ಮೈಸೂರು: ಪ್ರಧಾನಿ ನರೇಂದ್ರ ಮೋದಿ ತೊಟ್ಟ ಪೇಟವನ್ನ ಮೈಸೂರಿನ ವ್ಯಕ್ತಿಯೊಬ್ಬರು ಖರೀದಿಸಿ ಅಭಿಮಾನ ಮೆರೆದಿದ್ದಾರೆ.
ನರೇಂದ್ರ ಮೋದಿ ಅವರಿಗೆ ಸಾರ್ವಜನಿಕ ಸಮಾರಂಭದಲ್ಲಿ ಕೊಟ್ಟ ಸ್ಮರಣಿಕೆಗಳನ್ನು ಕಳೆದ ಅಕ್ಟೋಬರ್ 14ರಂದು ಇ-ಹರಾಜು ಪ್ರಕ್ರಿಯೆ ಮೂಲಕ ಮಾರಾಟ ಮಾಡಲಾಯಿತು. ಹರಾಜಿನಲ್ಲಿ ಭಾಗವಹಿಸಿದ್ದ ಮೈಸೂರಿನ ಶ್ರೀರಾಂಪುರ ನಿವಾಸಿ ಶ್ರೀಕಂಠಕುಮಾರ್, 3300 ರೂಪಾಯಿಗೆ ಒಂದು ಪೇಟವನ್ನು ಖರೀದಿಸಿದ್ದರು. ಇದೀಗ ಈ ಪೇಟ ಶ್ರೀಕಂಠಕುಮಾರ್ ಅವರಿಗೆ ತಲುಪಿದೆ.
ಮೋದಿ ಅಂದ ಕೂಡಲೇ ಅವರು ತೊಡುವ ಪೇಟಾ ಬಹಳ ಆಕರ್ಷಣಿಯವಾಗಿರುತ್ತೆ. ಹೀಗಾಗಿ, ಪೇಟವನ್ನೇ ಅವರ ಅಭಿಮಾನಿಯಾಗಿ ಹರಾಜಿನಲ್ಲಿ ಖರೀದಿಸಿದೆ ಎಂದು ಶ್ರೀಕಂಠಕುಮಾರ್ ಸಂತಸ ಹಂಚಿಕೊಂಡರು. (ದಿಗ್ವಿಜಯ ನ್ಯೂಸ್, ಮೈಸೂರು)