ಎನ್‌ಐಟಿಕೆ ಸುರತ್ಕಲ್‌ನ ಗಣಿತ ಮತ್ತು ಕಂಪ್ಯೂಟೇಶನಲ್ ಸೈನ್ಸಸ್ ವಿಭಾಗದ ವತಿಯಿಂದ ನಡೆದ ಐದು ದಿನಗಳ ರಾಷ್ಟ್ರ ಮಟ್ಟದ ಕಾರ್ಯಾಗಾರದಲ್ಲಿ ವಿವಿಧ ರಾಜ್ಯಗಳ ಪ್ರತಿಷ್ಠಿತ ಸಂಸ್ಥೆಗಳಿಂದ ಆಗಮಿಸಿದ್ದ ಒಟ್ಟು 52 ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಈ ಕಾರ್ಯಾಗಾರದ ಪ್ರಯೋಜನ ಪಡೆದರು. 
ನ್ಯೂಸ್

ಎನ್‌ಐಟಿಕೆಯಲ್ಲಿ ಗ್ರಾಫ್ ಥಿಯರಿ ಮತ್ತು ಗ್ರಾಫ್ ನ್ಯೂರಲ್ ನೆಟ್‌ವರ್ಕ್ಸ್ ಕುರಿತು ರಾಷ್ಟ್ರ ಮಟ್ಟದ ಕಾರ್ಯಾಗಾರ

ಮಂಗಳೂರು: ಎನ್‌ಐಟಿಕೆ ಸುರತ್ಕಲ್‌ನ ಗಣಿತ ಮತ್ತು ಕಂಪ್ಯೂಟೇಶನಲ್ ಸೈನ್ಸಸ್ ವಿಭಾಗದ ವತಿಯಿಂದ ಗ್ರಾಫ್ ಥಿಯರಿ ಮತ್ತು ಗ್ರಾಫ್ ನ್ಯೂರಲ್ ನೆಟ್‌ವರ್ಕ್‌ಗಳಲ್ಲಿನ ಉದಯೋನ್ಮುಖ ನಿರ್ದೇಶನಗಳು ಎಂಬ ವಿಷಯದ ಕುರಿತು ಐದು ದಿನಗಳ ರಾಷ್ಟ್ರ ಮಟ್ಟದ ಕಾರ್ಯಾಗಾರ ಯಶಸ್ವಿಯಾಗಿ ಜರುಗಿತು.
ಭಾರತ ಸರ್ಕಾರದ ಅನುಸಂಧಾನ ನ್ಯಾಷನಲ್ ರಿಸರ್ಚ್ ಫೌಂಡೇಶನ್ ಮತ್ತು ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ಧನಸಹಾಯದೊಂದಿಗೆ ಈ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಉದ್ಘಾಟನಾ ಸಮಾರಂಭದಲ್ಲಿ ಖರಗ್‌ಪುರ ಐಐಟಿಯ ಗಣಿತ ವಿಭಾಗದ ಪ್ರೊ. ಪ್ರತಿಮಾ ಪಾಣಿಗ್ರಾಹಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಎನ್‌ಐಟಿಕೆ ಸುರತ್ಕಲ್‌ನ ಸಂಶೋಧನೆ ಮತ್ತು ಆವಿಷ್ಕಾರ ವಿಭಾಗದ ಡೀನ್ ಪ್ರೊ. ಉದಯ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಐದು ದಿನಗಳ ಕಾಲ ನಡೆದ ಈ ಕಾರ್ಯಾಗಾರದಲ್ಲಿ ತಜ್ಞರ ಉಪನ್ಯಾಸಗಳು, ಪ್ರಾಯೋಗಿಕ ತರಬೇತಿ ಮತ್ತು ಸಂವಾದಾತ್ಮಕ ಅವಧಿಗಳನ್ನು ಒಳಗೊಂಡಿತ್ತು. ಐಐಟಿ ಖರಗ್‌ಪುರ, ಐಐಎಸ್‌ಇಆರ್ ತಿರುವನಂತಪುರಂ, ಎನ್‌ಐಟಿ ಕಾಲಿಕಟ್, ಐಐಟಿ ಪಾಲಕ್ಕಾಡ್, ಐಐಟಿ ದೆಹಲಿ, ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ನಂತಹ ಪ್ರತಿಷ್ಠಿತ ಸಂಸ್ಥೆಗಳ ವಿಷಯ ತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾಹಿತಿ ನೀಡಿದರು.
ವಿವಿಧ ರಾಜ್ಯಗಳ ಪ್ರತಿಷ್ಠಿತ ಸಂಸ್ಥೆಗಳಿಂದ ಆಗಮಿಸಿದ್ದ ಒಟ್ಟು 52 ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಈ ಕಾರ್ಯಾಗಾರದ ಪ್ರಯೋಜನ ಪಡೆದರು.