ಒಂದೂವರೆ ಶತಮಾನದಿಂದ ನಿರಂತರವಾಗಿ ದೇಶದ ಅಸಂಖ್ಯ ಜನರಿಗೆ ಕಡಿಮೆ ವೆಚ್ಚದ ಸೇವೆ ಒದಗಿಸುತ್ತಿರುವ ಭಾರತೀಯ ಅಂಚೆ ಇಲಾಖೆ, ಈಗ ಶರವೇಗದ ಸರ್ವೀಸ್ ಒದಗಿಸುವತ್ತ ದೃಷ್ಟಿ ಹರಿಸಿದೆ. ಆರು ತಿಂಗಳ ಹಿಂದೆ ಪರಿಚಯಿಸಿದ ‘24 ಹಾಗೂ 48 ಗಂಟೆಗಳ ಸ್ಪೀಡ್ಪೋಸ್ಟ್’ ಸೇವೆ ಗ್ರಾಹಕರ ಮನ ಗೆದ್ದಿದೆ. ದೇಶದ 6 ಮೆಟ್ರೋಪಾಲಿಟನ್ ಸಿಟಿಗಳಲ್ಲಿ (ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ, ಬೆಂಗಳೂರು ಹಾಗೂ ಹೈದರಾಬಾದ್) ಜಾರಿಗೊಳಿಸಿರುವ ಈ ಸೇವೆಯಡಿ 24 ಗಂಟೆಗಳಲ್ಲಿ ಪಾರ್ಸೆಲ್ ಅನ್ನು ಸಂಬಂಧಿಸಿದವರಿಗೆ ತಲುಪಿಸಲಾಗುತ್ತಿದೆ.
ಈ ಸೇವೆ ಮುಂಬೈ ಹಾಗೂ ಬೆಂಗಳೂರಿನಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಬುಕಿಂಗ್ ಮಾಡಿದ ಮರುದಿನವೇ ಸಂಬಂಧಿಸಿದವರಿಗೆ ವಸ್ತುವನ್ನು ತಲುಪಿಸಲಾಗುತ್ತಿದೆ. ಒಟಿಪಿ ಆಧರಿತ ಹಾಗೂ ವಿಳಂಬವಾದಲ್ಲಿ ಪೂರ್ಣ ಹಣ ಮರುಪಾವತಿಯುಳ್ಳ ಈ ಸೌಲಭ್ಯವು ಬೆಂಗಳೂರು ಅಂಚೆ ವೃತ್ತದ ವ್ಯಾಪ್ತಿಗೆ ಸೀಮಿತವಾಗಿದ್ದು, ನಿತ್ಯ ಸಾವಿರಾರು ಮಂದಿಗೆ ಕಾಗದಪತ್ರ ಸಹಿತ ಪಾರ್ಸೆಲ್ ಅನ್ನು ನಿಖರವಾಗಿ ತಲುಪಿಸಲಾಗುತ್ತಿದೆ. 48 ಗಂಟೆಗಳ ಸೇವೆಯಲ್ಲೂ ಬಲ್ಕ್ ರೂಪದಲ್ಲಿ ರವಾನಿಸುವವರು ಹೆಸರು ನೋಂದಾಯಿಸಿಕೊಂಡಲ್ಲಿ ರಿಯಾಯಿತಿ ದರದಲ್ಲಿ ಸೌಲಭ್ಯ ಸಿಗುತ್ತಿದೆ. ಈ ಸೇವೆಯು ಖಾಸಗಿ ಕಂಪನಿಗಳಿಗೆ ಸೆಡ್ಡು ಹೊಡೆಯುವಷ್ಟರ ಮಟ್ಟಿಗೆ ಜನಪ್ರಿಯವಾಗಿದೆ.
ಭಾರತೀಯ ಅಂಚೆ ಪೇಮೇಂಟ್ಸ್ ಬ್ಯಾಂಕ್ (ಐಪಿಪಿಬಿ) ‘ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ’ ಹೆಸರಿನಲ್ಲಿ ಗ್ರಾಹಕನಿರುವೆಡೆ ಬ್ಯಾಂಕಿಂಗ್ ವ್ಯವಹಾರದ ಸೇವೆ ಒದಗಿಸುತ್ತಿದೆ. ಬ್ಯಾಂಕ್ಗಳು ಇಲ್ಲದ ಸ್ಥಳಗಳಲ್ಲಿ ವಾಸವಿರುವ ಜನರಿಗೆ ಆರಂಭಿಸಲಾದ ಈ ಸೇವೆ ಈಗ ಹೆಚ್ಚು ಜನಪ್ರಿಯಗೊಂಡಿದೆ. ಡಿಜಿಟಲ್ ಸ್ವರೂಪ ಪಡೆದಿರುವ ಈ ಸೇವೆ ಗ್ರಾಮೀಣರಿಗೆ ತ್ವರಿತ ಹಣ ಸಿಗುವಂತೆ ಮಾಡಿದೆ. ಸಾಮಾಜಿಕ ಭದ್ರತಾ ವಲಯದ ಫಲಾನುಭವಿಗಳು, ಸಣ್ಣ ವ್ಯಾಪಾರಿಗಳು ಹಾಗೂ ವರ್ತಕರಿಗೆ ಪ್ರಯೋಜನವಾಗಿದೆ. ಅಲ್ಲದೆ ಹೊಸದಾಗಿ ಖಾತೆ ತೆರೆಯುವಿಕೆ, ಹಣ ವರ್ಗಾವಣೆ, ನಗದು ವಹಿವಾಟು, ವಿವಿಧ ಇಲಾಖೆಗಳ ಬಿಲ್ ಪಾವತಿ ಕೂಡ ಮಾಡಬಹುದಾಗಿದೆ.
