16 Delhi Metro Stations Shut Over Security Concern
- ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ, ಇಬ್ಬರು ಎಸಿಪಿಗಳು ಮತ್ತು ನಾಲ್ವರು ಪೊಲೀಸ್ ಸಿಬ್ಬಂದಿಗೆ ಗಾಯ
- ಭದ್ರತಾ ದೃಷ್ಟಿಯಿಂದ ದೆಹಲಿಯ 16 ಮೆಟ್ರೋ ನಿಲ್ದಾಣ ಸಂಚಾರ ಸ್ಥಗಿತ ಎಂದ ದೆಹಲಿ ಮೆಟ್ರೋ ರೈಲು ನಿಗಮ
- ರಾಜೀವ್ ಚೌಕ್, ಸೆಂಟ್ರಲ್ ಸೆಕ್ರೆಟರಿಯೇಟ್, ಲೋಕ ಕಲ್ಯಾಣ್ ಮಾರ್ಗ ಸೇರಿದಂತೆ 16 ಮೆಟ್ರೋ ನಿಲ್ದಾಣ ಸೇವೆ ಸ್ಥಗಿತ
16 Delhi Metro Stations Shut Over Security Concern: ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ ನಡೆಸುತ್ತಿರುವ ಜಂತರ್ ಮಂತರ್‌ನಲ್ಲಿ ಬುಧವಾರ ರಾತ್ರಿ ಮತ್ತೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ಸಂಭವಿಸಿದ ಹಿನ್ನೆಲೆ, ದೆಹಲಿಯ 16 ಮೆಟ್ರೋ ನಿಲ್ದಾಣಗಳನ್ನು ಸತತ ಎರಡನೇ ದಿನವೂ ಸಾರ್ವಜನಿಕ ಸಂಚಾರಕ್ಕೆ ಸಂಪೂರ್ಣವಾಗಿ ಮುಚ್ಚಲಾಗಿದೆ ಎಂದು ದೆಹಲಿ ಮೆಟ್ರೋ ರೈಲು ನಿಗಮವು(DMRC)ತಿಳಿಸಿದೆ.
ಯಾವ್ಯಾವ ಮೆಟ್ರೋ ನಿಲ್ದಾಣ ಕ್ಲೋಸ್?
ಸಿಜೆಪಿ ಪ್ರತಿಭಟನೆಯಿಂದಾಗಿ ರಾಜೀವ್ ಚೌಕ್, ಸೆಂಟ್ರಲ್ ಸೆಕ್ರೆಟರಿಯೇಟ್, ಲೋಕ ಕಲ್ಯಾಣ್ ಮಾರ್ಗ, ಜನಪಥ್, ಮಂಡಿ ಹೌಸ್, ಸೇವಾ ತೀರ್ಥ, ಸುಪ್ರೀಂ ಕೋರ್ಟ್, ಪಟೇಲ್ ಚೌಕ್, ಐಟಿಒ ಮತ್ತು ಇತರ ಏಳು ದೆಹಲಿ ಮೆಟ್ರೋ ನಿಲ್ದಾಣಗಳನ್ನು ಭದ್ರತಾ ಕಾರಣಗಳಿಗಾಗಿ ಮುಚ್ಚಲಾಗಿದೆ ಎಂದು ಡಿಎಂಆರ್‌ಸಿ ತಿಳಿಸಿದೆ.
ಯಾವ್ಯಾವ ಮೆಟ್ರೋ ಮಾರ್ಗ ಸಂಚಾರಕ್ಕೆ ಲಭ್ಯ
ಪ್ರಯಾಣಿಕರು ಶಾಲಾ-ಕಾಲೇಜು ಹಾಗೂ ಕಚೇರಿಗಳಿಗೆ ತೆರಳಬೇಕಾಗಿರುವುದನ್ನು ಗಮನದಲ್ಲಿಟ್ಟುಕೊಂಡಿರುವ ಸರ್ಕಾರ ಮಂಡಿ ಹೌಸ್ ಮತ್ತು ಸೆಂಟ್ರಲ್ ಸೆಕ್ರೆಟರಿಯೇಟ್‌ನಲ್ಲಿ ಇಂಟರ್ಚೇಂಜ್ ಸೌಲಭ್ಯಗಳು ಲಭ್ಯವಿದೆ. ಮುಂದಿನ ಸೂಚನೆಗಳವರೆಗೆ 16 ಮೆಟ್ರೋ ನಿಲ್ದಾಣಗಳು ಮುಚ್ಚಲ್ಪಡುತ್ತವೆ ಎನ್ನಲಾಗಿದೆ.
