10 Killed In Massive Fire At Delhi Restaurant 
ದೇಶ

ದೆಹಲಿ ರೆಸ್ಟೋರೆಂಟ್​ವೊಂದರಲ್ಲಿ ಅಗ್ನಿ ಅವಘಡ; 20 ಮಂದಿ ಸಜೀವ ದಹನ, ಹಲವರಿಗೆ ಗಂಭೀರ ಗಾಯ..Delhi

ನವದೆಹಲಿ: ಇಲ್ಲಿನ ಮಾಲ್ವಿಯಾ ನಗರದ ಬಳಿ ಇರುವ 'ಲೆಮನ್ ಗ್ರೀನ್' ರೆಸ್ಟೋರೆಂಟ್‌ನಲ್ಲಿ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ 20 ಜನರು ಸಜೀವದಹನಗೊಂಡಿದ್ದು, ಹಲವರು ಗಂಭೀರ ಗಾಯಗೊಂಡಿದ್ದಾರೆ ಎಂದು ರಕ್ಷಣಾ ಸಿಬ್ಬಂದಿ ಮಾಹಿತಿ ಹಂಚಿಕೊಂಡಿದ್ದಾರೆ.
40 ಜನರಿದ್ದ ಲೆಮನ್ ಗ್ರೀನ್ ರೆಸ್ಟೋರೆಂಟ್‌ನಲ್ಲಿ ಮುಂಜಾನೆ 8.50ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡ ಬಗ್ಗೆ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಆ ಕೂಡಲೇ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದ ಜೊತೆಗೆ, ಹಲವರನ್ನು ರಕ್ಷಿಸಿದೆ.

ಪ್ರಾಣ ಉಳಿಸಿಕೊಳ್ಳಲು ಕಟ್ಟಡದಿಂದ ಧುಮಿಕದ ಜನರು

ಹೌಜ್ ರಾಣಿಯ ಕಿರಿದಾದ ಲೇನ್‌ಗಳಲ್ಲಿ ನೆಲೆಗೊಂಡಿರುವ ಲೆಮನ್​ ಗ್ರೀನ್​ ರೆಸ್ಟೋರೆಂಟ್​ಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿತ್ತು. ನಿಧಾನವಾಗಿ ಸುತ್ತೆಲ್ಲ ಅಗ್ನಿ ಆವರಿಸುತ್ತಿರುವುದನ್ನು ಕಂಡುಕೊಂಡ ಕೆಲವರು ತಮ್ಮ ಪ್ರಾಣ ಉಳಿಸಿಕೊಳ್ಳಲು ಕಟ್ಟದಿಂದ ನೆಲಕ್ಕೆ ಹಾರುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ವಿದೇಶಿ ಪ್ರಜೆಗಳು ತಂಗಿದ್ದರು

ಲೆಮನ್​ ಗ್ರೀನ್ ರೆಸ್ಟೋರೆಂಟ್​ನಲ್ಲಿ 25 ಕೊಠಡಿಗಳನ್ನು ಹೊಂದಿತ್ತು ಮತ್ತು ಸುಮಾರು 40 ಅತಿಥಿಗಳಿಗೆ ಸ್ಥಳಾವಕಾಶ ಕಲ್ಪಿಸಲಾಗಿತ್ತು, ಅವರಲ್ಲಿ ಹೆಚ್ಚಿನವರು ವೈದ್ಯಕೀಯ ಚಿಕಿತ್ಸೆಗಾಗಿ ದೇಶಕ್ಕೆ ಪ್ರಯಾಣಿಸಿದ್ದ ವಿದೇಶಿ ಪ್ರಜೆಗಳು ಎನ್ನಲಾಗಿದೆ.

ಅಡುಗೆ ಭಟ್ಟ ಹೇಳಿದ್ದಿಷ್ಟು

ಬೆಳಿಗ್ಗೆ 8:00 ರ ಸುಮಾರಿಗೆ ವಿದ್ಯುತ್ ಒಲೆ ಆನ್ ಮಾಡಲು ಪ್ರಯತ್ನಿಸಿದಾಗ ಬೆಂಕಿ ಹಬ್ಬಿತು. ಆ ಬಗ್ಗೆ ನಾನು ಸಂಬಂಧಪಟ್ಟವರಿಗೆ ಮಾಹಿತಿ ಕೊಟ್ಟೆ. ನಾನು ಹೊರಗೆ ಬಂದು ನೋಡಿದಾಗ ಇಡೀ ಹೋಟೆಲ್​ಗೆ ಬೆಕ್ಕಿ ಹೊತ್ತಿಕೊಂಡಿತ್ತು ಎಂದು ಅಡುಗೆ ಭಟ್ಟ ಕೇಸರ್ ಸಿಂಗ್ ಹೇಳಿದರು.
ಮತ್ತಷ್ಟು ಮಾಹಿತಿಗಾಗಿ ನಿರೀಕ್ಷಿಸಿ