ನ್ಯೂಸ್

ಸೆ.1ರಿಂದ ರಾಷ್ಟ್ರೀಯ ಮಕ್ಕಳ ಚೆಸ್ ಪಂದ್ಯಾವಳಿ


ಮೈಸೂರು:
ಸೆ.1ರಿಂದ 5ರವರೆಗೆ 37ನೇ ರಾಷ್ಟ್ರೀಯ ಮಕ್ಕಳ ಚೆಸ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಚೆಸ್ ಸಂಸ್ಥೆ ಉಪಾಧ್ಯಕ್ಷ ಟಿ.ಎನ್.ಮಧುಕರ್ ತಿಳಿಸಿದರು.
ಎಂಎಂ ಚೆಸ್ ಡೆವಲಪ್‌ಮೆಂಟ್ ಟ್ರಸ್ಟ್ ವತಿಯಿಂದ ಆಯೋಜಿಸಿರುವ ಪಂದ್ಯಾವಳಿಗಳು ಸಂಭ್ರಮ್ ಕಲ್ಯಾಣ ಮಂಟಪದಲ್ಲಿ ನಡೆಯಲಿವೆ. ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸುಮಾರು 400ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಂದ್ಯಾವಳಿಯ ಬಹುಮಾನದ ಮೊತ್ತ 5 ಲಕ್ಷ ರೂ.ಗಳಾಗಿದ್ದು, 40 ಟ್ರೋಫಿ, ಭಾಗವಹಿಸಿದ ಎಲ್ಲ ಮಕ್ಕಳಿಗೆ ಚೆಸ್ ರಾಣಿಯನ್ನು ಪ್ರೋತ್ಸಾಹಪೂರಕವಾಗಿ ನೀಡಲಾಗುತ್ತದೆ. ಮಕ್ಕಳಿಗೆ ವಸತಿ, ಊಟದ ವ್ಯವಸ್ಥೆ ಮಾಡಲಾಗಿದೆ. 10 ಅಂತಾರಾಷ್ಟ್ರೀಯ ತೀರ್ಪುಗಾರರಾಗಿ ಆಗಮಿಸಲಿದ್ದಾರೆ. 1200 ರೂ. ನೋಂದಣಿ ಶುಲ್ಕ ನಿಗದಿ ಮಾಡಿದ್ದು, ಹೆಚ್ಚಿನ ಮಾಹಿತಿಗೆ ಮಾಧುರಿ ಜೈನ್ ದೂ.8050244338ನ್ನು ಸಂಪರ್ಕಿಸಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ನಾಗೇಂದ್ರ.ಎಂ, ಮೂರ್ತಿ, ಮಂಜುನಾಥ್ ಜೈನ್, ಬಾಬು, ಮಾಧುರಿ ಜೈನ್ ಇದ್ದರು.