Dead Lizard Found In Birthday Cake 
ದೇಶ

ಬರ್ತಡೇ ಕೇಕ್​ನಲ್ಲಿತ್ತು ಹಲ್ಲಿಯ ಮೃತದೇಹ; ಅರಿಯದೇ ತಿಂದ 11 ಮಂದಿ ಆಸ್ಪತ್ರೆ ಪಾಲು..Maharashtra

ಪ್ರಮುಖ ಮುಖ್ಯಾಂಶಗಳು

  • ಕೇಕ್​ನಲ್ಲಿತ್ತು ಹಲ್ಲಿ ಮೃತದೇಹ, 11 ಜನ ಬರ್ತಡೇ ಕೇಕ್ ತಿಂದು ಆಸ್ಪತ್ರೆ ಪಾಲು
  • ಮುಂಬೈನಲ್ಲಿ ಆಹಾರ ಸುರಕ್ಷತೆ ಬಗ್ಗೆ ರೇಡ್​ ನಡೆಯುತ್ತಿರುವ ಮಧ್ಯೆ ಈ ಘಟನೆ
  • ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿರುವ ನಲಸೋಪಾರ ಎನ್ನುವ ಗ್ರಾಮದಲ್ಲಿ ಘಟನೆ

ಮುಂಬೈ:  ಹುಟ್ಟು ಹಬ್ಬ ಎಂದರೆ ಅದೊಂದು ಸಂಭ್ರಮ, ಹೊಸ ಬಟ್ಟೆ ಖರೀದಿ, ದೇವಸ್ಥಾನಕ್ಕೆ ಭೇಟಿ, ದಿನಪೂರ್ತಿ ಗೆಳೆಯ ಮತ್ತು ಗೆಳೆತಿಯರಿಂದ ಕೇಳಿ ಬರುವ ಶುಭಾಷಯಕ್ಕೆ ಉತ್ತರಿಸುವುದು. ಕೊನೆಗೇ ಕೇಕ್​ ಕತ್ತರಿಸುವುದು ಎಲ್ಲವೂ ಒಂದು ಸಡಗರ ಸಂಭ್ರಮ. ಆದರೆ..ಇಂತಹ ಸಂತೋಷದ ಸಮಯವು ವಿಷಕಾರಿಯಾಗಿ ಬದಲಾಗಿಬಿಟ್ಟರೆ ಎಂತಹ ಅಘಾತ ಅಲ್ಲವೇ. ಹೌದು, ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ಹಲ್ಲಿ ಸತ್ತಿದ್ದ ಕೇಕ್​ ಸೇವಿಸಿ, 11 ಜನರು ಆಸ್ಪತ್ರೆ ಪಾಲಾದ ಘಟನೆ ಬೆಳಕಿಗೆ ಬಂದಿದೆ. 

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿರುವ ನಲಸೋಪಾರ ಎನ್ನುವ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಕೇಕ್​ನಲ್ಲಿ ಹಲ್ಲಿ ಸತ್ತಿದೆ ಎಂದು ಅರಿಯದ 7 ಮಕ್ಕಳು ಮತ್ತು ನಾಲ್ವರು ಮಹಿಳೆಯರು ಸಂಭ್ರಮದ ಮಧ್ಯೆ ಅದನ್ನು ಸೇವಿಸಿ, ಆಸ್ಪತ್ರೆ ಪಾಲಾಗಿದ್ದಾರೆ. ಸದ್ಯ ಅವರಿಗೆ ಚಿಕಿತ್ಸೆ ಮುಂದುವರೆದಿದೆ ಎನ್ನಲಾಗಿದೆ.ಅವರೆಲ್ಲರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಆರೋಗ್ಯ ಸ್ಥಿರವಾಗಿದೆ

