ಫ್ಲಾರಿಡಾ: ಚಂದ್ರಾನ್ವೇಷಣೆಯ ಅತಿ ದೊಡ್ಡ ಯೋಜನೆಯಾದ ‘ಆರ್ಟೆಮಿಸ್- 1 ಮಿಷನ್’ ಉಡಾವಣೆಯನ್ನು ತಾಂತ್ರಿಕ ಕಾರಣದಿಂದ ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ನಾಸಾ) ಮುಂದೂಡಿದೆ.
ಆರ್ಟೆಮಿಸ್ ಅನ್ನು ಹೊತ್ತೊಯ್ಯುವ ದೈತ್ಯ ರಾಕೆಟ್ನ ಆರ್ಎಸ್-25 ಇಂಜಿನ್ನಲ್ಲಿ ತಾಪಮಾನ ಏರಿಕೆಯ ಕಾರಣ ಸೋರಿಕೆ ಕಂಡುಬಂದಿರುವುದರಿಂದ ಸೋಮವಾರ ನಿಗದಿಯಾಗಿದ್ದ ಉಡಾವಣೆಯನ್ನು ಮುಂದೂಡಿದೆ. ಸೆ. 2ಕ್ಕೆ ಹೊಸ ದಿನಾಂಕವನ್ನು ನಿಗದಿ ಮಾಡಿದೆ. ಮಾನವರಹಿತವಾದ ನೌಕೆಯ ಉಡಾವಣೆಯನ್ನು ಕಣ್ತುಂಬಿಕೊಳ್ಳಲು ಫ್ಲಾರಿಡಾದ ಕೆನಡಿ ಸ್ಪೇಸ್ ಸೆಂಟರ್ನಲ್ಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೇರಿ ಸಾವಿರ ಜನರು ಸೇರಿದ್ದರು.
ಅಪೋಲೋ 17 ಗಗನನೌಕೆಯ ಯಾನಿಗಳು ಚಂದ್ರನಂಗಳದಲ್ಲಿ ಹೆಜ್ಜೆ ಇರಿಸಿ 50ನೇ ವರ್ಷ ಸಂದಿದ್ದು, ಇದೇ ಸಂದರ್ಭದಲ್ಲಿ ‘ಆರ್ಟೆಮಿಸ್-1’ ಅನ್ನು ಉಡಾವಣೆ ಮಾಡಲಾಗುತ್ತಿದೆ. ಈ ಮಿಷನ್ ಉದ್ದೇಶ ಚಂದ್ರಾನ್ವೇಷಣೆಯಾದರೂ, ಅದು ಮಂಗಳನಲ್ಲಿಗೂ ಪಯಣ ಮಾಡುತ್ತದೆ.