ನ್ಯೂಸ್

ವಾಟ್ಸಾಪ್ ಮೂಲಕ 5 ಲಕ್ಷ ರೂ. ಮೌಲ್ಯದ ಕೊಕೇನ್ ಆರ್ಡರ್! ವೈದ್ಯೆ ಅರೆಸ್ಟ್​Doctor

ಹೈದರಾಬಾದ್:  (Doctor  ) ಕೊಕೇನ್ ವ್ಯವಹಾರ ಪ್ರಕರಣದಲ್ಲಿ ಖಾಸಗಿ ಆಸ್ಪತ್ರೆಯ ಸಿಇಒ, ಯುವ  ವೈದ್ಯೆಯನ್ನು ಬಂಧಿಸಲಾಗಿದೆ.

ಹೈದರಾಬಾದ್‌ನ ಒಮೆಗಾ ಆಸ್ಪತ್ರೆಯ ಸಿಇಒ ಡಾ. ನಮ್ರತಾ ಚಿಗುರುಪತಿ (34) ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.

ಆರು ತಿಂಗಳ ಹಿಂದೆ ಒಮೆಗಾ ಆಸ್ಪತ್ರೆಗಳ ಸಿಇಒ ಹುದ್ದೆಗೆ ರಾಜೀನಾಮೆ ನೀಡಿದ ನಮ್ರತಾ ಚಿಗುರುಪತಿ, ಮುಂಬೈ ಮೂಲದ ಕೊಕೈನ್​ ಪೂರೈಕೆದಾರ ವಂಶ್ ಧಕ್ಕರ್ ಅವರಿಂದ ಕೊರಿಯರ್ ಮೂಲಕ ಕೊಕೇನ್ ಪಡೆಯುತ್ತಿದ್ದಾಗ ಬಂಧಿಸಲಾಯಿತು.

ಮುಂಬೈನಲ್ಲಿ ಮಾದಕವಸ್ತು ವ್ಯಾಪಾರಿ ವಂಶ್ ಧಾಕರ್ ಎಂಬಾತನೇ ಮಹಿಳೆಗೆ ಕೊಕೇನ್ ತಲುಪಿಸಲು ನೀಡಿದ್ದ. ಅದನ್ನು ಅವರ ಸಹಾಯಕ ಬಾಲಕೃಷ್ಣನ್ ಅವರಿಗೆ ಹಸ್ತಾಂತರಿಸಲಾಯಿತು. ಈ ವೇಳೆ ಪೊಲೀಸರು ಆತನನ್ನೂ ಬಂಧಿಸಿದ್ದಾರೆ.

ಮಹಿಳೆ ವಾಟ್ಸಾಪ್ ಮೂಲಕ ಧಕ್ಕರ್ ಅವರನ್ನು ಸಂಪರ್ಕಿಸಿದರು. ನಂತರ ಐದು ಲಕ್ಷ ರೂಪಾಯಿ ಮೌಲ್ಯದ ಕೊಕೇನ್ ಆರ್ಡರ್ ಮಾಡಿದ. ಹಣವನ್ನು ಆನ್‌ಲೈನ್‌ನಲ್ಲಿ ವರ್ಗಾಯಿಸಲಾಗಿದೆ. ಪೊಲೀಸರಿಗೆ ದಾಖಲೆಗಳು ಸಿಕ್ಕಿವೆ.

ಪೊಲೀಸರು ವಿಚಾರಣೆ ನಡೆಸಿದಾಗ, ಮಹಿಳೆ ಬಹಳ ಸಮಯದಿಂದ ಮಾದಕ ದ್ರವ್ಯ ಸೇವಿಸುತ್ತಿರುವುದಾಗಿ ಹೇಳಿಕೊಂಡಿದ್ದಾಳೆ. ಮಹಿಳೆ ಇಲ್ಲಿಯವರೆಗೆ ಮಾದಕ ದ್ರವ್ಯಗಳಿಗಾಗಿ ಸುಮಾರು 70 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಪೊಲೀಸರು ಅವರಿಂದ 53 ಗ್ರಾಂ ಕೊಕೇನ್, ಎರಡು ಮೊಬೈಲ್ ಫೋನ್‌ಗಳು ಮತ್ತು ಹತ್ತು ಸಾವಿರ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ. ಮಹಿಳೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.