Kidnaps 9 Month Old Girlಸಾಂದರ್ಭಿಕ ಚಿತ್ರ
ಉತ್ತರ ಪ್ರದೇಶ: ತಾಯಿಯ ಪಕ್ಕದಲ್ಲಿ ಸುರಕ್ಷಿತವಾಗಿ ಮಲಗಿದ್ದ ಒಂಬತ್ತು ತಿಂಗಳ ಹೆಣ್ಣು ಮಗುವನ್ನು 12 ವರ್ಷದ ಅಪ್ರಾಪ್ತ ಬಾಲಕನೊಬ್ಬ (Kidnaps 9 Month Old Girl) ಅಪಹರಿಸಿ, ಅತ್ಯಾಚಾರ ಎಸಗಿರುವ ಅಮಾನುಷ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದ್ದು, ಇಡೀ ಮನುಕುಲವೇ ತಲೆತಗ್ಗಿಸುವಂತೆ ಮಾಡಿದೆ.
ಘಟನೆಯ ಹಿನ್ನೆಲೆ
ಪೊಲೀಸ್ ಮೂಲಗಳ ಪ್ರಕಾರ, ಈ ಘಟನೆಯು ಶನಿವಾರ (ಜೂ.20) ರಂದು ನಡೆದಿದೆ. ತಾಯಿಯೊಬ್ಬಳು ತನ್ನ 9 ತಿಂಗಳ ಹೆಣ್ಣು ಮಗುವನ್ನು ಪಕ್ಕದಲ್ಲಿ ಮಲಗಿಸಿಕೊಂಡಿದ್ದಳು. ತಡರಾತ್ರಿ ಎಲ್ಲರೂ ಗಾಢ ನಿದ್ರೆಯಲ್ಲಿದ್ದಾಗ ಅಲ್ಲಿನ ನಿವಾಸಿ 12 ವರ್ಷದ ಬಾಲಕನೊಬ್ಬ ಮನೆಗೆ ನುಗ್ಗಿದ್ದು, ಮಗುವನ್ನು ಯಾರಿಗೂ ತಿಳಿಯದಂತೆ ಎತ್ತುಕೊಂಡು ನಿರ್ಜನ ಪ್ರದೇಶಕ್ಕೆ ತೆರಳಿ ಅತ್ಯಚಾರ ಎಸಗಿರುವುದಾಗಿ ತಿಳಿದುಬಂದಿದೆ.
ಬೆಳಕಿಗೆ ಬಂದಿದ್ದು ಹೇಗೆ?
ಬೆಳಿಗ್ಗೆ ನಿದ್ರೆಯಿಂದ ಎದ್ದ ತಾಯಿ ಪಕ್ಕದಲ್ಲಿ ಮಗು ಇಲ್ಲದಿರುವುದನ್ನು ಕಂಡಾಗ ಆತಂಕ ಶುರುವಾಗಿದೆ. ಆದಾಗ್ಯೂ, ಗಾಬರಿಗೊಂಡ ಕುಟುಂಬಸ್ಥರು ನೆರೆಹೊರೆಯವರ ಜೊತೆ ಸೇರಿ ಮಗುವನ್ನು ಹುಡುಕಲು ಆರಂಭಿಸಿದಾಗ, ಮನೆಯಿಂದ 500 ಮೀ ದೂರದಲ್ಲಿರುವ ನಿರ್ಜನ ಪ್ರದೇಶದಲ್ಲಿ ಮಗು ತೀವ್ರ ರಕ್ತಸ್ರಾವದಿಂದ ಅಳುತ್ತಿರುವುದನ್ನು ಗಮನಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸದ್ಯ ಇದೀಗ ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದು, ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಪೊಲೀಸ್ ವಿಚಾರಣೆಯಲ್ಲಿ ಬಯಲಾದ ಕಹಿ ಸತ್ಯ!
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿದ್ದು, 12 ವರ್ಷದ ಅಪ್ರಾಪ್ತ ಬಾಲಕ ಈ ಕೃತ್ಯ ಎಸಗಿದ್ದಾನೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಆದಾಗ್ಯೂ, ಮದ್ಯದ ಅಮಲಿನಲ್ಲಿದ್ದ ಬಾಲಕ ತನ್ನ ಮೊಬೈಲ್ನಲ್ಲಿ ದೀರ್ಘಕಾಲ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದ್ದಾನೆ. ಅವುಗಳ ಅತಿಯಾದ ಪ್ರಭಾವದಿಂದಾಗಿ ವಿಕೃತ ಮನಸ್ಸು ಜಾಗೃತಗೊಂಡಿದ್ದು, ಈ ಕೃತ್ಯ ಎಸಗಿದ್ದಾನೆ ಎಂದು ಹೇಳಿದ್ದಾರೆ.
ತಂತ್ರಜ್ಞಾನದ ದುರುಪಯೋಗ ಮತ್ತು ಬಾಲಾಪರಾಧ
ಬಾಲಕನ ಈ ಹೇಳಿಕೆಯು ಇಂದಿನ ಸಮಾಜದಲ್ಲಿ ಮೊಬೈಲ್ ಮತ್ತು ಇಂಟರ್ನೆಟ್‌ನ ಅತಿಯಾದ ದುರುಪಯೋಗ ಯಾವ ಮಟ್ಟಕ್ಕೆ ತಲುಪಿದೆ ಎಂಬುದಕ್ಕೆ ಕನ್ನಡಿ ಹಿಡಿದಿದೆ. ವಯಸ್ಸಿಗೆ ಮೀರಿದ ಕಂಟೆಂಟ್‌ಗಳು ಅತ್ಯಂತ ಸುಲಭವಾಗಿ ಲಭ್ಯವಾಗುತ್ತಿರುವುದು ಹಾಗೂ ಅಪ್ರಾಪ್ತರಲ್ಲಿ ನೈತಿಕತೆಯ ಕೊರತೆ ಉಂಟಾಗುತ್ತಿರುವುದು ಇಂತಹ ಭೀಕರ ದುರಂತಗಳಿಗೆ ಕಾರಣವಾಗುತ್ತಿದೆ ಎಂದು ಸಮಾಜಶಾಸ್ತ್ರಜ್ಞರು ಮತ್ತು ಮನಶ್ಶಾಸ್ತ್ರಜ್ಞರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ (ಏಜೆನ್ಸೀಸ್).