ನ್ಯೂಸ್

ರಾಷ್ಟ್ರೀಯ ಹೆದ್ದಾರಿಗೂ ಬಂತು ಎಎನ್‌ಪಿಆರ್ ಕ್ಯಾಮರಾ; ನಿಯಮ ಉಲ್ಲಂಸಿದರೇ ಫೈನ್ ಗ್ಯಾರಂಟಿ

ಬೆಂಗಳೂರು: ಪುಣೆ-ಬೆಂಗಳೂರು-ಬೆಳಗಾವಿ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಎನ್‌ಪಿಆರ್ (ಸ್ವಯಂ ಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ) ಕ್ಯಾಮರಾ ಅಳವಡಿಸಲಾಗಿದೆ. ಸಂಚಾರ ನಿಯಮ ಉಲ್ಲಂಸುವ ವಾಹನಗಳ ವಿರುದ್ಧ ಸ್ವಯಂ ಚಾಲಿತವಾಗಿ ದಂಡ ವಿಧಿಸಲಾಗುತ್ತಿದೆ ಎಂದು ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ತಿಳಿಸಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಎಎನ್‌ಪಿಆರ್ ಕ್ಯಾಮರಾಗಳನ್ನು ಅಳವಡಿಸಿ ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನಗಳ ವಿರುದ್ಧ ಸ್ವಯಂ ಚಾಲಿತವಾಗಿ ಕೇಸ್ ದಾಖಲಿಸಲಾಗುತ್ತಿದೆ. ಇದೆ ಮಾದರಿ ರಾಷ್ಟ್ರೀಯ ಹೆದ್ದಾರಿ ಪುಣೆ-ಬೆಂಗಳೂರು-ಬೆಳಗಾವಿ ನಡುವಿನ ರಸ್ತೆಯಲ್ಲಿ 72 ಎಎನ್‌ಪಿಆರ್ ಕ್ಯಾಮರಾ ಅಳವಡಿಸಲಾಗಿದೆ.

ಪಥ ಶಿಸ್ತು, ಓನ್ ವೇ ಸಂಚಾರ, ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ, ಸೀಲ್ಟ್ ಬೆಲ್ಟ್ ರಹಿತ ಚಾಲನೆ, ಹೆಲ್ಮೆಟ್ ರಹಿತ ಚಾಲನೆ, ತ್ರಿಬಲ್ ರೈಡಿಂಗ್ ನಿಯಮ ಉಲ್ಲಂಸುವ ವಾಹನಗಳನ್ನು ಎಎನ್‌ಪಿಆರ್ ಕ್ಯಾಮರಾಗಳು ಗುರುತಿಸಲಿವೆ. ವಾಹನಗಳ ನಂಬರ್ ಪ್ಲೇಟ್ ಆಧಾರದ ಮೇಲೆ ಸ್ವಯಂ ಚಾಲಿತವಾಗಿ ದಂಡ ವಿಧಿಸಿ ಚಲನ್ ಪ್ರಿಂಟ್ ಆಗಲಿದೆ. ವಾಹನ ಮಾಲೀಕರ ವಿಳಾಸಕ್ಕೆ ಅಂಚೆ ಮೂಲಕ ರವಾನೆ ಮಾಡಲಾಗುತ್ತದೆ ಎಂದು ಎಡಿಜಿಪಿ ಅಲೋಕ್‌ಕುಮಾರ್ ಎಚ್ಚರಿಕೆ ನೀಡಿದ್ದಾರೆ.