oplus_2 
ನ್ಯೂಸ್

ನಾರಿ ನಿನಗೊಂದು ಸ್ಯಾರಿ ವಿಜೇತರಿಗೆ ಸೀರೆ ವಿತರಿಸಿದ ಮಹಿಳಾ ಅಧಿಕಾರಿಗಳು

ರಾಣೆಬೆನ್ನೂರ: ಕನ್ನಡದ ನಂ.1 ಕನ್ನಡ ದಿನಪತ್ರಿಕೆಯಾದ "ವಿಜಯವಾಣಿ" ವತಿಯಿಂದ ಮಹಿಳೆಯರಿಗಾಗಿ ಆಯೋಜಿಸಿದ್ದ "ನಾರಿ ನಿನಗೊಂದು ಸ್ಯಾರಿ' ಸ್ಪರ್ಧೆಯ ಐದು ಅದೃಷ್ಟಶಾಲಿಗಳಿಗೆ ಬುಧವಾರ ನಗರದ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದ ಸಭಾಭವನದಲ್ಲಿ ಬಹುಮಾನವಾಗಿ ಸೀರೆ ವಿತರಿಸಲಾಯಿತು.

ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ಜಿ. ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ. ರಾಜೇಶ್ವರಿ ಬೆನ್ನೂರ ಅವರು ನಾರಿ ನಿನಗೊಂದು ಸ್ಯಾರಿ ಸ್ಪರ್ಧೆಯ ವಿಜೇತರಾದ ಶ್ರೀರಾಮ ನಗರದ ಭುವನೇಶ್ವರಿ ಗುತ್ತಲ, ಮೃತ್ಯುಂಜಯ ನಗರದ ನೀಲಮ್ಮ ಬೆಳಕೇರಿ, ರೋಟರಿ ಶಾಲೆ ಹತ್ತಿರದ ಭಾರತಿ ಜಂಬಗಿ, ಮೃತ್ಯುಂಜಯ ನಗರದ ರಾಜೇಶ್ವರಿ ಉದಗಟ್ಟಿ, ತಾಲೂಕಿನ ಬೇಲೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಮಂಜುಳಾ ಮಕರಿ ಸೇರಿ ಐವರಿಗೆ ಸೀರೆ ವಿತರಿಸಿದರು.

ನಂತರ ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ಜಿ. ಮಾತನಾಡಿ, ಮಹಿಳೆಯರು ಅಡುಗೆ ಮನೆ ಕೆಲಸ, ಟಿವಿ ಬಿಟ್ಟರೆ ಮೊಬೈಲ್​ನಲ್ಲಿ ಇರುತ್ತಾರೆ. ಆದರೆ, ವಿಜಯವಾಣಿ ಪತ್ರಿಕೆಯವರು ನ್ಯಾರಿ ನಿನಗೊಂದು ಸ್ಯಾರಿ ಎನ್ನುವ ವಿಶೇಷ ಸ್ಪರ್ಧೆಯ ಮೂಲಕ ಮಹಿಳೆಯರಿಗೆ ಪತ್ರಿಕೆ ಓದುವ ಹವ್ಯಾಸ ರೂಢಿಸುವ ಜತೆಗೆ ಅವರಲ್ಲಿ ಸಾಮಾನ್ಯಜ್ಞಾನ ತುಂಬುವ ಕಾರ್ಯ ಮಾಡಿರುವುದು ಶ್ಲಾನೀಯ. ಮಹಿಳೆಯರು ನಿತ್ಯವೂ ಪತ್ರಿಕೆ ಓದುವ ಮೂಲಕ ಹವ್ಯಾಸ ರೂಢಿಸಿಕೊಳ್ಳಬೇಕು. ಇದರಿಂದ ಮಕ್ಕಳಿಗೂ ನಾವು ಶಿಕ್ಷಣ ನೀಡಲು ಅನುಕೂಲವಾಗುತ್ತದೆ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ. ರಾಜೇಶ್ವರಿ ಬೆನ್ನೂರ ಮಾತನಾಡಿ, ವಿಜಯವಾಣಿ ಪತ್ರಿಕೆಯವರು ಆಯೋಜಿಸಿದ್ದ ನಾರಿ ನಿನಗೊಂದು ಸ್ಯಾರಿ ಎನ್ನುವ ಸ್ಪರ್ಧೆಯಲ್ಲಿ ಸೀರೆ ಗಳಿಸಿದ್ದು ಮುಖ್ಯವಲ್ಲ. ಎಲ್ಲರೂ ಪತ್ರಿಕೆ ಓದಿ ಸಾಮಾನ್ಯಜ್ಞಾನ ರೂಢಿಸಿಕೊಳ್ಳುವುದು ಮುಖ್ಯವಾಗಿದೆ. ಮಹಿಳೆಯರಿಗಾಗಿ ವಿಜಯವಾಣಿ ಬಳಗದವರು ಇಂಥ ಕಾರ್ಯಕ್ರಮಗಳನ್ನು ಇನ್ನೂ ಹೆಚ್ಚಾಗಿ ಮಾಡಲಿ ಎಂದು ಹಾರೈಯಿಸಿದರು.

ಸ್ಪರ್ಧೆಯ ವಿಜೇತೆ ಹಾಗೂ ಬಿಜೆಪಿ ಕಾರ್ಯಕರ್ತೆ ಭಾರತಿ ಜಂಬಗಿ ಮಾತನಾಡಿ, ವಿಜಯವಾಣಿ ಪತ್ರಿಕೆಯವರು ಈ ಬಾರಿ ಆಯೋಜಿಸಿದ್ದ ನಾರಿ ನಿನಗೊಂದು ಸ್ಯಾರಿ ಸ್ಪರ್ಧೆಯಲ್ಲಿ ಕೇಳಿರುವ ಪ್ರಶ್ನೆಗಳು ಬಹಳ ಉಪಯುಕ್ತವಾಗಿದ್ದವು. ಸೀರೆಗಾಗಿ ಸ್ಪರ್ಧೆಯಲ್ಲಿ ಭಾಗವಹಿಸದೆ ನಾವು ಕುತೂಹಲದಿಂದ ಪ್ರಶ್ನೆಗಳಿಗೆ ಉತ್ತರಿಸುವ ಸಲುವಾಗಿ ಪಾಲ್ಗೊಂಡಿದ್ದೇವು. ಇಂಥ ಇನ್ನೂ ಅನೇಕ ಕಾರ್ಯಕ್ರಮಗಳನ್ನು ವಿಜಯವಾಣಿಯವರು ಆಯೋಜಿಸಲಿ ಎಂಬುದು ನಮ್ಮ ಅಭಿಪ್ರಾಯವಾಗಿದೆ ಎಂದರು.

ಪತ್ರಿಕೆಯ ಪ್ರಸರಣ ವಿಭಾಗದ ಜಿಲ್ಲಾ ಪ್ರತಿನಿಧಿ ಕೊಟ್ರೇಶ ಅದವಾನಿಮಠ, ವರದಿಗಾರ ಕರಿಯಪ್ಪ ಅರಳಿಕಟ್ಟಿ, ಪ್ರಮುಖರಾದ ವಿಜಯಾ ನುಗ್ಗೆಹಳ್ಳಿ, ರಾಜೇಶ್ವರಿ ಕೋಟೆಪ್ಪನವರ, ಶಾರದಾ ಮಲ್ಲಾಡದ ಮತ್ತಿತರರು ಇದ್ದರು.