದ್ದಾಳೆ ಎಂದು ಆರೋಪಿಸಲಾಗಿದೆ.
ಯಾರಿಗಾದ್ರೂ ಇಲ್ಲಿ ನಡೆದ ಘಟನೆ ಬಗ್ಗೆ ತಿಳಿಸಿದ್ರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹುಡುಗನಿಗೆ ಬೆದರಿಕೆ ಹಾಕಿದ್ದಳು ಆಗಸ್ಟ್ 2025 ರಿಂದ ಫೆಬ್ರವರಿ 2026 ರವರೆಗೆ ಹುಡುಗ ಮನೆಯಲ್ಲಿ ಒಬ್ಬಂಟಿಯಾಗಿರುವಾಗಲೆಲ್ಲಾ ಆತನ ಮೇಲೆ ದೌರ್ಜನ್ಯ ನಡೆಸಿದ್ದಾಳೆ. ಮತ್ತು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಳು ಎನ್ನಲಾಗಿದೆ.
ಬಾಲಕ ಆಕೆಯ ಹಿಡಿತದಿಂದ ಬಿಡಿಸಿಕೊಂಡು ಇಡೀ ಘಟನೆಯನ್ನು ತನ್ನ ಕುಟುಂಬ ಸದಸ್ಯರಿಗೆ ವಿವರಿಸಿದ ನಂತರ ವಿಷಯ ಬೆಳಕಿಗೆ ಬಂದಿದೆ. ಕುಟುಂಬವು ತಕ್ಷಣವೇ ಮನ್ಖುರ್ಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ಈ ದೂರಿನ ಆಧಾರದ ಮೇಲೆ 19 ವರ್ಷದ ಯುವತಿ  ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆ ಅಡಿ ಕೇಸ್ ದಾಖಲಾಗಿದೆ. ಯುವತಿ ನಾಪತ್ತೆಯಾಗಿದ್ದು, ಪೊಲೀಸರು ಆಕೆಯನ್ನು ಹುಡುಕುತ್ತಿದ್ದಾರೆ (ಏಜೆನ್ಸೀಸ್).