ರಾಣೆಬೆನ್ನೂರ: ಮಹಿಳೆಯರು ನರೇಗಾ ಯೋಜನೆಯಡಿ ಕೂಲಿ ಕೆಲಸಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರುಚಿ ಬಿಂದಲ್ ಹೇಳಿದರು.
ತಾಲೂಕಿನ ಬೆನಕನಕೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ನಡೆಯುತ್ತಿರುವ ಗ್ರಾಮದ ಮರಡಿ ಕೆಂಚಮ್ಮನ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.
ದುಡಿಯೋಣ ಬಾ ಅಭಿಯಾನ ಕಾರ್ಯಕ್ರಮದಡಿ ಗ್ರಾಮದಲ್ಲಿ ಗ್ರಾಪಂ ಮೂಲಕ ನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡಲಾಗುವುದು. ಯಾರೂ ವಲಸೆ ಹೋಗಬೇಡಿ, ನರೇಗಾ ಯೋಜನೆಯಡಿ ಸಮಾನ ಕೂಲಿ ಸಮಾನ ವೇತನ ದಿನಕ್ಕೆ 370 ರೂ. ಕೂಲಿ ಸಿಗುತ್ತದೆ ಎಂದರು.
ಗ್ರಾಪಂ ಪಿಡಿಒ ರಂಗಪ್ಪ ಕೊರಕಲಿ, ಸದಸ್ಯ ಲಿಂಗನಗೌಡ್ರ ಸಂಗನಗೌಡ್ರ, ಕಾರ್ಯದಶಿರ್ ಶ್ರೀಧರ ಶೇಷಗಿರಿ, ಎಡಿಪಿಸಿ ಮಹಾಂತೇಶ ನರೇಗಲ್ಲ, ಐಈಸಿ ಸಂಯೋಜಕ ದಿಂಗಾಲೇಶ ಅಂಗೂರ, ಬಿಎಫ್ಟಿ ಚಂದ್ರಪ್ಪ ಬಾಲನಾಯ್ಕರ ಮತ್ತಿತರರು ಉಪಸ್ಥಿತರಿದ್ದರು.