ನ್ಯೂಸ್

VIDEO| ಮೋದಿಯವರು ಸಲ್ಮಾನ್​​​​ ಹೆಸರನ್ನು ವಿಶಿಷ್ಟ ರೀತಿಯಲ್ಲಿ ಉಲ್ಲೇಖಿಸಿದಾಗ ಜೋರಾಗಿ ಶಿಳ್ಳೆ, ಚಪ್ಪಾಳೆ ತಟ್ಟಿದ ವಿದ್ಯಾರ್ಥಿಗಳು

ಮುಂಬೈ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಗ್ವಾಲಿಯರ್‌ನ ಪ್ರಸಿದ್ಧ ಸಿದ್ಧಿಯಾನ್ ಶಾಲೆಯ 125 ನೇ ಸಂಸ್ಥಾಪಕರ ದಿನದಂದು ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ, ಪ್ರಧಾನಿ ಮೋದಿ ಈ ಶಾಲೆ ಮತ್ತು ಇಲ್ಲಿ ಓದಿದ ಕೆಲವು ಹಿಂದಿನ ವಿದ್ಯಾರ್ಥಿಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಹಿಂದಿ ಚಿತ್ರರಂಗದ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರನ್ನು ವಿಶಿಷ್ಟ ರೀತಿಯಲ್ಲಿ ಉಲ್ಲೇಖಿಸಿದ್ದು, ಮೋದಿಯವರ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸಲ್ಮಾನ್​​​​ರನ್ನು ಈ ರೀತಿ ಉಲ್ಲೇಖಿಸಿದ ಮೋದಿ

ಐತಿಹಾಸಿಕ ಗ್ವಾಲಿಯರ್ ಕೋಟೆಯ ಮೇಲೆ ನಿರ್ಮಿಸಲಾದ ಸಿಂಧಿಯಾ ಶಾಲೆಯ ವಿಶೇಷ ಸಮಾರಂಭದಲ್ಲಿ ನರೇಂದ್ರ ಮೋದಿಯವರ ಉಪಸ್ಥಿತಿಯು ಸುದ್ದಿಯಾಗಿದ್ದು, ಈ ಸಂದರ್ಭದಲ್ಲಿ ಅವರು ತಮ್ಮ ಭಾಷಣದಲ್ಲಿ ಶಾಲೆಯ ಕೆಲವು ಪ್ರಸಿದ್ಧ ಹಳೆಯ ವಿದ್ಯಾರ್ಥಿಗಳ ಬಗ್ಗೆ ಚರ್ಚಿಸಿದರು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಸಲ್ಮಾನ್ ಖಾನ್ ಅವರ ಅಭಿಮಾನಿಗಳ ಪುಟದಿಂದ ಹಂಚಿಕೊಳ್ಳಲಾಗಿದೆ.

ವಿಡಿಯೋದಲ್ಲಿ ಅವರು ಹೀಗೆ ಹೇಳಿದ್ದಾರೆ... "ನನಗೆ ಸಿಂಧಿಯಾ ಶಾಲೆಯ ಮೇಲೆ ಏಕೆ ನಂಬಿಕೆ ಇದೆ ಎಂದು ನಿಮಗೆ ತಿಳಿದಿದೆಯೇ?.. ನಿಮ್ಮ ಶಾಲೆಯ ಕೆಲವು ಹಿಂದಿನ ವಿದ್ಯಾರ್ಥಿಗಳು ನನಗೆ ಚೆನ್ನಾಗಿ ಗೊತ್ತು. ಅವರಲ್ಲಿ ಒಬ್ಬರು ಕೇಂದ್ರ ಸಚಿವ ಜಿತೇಂದ್ರ ಸಿಂಗ್. ಅಮೀನ್ ಸಯಾನಿ ಅವರ ಧ್ವನಿ ರೇಡಿಯೋದಲ್ಲಿ ನಮ್ಮ ಹೃದಯವನ್ನು ಗೆಲ್ಲುತ್ತದೆ ಎಂದರು. ಹಾಗೆಯೇ ಬ್ರದರ್ಸ್ ಮತ್ತು ಹುಡ್ ಹುಡ್ ದಬಾಂಗ್ ಎಂದು ಸಲ್ಮಾನ್ ಖಾನ್ ಹೆಸರನ್ನು ಹೇಳುತ್ತಿದ್ದಂತೆಯೇ ಸ್ಥಳದಲ್ಲಿದ್ದ ವಿದ್ಯಾರ್ಥಿಗಳು ಮತ್ತು ಇತರ ಜನರು ಜೋರಾಗಿ ಶಿಳ್ಳೆ ಮತ್ತು ಚಪ್ಪಾಳೆ ತಟ್ಟಿದರು. ನೀವಿದನ್ನು ವಿಡಿಯೋದಲ್ಲಿ ನೋಡಬಹುದು.

ಟೈಗರ್ 3 ಚಿತ್ರದಲ್ಲಿ ಸಲ್ಮಾನ್

ಸಲ್ಮಾನ್ ಖಾನ್ ಅವರ ಮುಂಬರುವ ಚಿತ್ರ 'ಟೈಗರ್ 3' ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಟ್ರೇಲರ್ ಹಾಗೂ ಮೊದಲ ಹಾಡು ‘ಲೇಕೆ ಪ್ರಭು ಕಾ ನಾಮ್’ ಬಿಡುಗಡೆಯಾಗಿದ್ದು, ಇದನ್ನು ನೋಡಿ ಸಲ್ಮಾನ್ ಅಭಿನಯದ ಸ್ಪೈ ಥ್ರಿಲ್ಲರ್ ‘ಟೈಗರ್ 3’ಗೆ ಅಭಿಮಾನಿಗಳ ಕಾತರ ಮತ್ತಷ್ಟು ಹೆಚ್ಚಿದೆ. ಈ ಚಿತ್ರವು ನವೆಂಬರ್ 12 ರಂದು ದೀಪಾವಳಿ ಸಂದರ್ಭದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.