ನ್ಯೂಸ್

ಬೆಂಗಳೂರಿನಲ್ಲಿ  ಐಷಾರಾಮಿ ಅಪಾರ್ಟ್‌ಮೆಂಟ್‌ ಖರೀದಿಸಿದ Narayana Murthy!

ಬೆಂಗಳೂರು:  ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ( Narayana Murthy) ಅವರು ಬೆಂಗಳೂರಿನ ಕಿಂಗ್ ಫಿಶರ್ ಟವರ್ಸ್ ನಲ್ಲಿ  50 ಕೋಟಿ ರೂಪಾಯಿ ಬೆಲೆ ಬಾಳುವ ಐಷಾರಾಮಿ ಅಪಾರ್ಟ್ ಮೆಂಟ್ ಖರೀದಿಸಿದ್ದಾರೆ ಎಂದು ವರದಿಯಾಗಿದೆ.

ನಾರಾಯಣ ಮೂರ್ತಿ ಅವರು ಕಿಂಗ್‌ಫಿಶರ್‌ ಟವರ್ಸ್‌ನಲ್ಲಿ ದುಬಾರಿ ಬೆಲೆಯ   ಅಪಾರ್ಟ್‌ಮೆಂಟ್‌ ಖರೀದಿಸಿದ್ದಾರೆ. 4.5 ಎಕರೆ ವಿಶಾಲವಾದ ಜಾಗದಲ್ಲಿ ನಿರ್ಮಿಸಲಾದ 34 ಅಂತಸ್ತಿತ ಐಶಾರಾಮಿ ಕಟ್ಟಡವಾದ ಕಿಂಗ್‌ಫಿಶರ್‌ ಟವರ್ಸ್‌ನಲ್ಲಿ  ಬರೋಬ್ಬರಿ 50 ಕೋಟಿ ರೂ. ಬೆಲೆಯ ಅಪಾರ್ಟ್‌ಮೆಂಟ್‌ ಒಂದನ್ನು ಖರೀದಿ ಮಾಡಿದ್ದಾರೆ.

2020 ರಲ್ಲಿ ಇವರ ಪತ್ನಿ ಸುಧಾ ಮೂರ್ತಿ ಅವರು ಇದೇ ಕಾಂಪ್ಲೆಕ್ಸ್‌ನ 23 ನೇ ಮಹಡಿಯಲ್ಲಿರುವ ಫ್ಲ್ಯಾಟ್‌ ಒಂದನ್ನು ಬರೋಬ್ಬರಿ 29 ಕೋಟಿ ರೂ. ಗಳಿಗೆ ಖರೀದಿಸಿದ್ದರು. ಇದೀಗ ನಾರಾಯಣ ಮೂರ್ತಿಯವರು ಇದೇ ಕಿಂಗ್‌ಫಿಶರ್‌ ಟವರ್ಸ್‌ನಲ್ಲಿ 50 ಕೋಟಿ  ರೂ. ಬೆಲೆಯ ಐಷಾರಾಮಿ ಫ್ಲಾಟ್‌ ಒಂದನ್ನು ಖರೀದಿ ಮಾಡಿದ್ದಾರೆ.

ಐಷಾರಾಮಿ ಅಪಾರ್ಟ್ ಮೆಂಟ್ ವಿಶೇಷತೆ:

ಕಿಂಗ್‌ಫಿಶರ್‌ ಟವರ್‌ನ 16 ನೇ ಮಹಡಿಯಲ್ಲಿರುವ ಹಾಗೂ 8,400 ಚದರ ಅಡಿಗಳಷ್ಟು ವ್ಯಾಪಿಸಿರುವ ಈ ದುಬಾರಿ ಫ್ಲಾಟ್‌ 4 ಮಲಗುವ ಕೋಣೆಗಳು, 5 ಕಾರ್‌ ಪಾರ್ಕಿಂಗ್‌ ವ್ಯವಸ್ಥೆಗಳನ್ನು ಒಳಗೊಂಡಿದೆ. ಟೈಮ್ಸ್‌ ಆಫ್‌ ಇಂಡಿಯಾ ವರದಿಯ ಪ್ರಕಾರ “50 ಕೋಟಿ ಬೆಲೆಯ ಈ ದುಬಾರಿ ಅಪಾರ್ಟ್‌ಮೆಂಟ್‌ನ ಪ್ರತಿ ಚದರ ಅಡಿ ವೆಚ್ಚವು 59,500 ರೂ. ಗಳಿಷ್ಟಿದೆ. ಇದು ನಗರದ ಅತ್ಯಂತ ದುಬಾರಿ ಅಪಾರ್ಟ್‌ಮೆಂಟ್‌ಗಳಲ್ಲಿ ಒಂದಾಗಿದೆ.