ಬೆಂಗಳೂರು: ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ನಂದಿನಿ ಬಡಾವಣೆಯಲ್ಲಿ ನವರಾತ್ರಿ ಉತ್ಸವ ಸಮಿತಿ 9 ದಿನಗಳ ಕಾಲ ಆಯೋಜಿಸಿರುವ "ದಸರಾ ಹಾಗೂ ನಂದಿನಿ ಉತ್ಸವ'ಕ್ಕೆ ಸೋಮವಾರ ಜನಸಾಗರ ಹರಿದುಬಂತು.
ಜನರು ಕುಟುಂಬ ಸಮೇತರಾಗಿ ಬಂದು ದೇವಿಯ ದರ್ಶನ ಪಡೆದುಕೊಂಡರು. ಬೆಳಗ್ಗಿನಿಂದಲೇ ಭಜನೆ, ವಿಷ್ಣು ಸಹಸ್ರನಾಮ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಂಜೆ ಅದ್ಧೂರಿಯಾಗಿ ನಡೆದ ಸಾಂಸತಿಕ ಕಾರ್ಯಕ್ರಮ ನೆರೆದಿದ್ದ ಜನರನ್ನು ರಂಜಿಸಿತು. ವಿವಿಧ ಶಾಲಾ&ಕಾಲೇಜು ವಿದ್ಯಾರ್ಥಿಗಳಿಂದ ನವದುರ್ಗಾ ನೃತ್ಯ, ಕಾಳಿ ನೃತ್ಯ, ಭರತನಾಟ್ಯ ಪ್ರದರ್ಶನ ಗಮನ ಸೆಳೆದವು.
ನಂದಿನಿ ಉತ್ಸವದ ನಾಲ್ಕನೇ ದಿನ ಶಿವತಾಂಡವ ಕಲ್ಚರಲ್ ಅಕಾಡೆಮಿ ತಂಡ, ಸ್ಥಳಿಯ ಪ್ರತಿಭೆ ನಿಹಾರಿಕ ಅವರಿಂದ ನೃತ್ಯ ಪ್ರದರ್ಶನಗೊಂಡಿತು. ಸರಿಗಮಪ ಶೋ ಖ್ಯಾತಿಯ ಮೆಹಬೂಬ್ ಸಾಬ್ ಸಿನಿಮಾ ಗೀತೆಗಳನ್ನು ಹಾಡಿ ರಂಜಿಸಿದರು. ಜತೆಗೆ ದೇಹದಾರ್ಢ್ಯ ಸ್ಪರ್ಧೆ ಗಮನ ಸೆಳೆಯಿತು. ನಂದಿನಿ ಉತ್ಸವ ಸಮಿತಿ ಅಧ್ಯಕ್ಷ ಕೆ.ವಿ.ರಾಜೇಂದ್ರ ಕುಮಾರ್ ಕಲಾವಿದರನ್ನು ಸನ್ಮಾನಿಸಿದರು. ನಟ ರಾಜೇಂದ್ರ ಕಾಮತ್ ಸಾಂಸತಿಕ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.
ನಂದಿನಿ ಉತ್ಸವಕ್ಕೆ ನಗರದ ವಿವಿಧ ಭಾಗದಿಂದ ಆಗಮಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಸಂಜೆಯ ಸಾಂಸತಿಕ ಕಾರ್ಯಕ್ರಮ ವೀಸಲು ಸ್ಥಳಿಯರು ಕುಟುಂಬ ಸಮೇತರಾಗಿ ಭೇಟಿ ನೀಡುತ್ತಿದ್ದಾರೆ. ಅಧಿಕ ಸಂಖ್ಯೆಯ ಸಾರ್ವಜನಿಕರು ತಡರಾತ್ರಿವರೆಗೂ ಸಾಂಸತಿಕ ಪ್ರದರ್ಶನವನ್ನು ಆಸ್ವಾದಿಸಿ ಮನೆಗೆ ತೆರಳುತ್ತಿದ್ದಾರೆ. ನಂದಿನಿ ಉತ್ಸವವು ಅ.24ರ ವರೆಗೂ ಮುಂದುವರಿಯಲಿದ್ದು, ಪ್ರತಿದಿನವೂ ಸಾಂಸತಿಕ ಕಾರ್ಯಕ್ರಮಗಳು ನಡೆಯಲಿವೆ.
ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ್, ನಂದಿನಿ ಲೇಔಟ್ ಕ್ಲಬ್ ಅಧ್ಯಕ್ಷ ದಿನೇಶ್, ಪದಾಧಿಕಾರಿಗಳಾದ ಹೇಮಂತ್ ಕುಮಾರ್, ಆನಂದ್, ಪ್ರಕಾಶ ಕಲಗದ್ದೆ, ಕಣ್ಣನ್, ಭಾಸ್ಕರ್, ಸಂಜು ರಾಜೇಂದ್ರ ಕುಮಾರ್, ಪುಷ್ಪ ರಾಜೇಂದ್ರ ಕುಮಾರ್ ಇತರರಿದ್ದರು.
ಸ್ವದೇಶಿ ಮೇಳ ನಂದಿನಿ ಉತ್ಸವದ ಆಕರ್ಷಣೆಯಾಗಿದೆ. ಭಾನುವಾರು ಸ್ವದೇಶಿ ಮೇಳ ಹಾಗೂ ವಸ್ತಪ್ರದರ್ಶನ ಕೇಂದ್ರಕ್ಕೆ ನೂರಾರು ಜನರು ಭೇಟಿ ನೀಡಿ, ವಿವಿಧ ವಸ್ತುಗಳನ್ನು ಖರೀದಿಸಿದರು. ಉತ್ತಮ ವಹಿವಾಟು ನಡೆದಿದೆ ಎಂದು ವ್ಯಾಪಾರಸ್ಥರು ಸಂತಸ ಹಂಚಿಕೊಂಡರು.