ಬರ್ತಡೇ ಸಂಭ್ರಮದಲ್ಲಿ ಭಾಗಿಯಾಗಿದ್ದ 11 ಜನರು ಕೇಕ್​ ತಿಂದಿದ್ದಾರೆ. ಆ ಕೂಡಲೇ ಅವರಲ್ಲಿ ಹೊಟ್ಟೆ ನೋವು ಹಾಗೂ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಆಂಬ್ಯುಲೆನ್ಸ್​​ ಸಹಾಯದ ಮೂಲಕ ಅವರನ್ನು ಆಸ್ಪತ್ರೆಗೆ ದಾಖಲಾಯಿಸಿತು. ಪರೀಕ್ಷೆ ನಡೆಸಿದ ವೈದ್ಯರು ಫುಡ್​ ಪಾಯಿಸನ್​ ಆದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ಎಲ್ಲರೂ ಆರೋಗ್ಯ ಸ್ಥಿರವಾಗಿದೆ ಎನ್ನಲಾಗಿದೆ,

ರೇಡ್​ಗಳಾದರೂ ಸ್ವಚ್ಛತೆ ಬಗ್ಗೆ ಇಲ್ಲ ಭಯ

ದೇಶದಾದ್ಯಂತ ಇರುವ ಎಲ್ಲ ರಾಜ್ಯದಲ್ಲಿಯೂ ಆಯಾ ಜಿಲ್ಲೆಯ  ಆರೋಗ್ಯಾಧಿಕಾರಿಗಳು ಆಹಾರ ಸುರಕ್ಷತೆಯ ಮೇರೆಗೆ ರೇಡ್​ಗಳನ್ನು ಮಾಡುತ್ತಾ, ವಿಷಕಾರಿ ಆಹಾರ ಹಂಚುವ ಹೋಟೆಲ್​, ರೆಸ್ಟೋರೆಂಟ್​, ಫೈವ್​ ಸ್ಟಾರ್​ ಹೋಟೆಲ್​ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ. 
ಇದನ್ನೂ ಓದಿ: 

ಆಹಾರ ಸುರಕ್ಷತೆ, ಕಾನೂನು ಭಯವಿಲ್ಲ

ಪಾಲ್ಘರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಸ

ರ್ಕಾರದ ಕಾನೂನು ಕ್ರಮ, ಹಾಗೂ ಆಹಾರ ಸುರಕ್ಷತೆಯ ಬಗ್ಗೆ ಅಂಗಡಿ, ಹೋಟೆಲ್​, ಬೇಕರಿ ಮಾಲೀಕರಿಗೆ ಎಷ್ಟು ಗೌರವವಿದೆ ಎನ್ನುವುದು ಕಾಡುತ್ತಿರುವ ಕಳವಳವಾಗಿದೆ.

ಐಸ್​ಕ್ರೀಮ್​ನಲ್ಲಿ ಫ್ರೀಜರ್​ನಲ್ಲಿ ಇಲಿ

ಕಲ್ಯಾಣ್​ ಥಾಣೆಯ ಗೋದ್ರೇಜ್ ಹಿಲ್ ಪ್ರದೇಶದ ಬ್ಲಿಂಕಿಟ್ ಅಂಗಡಿಯಲ್ಲಿ ಐಸ್ ಕ್ರೀಮ್ ಫ್ರೀಜರ್ ಒಳಗೆ ಇಲಿಯೊಂದು ಓಡುತ್ತಿರುವುದು ಕಂಡುಬಂದಿದೆ, ಇದು ಆಹಾರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ, ದೂರು ನೀಡಲಾಗಿತ್ತು. ಮಾಹಿತಿ ತಿಳಿದ ಆಹಾರ ಇಲಾಖೆಯ ಅಧಿಕಾರಿಗಳು FSSAI ಪರವಾನಗಿಯನ್ನು ಅಮಾನತುಗೊಳಿಸಿದರು. 
 ಮಲಾಡ್ ವೆಸ್ಟ್‌ನಲ್ಲಿರುವ ಮತ್ತೊಂದು ಬ್ಲಿಂಕಿಟ್-ಸಂಬಂಧಿತ ಸೌಲಭ್ಯದಲ್ಲಿ, ಅನೇಕ ಉಲ್ಲಂಘನೆಗಳನ್ನು ಗುರುತಿಸಿದ ನಂತರ ಇನ್ಸ್‌ಪೆಕ್ಟರ್‌ಗಳು ಸ್ಥಾಪನೆಯ FSSAI ಪರವಾನಗಿಯನ್ನು ಅಮಾನತುಗೊಳಿಸಿದರು, (ಏಜೆನ್ಸೀಸ್).