ನ್ಯೂಸ್

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: 'ಜೈ ಭೀಮ್' ಚಿತ್ರಕ್ಕೆ ಅವಾರ್ಡ್​ ಸಿಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ನಟ ನಾನಿ

ಆಂಧ್ರಪ್ರದೇಶ: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2023ರ ವಿಜೇತರನ್ನು ಗುರುವಾರ (ಆಗಸ್ಟ್ 24) ಸಂಜೆ 5 ಗಂಟೆಗೆ ಅಧಿಕೃತವಾಗಿ ಪ್ರಕಟಿಸಲಾಯಿತು. ದೇಶದಾದ್ಯಂತ ಚಿತ್ರರಂಗದ ಅತ್ಯುತ್ತಮ ಪ್ರತಿಭೆಗಳನ್ನು ಗೌರವಿಸಲು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ವಾರ್ಷಿಕವಾಗಿ ಘೋಷಿಸುವಂತೆ, ಈ ವರ್ಷವು ಕೂಡ ಪ್ರಶಸ್ತಿ ಗೆದ್ದವರ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ.

ಕನ್ನಡದ '777 ಚಾರ್ಲಿ' ಸೇರಿದಂತೆ ಹಲವು ಭಾಷೆಗಳ ಚಿತ್ರಗಳಿಗೆ ಅತ್ಯುತ್ತಮ ಸಿನಿಮಾ ಪ್ರಶಸ್ತಿಗಳು ಲಭಿಸಿತು. ಅತ್ಯುತ್ತಮ ನಟ ಅವಾರ್ಡ್​ ಟಾಲಿವುಡ್​ನ ಐಕಾನ್​ ಸ್ಟಾರ್​ ಅಲ್ಲು ಅರ್ಜುನ್​ ಅವರಿಗೆ ದೊರೆತಿದೆ. ಈ ಸಂಗತಿಗಳನ್ನು ಗಮನಿಸಿದ ತಮಿಳು ನಟ ನಾನಿ, ಈ ಬಗ್ಗೆ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಸ್ಟೋರಿ ಅಪಲೋಡ್​ ಮಾಡುವ ಮುಖೇನ ಎಲ್ಲಾ ವಿಜೇತರಿಗೂ ಅಭಿನಂದನೆ ತಿಳಿಸಿದ್ದಾರೆ.

ಅಭಿನಂದನೆ ತಿಳಿಸಿದ ಬಳಿಕ ಮತ್ತೊಂದು ಸ್ಟೋರಿ ಹಾಕಿದ ನಾನಿ, ಕಾಲಿವುಡ್​ನ ಸ್ಟಾರ್​ ಸೂರ್ಯ ನಟನೆಯ ಬ್ಲಾಕ್​ಬಸ್ಟರ್​ ಹಿಟ್​ 'ಜೈ ಭೀಮ್' ಚಿತ್ರಕ್ಕೆ ಯಾವುದೇ ಪ್ರಶಸ್ತಿಗಳು ಲಭಿಸದೆ ಇದ್ದಕ್ಕೆ ಹ್ಯಾಶ್​​ಟ್ಯಾಗ್​ ಬಳಸಿ ಜೈ ಭೀಮ್ ಎಂದು ಬರೆದು, ಒಡೆದ ಹೃದಯದ ಎಮೋಜಿಯನ್ನು ಹಾಕಿ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).