ಮತ್ತೆ ಭುಗಿಲೆದ್ದ ಆಕ್ರೋಶ
ಜಂತರ್ ಮಂತರ್‌ನಲ್ಲಿ ಬುಧವಾರ ರಾತ್ರಿ ಮತ್ತೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ಸಂಭವಿಸಿದೆ. ಸಂಜೆ 4.30ರ ವೇಳೆಗೆ ಟಾಲ್‌ಸ್ಟಾಯ್ ಮಾರ್ಗದ ಬಳಿ ಮೊದಲ ಘಟನೆ ವರದಿಯಾಗಿದೆ, ನಂತರ ರಾತ್ರಿ 8.30 ಮತ್ತು 9 ಗಂಟೆ ಸುಮಾರಿಗೆ ಇನ್ನೂ ಎರಡು ಘಟನೆಗಳು ನಡೆದಿವೆ. ಕೆಲವರು ಪೊಲೀಸರಿಂದ ಲಾಠಿಗಳನ್ನು ಕಸಿದುಕೊಂಡು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅದೇ ವೇಳೆ ಇತರ ಸ್ಥಳಗಳಲ್ಲಿ ಕಲ್ಲು ತೂರಾಟ ನಡೆದ ಬಗ್ಗೆ ವರದಿಯಾಗಿದೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸಿಡಿಸಿ, ಲಾಠಿ ಪ್ರಹಾರ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಂತರ್‌ಮಂತರ್‌ನಲ್ಲಿ ಉದ್ವಿಗ್ನತೆ ತೀವ್ರಗೊಂಡಿತ್ತು. ಕೆಲವರು ಕತ್ತಿಗಳು ಮತ್ತು ಖುಕ್ರಿಗಳಿಂದಲೂ ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಘರ್ಷಣೆ ಆರಂಭವಾಗುತ್ತಿದ್ದಂತೆ ಇನ್ನೂ ಹೆಚ್ಚಿನ ಸಂಖ್ಯೆಯ ಪ್ರತಿಭಟನಾಕಾರರು ಸ್ಥಳದಲ್ಲಿ ಜಮಾಯಿಸಿದ್ದಾರೆ ಎಂದು ತಿಳಿದು ಬಂದಿದೆ.
6 ಪೊಲೀಸರಿಗೆ ಗಾಯ
ಘರ್ಷಣೆ ವೇಳೆ ಕಲ್ಲು ತೂರಾಟದಲ್ಲಿ ಇಬ್ಬರು ಎಸಿಪಿಗಳು ಮತ್ತು ನಾಲ್ವರು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ. ಸಿಜೆಪಿ ಪ್ರತಿಭಟನಾಕಾರರು ಯಾರ ಮಾತನ್ನೂ ಕೇಳುತ್ತಿಲ್ಲ, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದಾರೆ. ಪಂಜಾಬಿ ಬಾಗ್ ನಲ್ಲಿನಿಯೋಜಿತರಾಗಿದ್ದ ಎಸಿಪಿ ಪ್ರಕಾಶ್ ಹಣೆಗೆ ಪೊಲೀಸರು ತಿಳಿಸಿದ್ದಾರೆ.
ಇಂಟರ್ನೆಟ್ ಸ್ಥಗಿತ
ಘರ್ಷಣೆ ತೀವ್ರಗೊಂಡ ಹಿನ್ನೆಲೆಯಲ್ಲಿ ಜಂತರ್ ಮಂತರ್ ಪ್ರದೇಶ ಹಾಗೂ ಸುತ್ತಮುತ್ತಲಿನ ಕೆಲವು ಪ್ರದೇಶಗಳಲ್ಲಿ ಜಾಮರ್‌ಗಳನ್ನು ಆನ್ ಮಾಡುವ ಮೂಲಕ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹೆಚ್ಚುವರಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ, (ಏಜೆನ್ಸೀಸ್).