ದೇಶ

ಜೈಲು ಸಿಬ್ಬಂದಿ ಮೇಲೆ ಹಲ್ಲೆಗೈದು ಜೈಲಿನಿಂದ ಪರಾರಿಯಾದ 17 ಕೈದಿಗಳ ಪೈಕಿ 13 ಮಂದಿ ಮತ್ತೆ ಬಂಧನ: 9 ಸಿಬ್ಬಂದಿ ಅಮಾನತು | jail

ಸೋಮವಾರ ರಾತ್ರಿ ತಮಿಳುನಾಡಿನ ಥೇಣಿ ಜಿಲ್ಲಾ ಕಾರಾಗೃಹದಿಂದ ಜೈಲು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ 17 ಮಂದಿ ರಿಮಾಂಡ್ ಕೈದಿಗಳಲ್ಲಿ 13 ಮಂದಿಯನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ. ಮತ್ತು ಉಳಿದ ನಾಲ್ವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ವರದಿಯಾಗಿದೆ.

ಚೆನ್ನೈ: ಸೋಮವಾರ ರಾತ್ರಿ ತಮಿಳುನಾಡಿನ ಥೇಣಿ ಜಿಲ್ಲಾ ಕಾರಾಗೃಹದಿಂದ ಜೈಲು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ 17 ಮಂದಿ ರಿಮಾಂಡ್ ಕೈದಿಗಳಲ್ಲಿ 13 ಮಂದಿಯನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ. ಮತ್ತು ಉಳಿದ ನಾಲ್ವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ವರದಿಯಾಗಿದೆ.

ಕೈದಿಗಳ ಪರಾರಿಯಂತಹ ಘಟನೆಯ ಬಳಿಕ ಒಂಬತ್ತು ಜೈಲು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ತನಿಖೆಯ ಭಾಗವಾಗಿ ಜೈಲು ಡಿಜಿಪಿ ಸಂದೀಪ್ ರೈ ರಾಥೋಡ್ ಜಿಲ್ಲಾ ಜೈಲಿಗೆ ಭೇಟಿ ನೀಡಿದ್ದಾರೆ. ಇನ್ನೂ ನಾಪತ್ತೆಯಾಗಿರುವ ಕೈದಿಗಳನ್ನು ಪತ್ತೆಹಚ್ಚಲು ವಿಶೇಷ ಪೊಲೀಸ್ ತಂಡಗಳು ಮತ್ತು ಡ್ರೋನ್‌ಗಳನ್ನು ನಿಯೋಜಿಸಲಾಗಿದೆ.

ಕೈದಿಗಳ ಮತ್ತೆ ಬಂಧನ ಕುರಿತು ಮಾಹಿತಿ ನೀಡಿರುವ ಜೈಲು ಡಿಜಿಪಿ ಸಂದೀಪ್ ರೈ ರಾಥೋಡ್, ಇಲ್ಲಿಯವರೆಗೆ 13 ಜನರನ್ನು ಬಂಧಿಸಲಾಗಿದೆ. ಒಂಬತ್ತು ಜೈಲು ಇಲಾಖೆಯ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ತಪ್ಪಿಸಿಕೊಂಡ ಕೈದಿಗಳನ್ನು ಬಂಧಿಸುವ ಪ್ರಯತ್ನಗಳಲ್ಲಿ ಪೊಲೀಸರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಪರಾರಿಯಾದ ಘಟನೆ ನಡೆದಿದ್ದು, ಮೂರನೇ ಬ್ಲಾಕ್‌ನಲ್ಲಿರುವ ಕೈದಿ ಮೂರ್ಛೆ ರೋಗದಿಂದ ಬಿದ್ದಿದ್ದಾನೆ ಎಂದು ಕೆಲವು ಕೈದಿಗಳು ಸಿಬ್ಬಂದಿಗೆ ತಿಳಿಸಿದ್ದಾರೆ. ಈ ವೇಳೆ ಪ್ಯಾರಾಗಾರ್ಡ್ ಪ್ರಭು ಕೈದಿಯನ್ನು ಪರೀಕ್ಷಿಸಲು ಹೋದಾಗ, 17 ಕೈದಿಗಳು ಆತನ ಮೇಲೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.

ನಂತರ ಕೈದಿಗಳು ಮುಖ್ಯ ದ್ವಾರದಲ್ಲಿ ಕಾವಲುಗಾರರಿಂದ ಕೀಲಿಗಳನ್ನು ಕಸಿದುಕೊಂಡು, ಪ್ರವೇಶದ್ವಾರವನ್ನು ತೆರೆದು ಪರಾರಿಯಾಗಿದ್ದಾರೆ. ಪ್ರಭು ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಜೈಲು ಸಿಬ್ಬಂದಿ ಸ್ಟಾಲಿನ್ ಪ್ರಭು, ಮದನಮೋಹನ್ ಮತ್ತು ತಂಗಪಾಂಡಿ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಪರಾರಿಯಾಗಿರುವ 17 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ (ಏಜೆನ್ಸೀಸ್).