Tamil Nadu firecracker factory Blast
- ತಮಿಳುನಾಡಿನ ವಿರುಧನಗರದಲ್ಲಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ
- ಕಾರ್ಖಾನೆಯಲ್ಲಿದ್ದ 13ಮಂದಿ ಕಾರ್ಮಿಕರು ಸಜೀವ ದಹನ, ಆರು ಮಂದಿ ಸ್ಥಿತಿ ಗಂಭೀರ
- ಸಿಎಂ ಸ್ಟಾಲಿನ್ನಿಂದ ಸಂತಾಪ ಸೂಚಿಸಿ, ಎಕ್ಸ್ನಲ್ಲಿ ಪೋಸ್ಟ್
ತಮಿಳುನಾಡು: ಇಲ್ಲಿನ ವಿರುಧನಗರದಲ್ಲಿರುವ 4 ಪಟಾಕಿ ಉತ್ಪಾದನ ಘಟಕದಲ್ಲಿ ಭೀಕರ ಸ್ಫೋಟ(Tamil Nadu firecracker factory Blast) ಸಂಭವಿಸಿದೆ. ಕಾರ್ಖಾನೆಯಲ್ಲಿದ್ದ 13 ಜನ ಕಾರ್ಮಿಕರು ಸಜೀವ ದಹನಗೊಂಡಿದ್ದು, ಆರು ಮಂದಿಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ವಿಧುರನಗರ ಜಿಲ್ಲೆಯಲ್ಲಿನ ಕಟ್ಟನಾರಪಟ್ಟಿ ಗ್ರಾಮದಲ್ಲಿರುವ ನಾಲ್ಕು ಪಟಾಕಿ ಉತ್ಪಾದನಾ ಘಟಕಗಳಲ್ಲಿ ಸ್ಫೋಟ ಸಂಭವಿಸಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡ ಧಾವಿಸಿದ್ದು, ಜೆಸಿಬಿ ಯಂತ್ರಗಳ ಸಹಾಯದಿಂದ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿವೆ.
ಆರು ಮಂದಿ ಆಸ್ಪತ್ರೆಗೆ ಸ್ಥಳಾಂತರ
ಗಂಭೀರ ಗಾಯಗೊಂಡ ಆರು ಜನ ಕಾರ್ಮಿಕರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವಶೇಷಗಳ ಅಡಿಯಲ್ಲಿ ಇನ್ನೂ ಕಾರ್ಮಿಕರು ಸಿಲುಕಿರುವ ಆತಂಕವಿರುವುದರಿಂದ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಎಂಕೆ ಸ್ಟಾಲಿನ್ ಪೋಸ್ಟ್
ಪಟಾಕಿ ಸ್ಫೋಟದ ಬಗ್ಗೆ ಎಂಕೆ ಸ್ಟಾಲಿನ್ (MK Stalin)ಅವರು ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಭೀಕರ ಸ್ಫೋಟದಲ್ಲಿ ಮೃತಪಟ್ಟ ಕುಟಂಬಕ್ಕೆ ಸಂತಾಪ ಸೂಚಿಸುತ್ತೇನೆ. ರಕ್ಷಣಾ ಕಾರ್ಯಾಚರಣೆ ತ್ವರಿತಗೊಳಿಸಲು ಸೂಚನೆ ನೀಡಿದ್ದೇನೆ. ಸಚಿವರಾದ ಕೆಕೆಎಸ್ಎಸ್ಆರ್ ರಾಮಚಂದ್ರನ್ ಮತ್ತು ತಂಗಮ್ ತೆನ್ನರಸು ಅವರಿಗೆ ಮೇಲ್ವಿಚಾರಣೆ ನಡೆದಲು ಆದೇಶಿಸಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಲು ವಿನಂತಿಸಿಕೊಂಡಿದ್ದೇನೆ. ಜಿಲ್ಲಾಧಿಕಾರಿಗೂ ಕರೆ ಮಾಡಿ, ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲ ವೈದ್ಯಕೀಯ ವ್ಯವಸ್ಥೆ ನೀಡಲು ಆದೇಶಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.
2025-26ನೇ ಸಾಲಿನಲ್ಲಿ ತಮಿಳುನಾಡಲ್ಲಿ ಸಂಭವಿಸಿದ ಪಟಾಕಿ ಸ್ಫೋಟಗಳು
ತಮಿಳು ನಾಡು ಮತ್ತು ಹೊಸೂರು ಬಾರ್ಡರ್ನಲ್ಲಿ ಆಗಾಗ್ಗೆ ಪಟಾಕಿ ಸ್ಫೋಟ ಪ್ರಕರಣಗಳು ನಡೆಯುತ್ತಿರುತ್ತದೆ.
- 2026ರ ಏಪ್ರಿಲ್ 13ರಲ್ಲಿ ವಿರುಧನಗರದ ಮದತ್ ಪಟ್ಟಿಯಲ್ಲಿ ಎಕ್ಸಲ್ ಫೈರ್ ವರ್ಕ್ನಲ್ಲಿ ಸ್ಫೋಟ ಸಂಭವಿಸಿತ್ತು.
- 2024 ಫೆಬ್ರವರಿ 17ರಂದು ತಮಿಳುನಾಡಿನ ವಿರುಧುನಗರ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ, ಹತ್ತು ಜನರು ಮೃತಪಟ್ಟಿದ್ದರು.
- ಫೆಬ್ರವರಿ 2025ರಲ್ಲಿ ಧರ್ಮಪುರಿ ಜಿಲ್ಲೆಯ ಕಂಬನಲ್ಲೂರಿನಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ 3 ಮಹಿಳಾ ಕಾರ್ಮಿಕರು ಮೃತಪಟ್ಟರು.
- ಜುಲೈ 2025ರಲ್ಲಿ ವಿರುದುನಗರ ಜಿಲ್ಲೆಯ ಕೀಲ ತೈಲಪಟ್ಟಿಯಲ್ಲಿ ನಡೆದ ಸ್ಫೋಟದಲ್ಲಿ ಒಬ್ಬ ಕಾರ್ಮಿಕ ಸಾವನ್ನಪ್ಪಿದ್ದು, ಹಲವಾರು ಶೆಡ್‌ಗಳು ನಾಶವಾದವು.
- ಆಗಸ್ಟ್ 2025ರಲ್ಲಿಯೂ ನಡೆದಿತ್ತು.
- 2024ರಲ್ಲಿ ಹೊಸೂರಿನ ಬಳಿ ಪಟಾಕಿ ಶೇಖರಿಸಿಟ್ಟ ಮಳಿಗೆಯಲ್ಲಿ ಸ್ಫೋಟಗೊಂಡು 22 ಮಂದಿ ಯುವಕರು ಮೃತಪಟ್ಟಿದ್ದ ಘಟನ ಮನಕಲಕುವಂತೆ ಮಾಡಿತ್ತು. (ಏಜೆನ್ಸೀಸ್)