ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು 
ದೇಶ

ಸಂಸತ್​ನಲ್ಲಿ ಮಹಿಳಾ ಮೀಸಲಾತಿ ಸೇರಿ ಮೂರು ಮಸೂದೆಗಳ ಕುರಿತು ಚರ್ಚೆಗೆ 12 ಗಂಟೆ ನಿಗದಿ; ನಾಳೆ ಸಂಜೆ 4 ಗಂಟೆಗೆ ಮತದಾನ; ಕಿರಣ್ ರಿಜಿಜು | Kiren Rijiju

ನವದೆಹಲಿ: ಇಂದಿನಿಂದ ಆರಂಭವಾಗಿರುವ ವಿಶೇಷ ಸಂಸತ್ ಅಧಿವೇಶನದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಸೇರಿ ಮೂರು ಮಸೂದೆಗಳನ್ನು ಮಂಡಿಸಿದ್ದು, ಅವುಗಳ ಚರ್ಚೆಗೆ 12 ಗಂಟೆ ಸಮಯ ನಿಗದಿ ಮಾಡಿದ್ದು, ನಾಳೆ ಸಂಜೆ 4 ಗಂಟೆಗೆ ಮತದಾನ ನಡೆಯಲಿದೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು(Kiren Rijiju) ಹೇಳಿದ್ದಾರೆ.
ಸಂಸತ್ ವಿಶೇಷ ಅಧಿವೇಶನದಲ್ಲಿ ಲೋಕಸಭೆ & ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಜಾರಿಗೆ ತರುವ ಮಸೂದೆ, ಕ್ಷೇತ್ರ ಪುರ್ನವಿಂಗಡೆ ಪ್ರಕ್ರಿಯೆ ಕಾಯ್ದೆ ಸೇರಿ ಮೂರು ಮಸೂದೆಗಳನ್ನು ಮಂಡಿಸಿದ್ದು, 131ನೇ ಸಾಂವಿಧಾನಿಕ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಕಿರಣ್ ರಿಜಿಜು, ಪ್ರಮುಖ ಮಸೂದೆಗಳ ಕುರಿತು ಸದನವು 12 ಗಂಟೆಗಳ ಕಾಲ ಚರ್ಚೆ ಮಾಡಲು ಸಮಯದ ನಿಗದಿ ಮಾಡಲಾಗಿದೆ. ಸದಸ್ಯರು ಹೆಚ್ಚಿನ ಸಮಯಕ್ಕೆ ಬೇಡಿಕೆ ಇಟ್ಟರೆ ಅದನ್ನು 18 ಗಂಟೆಗಳವರೆಗೆ ಸ್ಪೀಕರ್ ಅವರು ವಿಸ್ತರಿಸುವ ಸಾಧ್ಯತೆಯಿದೆ. ಮಧ್ಯರಾತ್ರಿಯವರೆಗೂ ಸಂಸತ್ ನಡೆಯಲಿದೆ. ನಾಳೆ ಸಂಜೆ 4 ಗಂಟೆಗೆ ಮಸೂದೆಗಳ ಅಂಗೀಕಾರಕ್ಕೆ ಮತದಾನ ನಡೆಯಲಿದೆ ಎಂದು ತಿಳಿಸಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆ ತಿದ್ದುಪಡಿ ಮಾಡಲು ಮತ್ತು ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆ ಆಯೋಗವನ್ನು ಸ್ಥಾಪಿಸಲು ಲೋಕಸಭೆಯಲ್ಲಿ ಕೇಂದ್ರ ಸಚಿವರಾದ ಅರ್ಜುನ್ ರಾಮ್ ಮೇಘವಾಲ್ ಮತ್ತು ಅಮಿತ್ ಶಾ ಮೂರು ಮಸೂದೆಗಳನ್ನು ಮಂಡಿಸಿದರು. ಮೂರು ಮಸೂದೆಗಳನ್ನು ವಿಪಕ್ಷಗಳು ಎಂದು ಕರೆದವು.
ಲೋಕಸಭೆ ಸ್ಥಾನಗಳನ್ನು 543ರಿಂದ 850ಕ್ಕೆ ಹೆಚ್ಚಿಸುವ ಸಂವಿಧಾನದ 131ನೇ ತಿದ್ದುಪಡಿ ಮಸೂದೆ-2026 ಅನ್ನು ಮಂಡಿಸಲು ಲೋಕಸಭೆ ಅನುಮತಿ ನೀಡಿತು. ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಲು ವಿಪಕ್ಷಗಳು ಮತಗಳಿಗೆ ಹಾಕಲು ಒತ್ತಾಯಿಸಿದಾಗ 207 ಸಂಸದರು ಮಸೂದೆ ಪರ ಹಾಕಿದ್ರೆ, 126 ಸದಸ್ಯರು ವಿರುದ್ಧವಾಗಿ ಹಾಕಿದ್ದಾರೆ. ಒಟ್ಟು 86 ಎನ್​ಡಿಎ ಸದಸ್ಯರು ಸದನದಲ್ಲಿ ಗೈರಾಗಿದ್ದರು ಎನ್ನಲಾಗಿದೆ (ಏಜೆನ್ಸೀಸ್).