ನಾರಾಯಣ ರೈ 
ನ್ಯೂಸ್

ರಂಗ ಗೌರವ ಪ್ರಶಸ್ತಿಗೆ ನಾರಾಯಣ ರೈ ಭಾಜನ

ಹುಣಸೂರು: ರಂಗಾಯಣ ವತಿಯಿಂದ ಕೊಡಮಾಡುವ ರಂಗ ಗೌರವ ಪ್ರಶಸ್ತಿಗೆ ತಾಲೂಕಿನ ಹಿರಿಯ ರಂಗಭೂಮಿ ಕಲಾವಿದ ನಾರಾಯಣ ರೈ ಭಾಜನರಾಗಿದ್ದಾರೆ.

ದಸರಾ ಮಹೋತ್ಸವ ಅಂಗವಾಗಿ ಮೈಸೂರಿನ ರಂಗಾಯಣದಲ್ಲಿ ಆಯೋಜನೆಗೊಂಡಿರುವ 9 ದಿನಗಳ ನವರಾತ್ರಿ ರಂಗೋತ್ಸವದ ಅ.15 ರಂದು ಸಂಜೆ ಆಯೋಜನೆಗೊಂಡಿರುವ ಉದ್ಘಾಟನಾ ಸಮಾರಂಭದಲ್ಲಿ ನಾರಾಯಣ ರೈ ಅವರನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ರಂಗಾಯಣದ ಉಪನಿರ್ದೇಶಕಿ ನಿರ್ಮಲಾ ಮಠಪತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

40-50 ವರ್ಷಗಳಿಂದ ರಂಗಭೂಮಿಯಲ್ಲಿ ದುಡಿದಿರುವ ನಾರಾಯಣ ರೈ ತಮ್ಮ ಸಹಮಿತ್ರರೊಡಗೂಡಿ ಟಿಪ್ಪು ಸುಲ್ತಾನ್, ಕುರುಕ್ಷೇತ್ರ ರಕ್ತರಾತ್ರಿ, ತೆರೆದ ಹೃದಯ, ರಣದುಂದುಭಿ ನಾಟಕಗಳು ಸೇರಿದಂತೆ 50ಕ್ಕೂ ಹೆಚ್ಚು ನಾಟಕಗಳಲ್ಲಿ ಬಣ್ಣ ಹಚ್ಚಿದ್ದಾರೆ.