ಸರ್ಕಾರದ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಮಾದರಿಯಲ್ಲೇ ಅಂಚೆ ಇಲಾಖೆ ತನ್ನ ಸೇವೆಗಳನ್ನು ಗ್ರಾಹಕರ ಮನೆಗಳಿಗೆ ತಲುಪಿಸಿ ಸೈ ಎನಿಸಿಕೊಂಡಿದೆ. ಅದರಲ್ಲೂ ಗ್ರಾಮೀಣ ಭಾಗದವರಿಗೆ ಆಪ್ತಮಿತ್ರನಾಗಿರುವ ಅಂಚೆಯಣ್ಣ ಈ ಸೇವೆ ಹಿಂದಿರುವ ರೂವಾರಿ. ಹೆಣ್ಣುಮಕ್ಕಳಿಗೆ ಮೀಸಲಾದ ‘ಸುಕನ್ಯಾ ಸಮೃದ್ಧಿ ಯೋಜನೆ’, ಕಿಸಾನ್ ವಿಕಾಸ್ ಪತ್ರ, ಪಬ್ಲಿಕ್ ಪ್ರಾವಿಡೆಂಟ್ ಫಂಡ್, ಮಾಸಿಕ ಆದಾಯ ಯೋಜನೆ, ಜೀವವಿಮೆ, ಹೆಸರಾಂತ ದೇಗುಲಗಳ ಪ್ರಸಾದ ರವಾನೆ ಸೇರಿ ಹದಿನಾರು ಸೇವೆಗಳು ಕಡಿಮೆ ಮೊತ್ತದ ಸೇವೆಗೆ ಗ್ರಾಹಕರು ಸಂತೃಪ್ತಿ ವ್ಯಕ್ತಪಡಿಸಿದ್ದಾರೆ.
ಅಂಚೆ ಸೇವೆಗಳಲ್ಲಿ ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ (ಎಇಪಿಎಸ್) ಅಡಿ ವೃದ್ಧರು, ಅಂಗವಿಕರು ಹಾಗೂ ದೂರದ ಸ್ಥಳಕ್ಕೆ ನಡೆದು ಹೋಗಲಾರದವರು ಒಂದು ಕರೆ ಮಾಡಿದರೆ ಅಂಚೆಯಣ್ಣ ಮನೆ ಬಾಗಿಲಿಗೆ ಹಣ ತಂದುಕೊಡುತ್ತಾನೆ. ಎಇಪಿಎಸ್ ಸೇವೆಯಲ್ಲಿ ವ್ಯಕ್ತಿಯ ಆಧಾರ್ ಲಿಂಕ್ ಆಗಿರುವ ವಿವಿಧ ಬ್ಯಾಂಕ್ ಖಾತೆಗಳಿಂದ ನಿತ್ಯ 10 ಸಾವಿರ ರೂ. ಡ್ರಾ ಮಾಡಿ ಪಡೆಯಬಹುದಾಗಿದೆ.
ಎಸ್ಬಿ ಉಳಿತಾಯ ಖಾತೆ
ರಾಷ್ಟ್ರೀಯ ಉಳಿತಾಯ ಟೈಮ್ ಡಿಪಾಸಿಟ್ ಖಾತೆ -ಠಿ;ಹಿರಿಯ ನಾಗರಿಕರ ಉಳಿತಾಯ ಖಾತೆ
ಸುಕನ್ಯಾ ಸಮೃದ್ಧಿ ಯೋಜನೆ -ಠಿ;ಮಹಿಳಾ ಸಮ್ಮಾನ್ ಉಳಿತಾಯ ಪತ್ರ -ಠಿ;ರಾಷ್ಟ್ರೀಯ ಉಳಿತಾಯ ರಿಕರಿಂಗ್ ಡಿಪಾಸಿಟ್ ಖಾತೆ
ಮಾಸಿಕ ಉಳಿತಾಯ ಖಾತೆ (ಎಂಐಎಸ್)