ನ್ಯೂಸ್

ಡಿ.4ರಂದು ಶಾಲಾ ಮಕ್ಕಳಿಗೆ ಪರಕ್ ರಾಷ್ಟ್ರೀಯ ಸರ್ವೆಕ್ಷಣ್

ಬೆಂಗಳೂರು: ಮಕ್ಕಳಲ್ಲಿನ ಕಲಿಕಾ ಮಟ್ಟ ತಿಳಿಯುವ ಹಾಗೂ ಈ ಪರೀಕ್ಷೆಯಲ್ಲಿ ಲಿತಾಂಶದ ಆಧಾರದಲ್ಲಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಹೊಸ ಯೋಜನೆಗಳನ್ನು ರೂಪಿಸುವ ಉದ್ದೇಶದಿಂದ ಶಿಕ್ಷಣ ಇಲಾಖೆಯು ಡಿ.4ರಂದು 3,6 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ‘ಪರಕ್ ರಾಷ್ಟ್ರೀಯ ಸರ್ವೆಕ್ಷಣ್-2024’ ಎಂಬ ಸಮೀಕ್ಷೆಯನ್ನು ನಡೆಸುತ್ತಿದೆ.

ದೇಶಾದ್ಯಂತ ಪ್ರತಿ ಎರಡು ವರ್ಷಗಳಿಗೊಮ್ಮೆ ಈ ಸರ್ವೆ ನಡೆಯಲಿದೆ. ಇಲ್ಲಿಯವರೆಗೂ ರಾಷ್ಟ್ರೀಯ ಮೌಲ್ಯಮಾಪನ ಸಮೀಕ್ಷೆ (ಎನ್‌ಎಎಸ್) ಹೆಸರಿನಲ್ಲಿ ಸರ್ವೆ ನಡೆಸಲಾಗುತ್ತಿತ್ತು. ಈ ಬಾರಿ ‘ಪರಕ್ ರಾಷ್ಟ್ರೀಯ ಸರ್ವೆಕ್ಷಣ’ ಎಂದು ಹೆಸರು ಬದಲಾಯಿಸಲಾಗಿದೆ.

ಸಮೀಕ್ಷೆಯಲ್ಲಿ ಹೊರಹೊಮ್ಮುವ ಲಿತಾಂಶದ ಆಧಾರದಲ್ಲಿ ಶಿಕ್ಷಣ ಇಲಾಖೆಯು ದೇಶಾದ್ಯಂತ ಯೋಜನೆಗಳನ್ನು ರೂಪಿಸಲು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿಯೂ ಇದರ ಸಾಧಕ-ಬಾಧಕಗಳನ್ನು ಅನುಸರಿಸಲಿದೆ.

ದೆಹಲಿಯ ಎನ್‌ಎಸಿ ಆದೇಶದಂತೆ ರಾಜ್ಯದ ಆಯ್ದ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳ 3,6 ಮತ್ತು 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಆಯ್ದ ಗರಿಷ್ಠ 30 ಮಕ್ಕಳಿಗೆ ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು (ಕೆಎಸ್‌ಕ್ಯುಎಎಸಿ) ವತಿಯಿಂದ ಸರ್ವೆ ನಡೆಸಲಿದೆ.

ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತಮಿಳು ಮತ್ತು ತೆಲುಗು ಸೇರಿ 7 ಮಾಧ್ಯಮಗಳ ವಿದ್ಯಾರ್ಥಿಗಳಿಗೂ ನಡೆಯಲಿದೆ. ಭಾಷೆ, ಗಣಿತ ಮತ್ತು ಪರಿಸರ ಅಧ್ಯಯನ ವಿಷಯಗಳಿಗೆ ಪರೀಕ್ಷೆ ನಡೆಸಲಾಗುತ್ತದೆ.

ಒಎಂಆರ್ ಮಾದರಿ ಪ್ರಶ್ನೆಪತ್ರಿಕೆ:

3ನೇ ತರಗತಿಗೆ 45, 6ನೇ ತರಗತಿಗೆ 51 ಮತ್ತು 9ನೇ ತರಗತಿಗೆ 60 ಪ್ರಶ್ನೆಗಳನ್ನು ನೀಡಲಾಗುತ್ತದೆ. ಪ್ರಶ್ನೆಪತ್ರಿಕೆಯು ಒಎಂಆರ್ ಮಾದರಿಯಲ್ಲಿರಲಿದೆ. ಸಚೀವ್‌ಮೆಂಟ್ ಟೆಸ್ಟ್ (ಎಟಿ), ಪುಪಿಲ್ ಕ್ವಷನೇರ್ (ಪಿಕ್ಯು) ಮತ್ತು ಸ್ಕೂಲ್ ಕ್ವಷನೇರ್ (ಎಸ್‌ಕ್ಯು) ಮಾದರಿಯಲ್ಲಿರಲಿದೆ.

ಬೆಳಗ್ಗೆ 11ರಿಂದ 1ವರೆಗೆ ಎಟಿ ಮತ್ತು ಮಧ್ಯಾಹ್ನ 1.30ರಿಂದ 2.45ರವರೆಗೆ ಪರೀಕ್ಷೆ ನಡೆಯಲಿದೆ.

ಸಮೀಕ್ಷೆ ವಿಷಯಗಳು

ತರಗತಿ ವಿಷಯ ಅಂಕಗಳು ಸಮಯ

3 ಭಾಷೆ, ಗಣಿತ, ಪರಿಸರ ಅಧ್ಯಯನ 45 90

6 ಭಾಷೆ, ಗಣಿತ, ಪರಿಸರ ಅಧ್ಯಯನ 51 90

9 ಭಾಷೆ, ಗಣಿತ, ಪರಿಸರ ಅಧ್ಯಯನ 60 120