ನ್ಯೂಸ್

ನಮ್ಮ ಮೆಟ್ರೋ 3ನೇ ಹಂತಕ್ಕೆ ಶಂಕುಸ್ಥಾಪನೆ ನೆರವೇರಿಸಿದ 'ನಮೋ'; ಕಿತ್ತಳೆ ಮಾರ್ಗದ ಸಂಪೂರ್ಣ ಮಾಹಿತಿ ಇಲ್ಲಿದೆ | PM Modi

PM Modi in Bengaluru: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್​ಆರ್​) ಬೆಂಗಳೂರು ರೈಲು ನಿಲ್ದಾಣದಲ್ಲಿ ಬೆಂಗಳೂರು ಹಾಗೂ ಬೆಳಗಾವಿ ಸೇರಿ ಏಕಕಾಲದಲ್ಲಿ 3 ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲಿಗೆ ಚಾಲನೆ ನೀಡಿದ ಬೆನ್ನಲ್ಲೇ ರಾಜಧಾನಿ ಜನತೆಯ ಬಹುದಿನಗಳ ಕನಸಾದ ಹಳದಿ ಮಾರ್ಗವನ್ನು ಉದ್ಘಾಟಿಸಿದರು. ಇದರ ಬೆನ್ನಲ್ಲೇ ಮೈಸೂರು ರಸ್ತೆ, ಪೀಣ್ಯ, ಸುಂಕದಕಟ್ಟೆ, ನಾಗರಭಾವಿ ವೃತ್ತ ಈ ಭಾಗದ ಜನತೆಯು ಬಹಳ ದಿನಗಳಿಂದ ಎದುರುನೋಡುತ್ತಿದ್ದ ನಮ್ಮ ಮೆಟ್ರೋ ಮೂರನೇ ಹಂತಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ಕೆಎಸ್​ಆರ್​ ರೈಲು ನಿಲ್ದಾಣದಿಂದ ರಸ್ತೆ ಮಾರ್ಗದ ಮೂಲಕ ಆರ್​ವಿ ರಸ್ತೆ (ರಾಗಿಗುಡ್ಡ) ಮೆಟ್ರೋ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ 12 ರಿಂದ 12.30 ರ ನಡುವೆ ಹಳದಿ ಮಾರ್ಗಕ್ಕೆ ಚಾಲನೆ ನೀಡಿದರು. ಈ ವೇಳೆ ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್​ ಅವರು ಸಾಥ್​ ನೀಡಿದರು. ಆರ್​ವಿ ರಸ್ತೆಯಿಂದ ಬೊಮ್ಮಸಂದ್ರಕ್ಕೆ ಸಾಗಲಿರುವ ಹಳದಿ ಮೆಟ್ರೋ ಮಾರ್ಗ 19.15 ಕಿ.ಮೀ ಉದ್ದವಿದೆ. ಈ ಮಾರ್ಗದ ನಡುವೆ 16 ಸ್ಟೇಷನ್​ ಬರಲಿದ್ದು, ಇದನ್ನು 5,056.99 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.

3 ವಂದೇ ಭಾರತ್​ ರೈಲುಗಳಿಗೆ ಚಾಲನೆ

ಇಂದು (ಆಗಸ್ಟ್​ 08) ಬೆಳಗ್ಗೆ 10.30ರ ಸುಮಾರಿಗೆ ಎಚ್​ಎಎಲ್​ ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್​ನಲ್ಲಿ ಬಂದಿಳಿದ ಪ್ರಧಾನಿ ಮೋದಿ, ಬಳಿಕ ಕಾರಿನ ಮೂಲಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್​ಆರ್)​ ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದರು. ಅಲ್ಲಿ ಬೆಂಗಳೂರು- ಬೆಳಗಾವಿ ನಡುವಿನ ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲಿಗೆ ಚಾಲನೆ ನೀಡಿದರು. ಹಸಿರು ಬಾವುಟ ಹಾರಿಸುವ ಮೂಲಕ ರೈಲು ಪ್ರಯಾಣಕ್ಕೆ ಚಾಲನೆ ನೀಡಿದರು.

ಮೆಟ್ರೋ 3ನೇ ಹಂತಕ್ಕೆ ಶಂಕುಸ್ಥಾಪನೆ

ರಾಗಿಗುಡ್ಡದಲ್ಲಿ ಹಳದಿ ಮೆಟ್ರೋಗೆ ಚಾಲನೆ ನೀಡಿದ ಬಳಿಕ ಮೊದಲ ಹಳದಿ ಮೆಟ್ರೋದಲ್ಲಿ ಪ್ರಧಾನಿ ಜೊತೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​ ಮತ್ತು ವಿದ್ಯಾರ್ಥಿಗಳು ಪ್ರಯಾಣಿಸಿದರು. ಎಲೆಕ್ಟ್ರಾನಿಕ್ ಸಿಟಿಯವರೆಗೆ ಇದೇ ಮೆಟ್ರೋದಲ್ಲಿ ಸಾಗಿದ ಮೋದಿ, ಐಐಐಟಿ ಆಡಿಟೋರಿಯಂನಲ್ಲಿ ಮೆಟ್ರೋ ಮೂರನೇ ಹಂತಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ಕಿತ್ತಳೆ ಮಾರ್ಗ

ಮೆಟ್ರೋ 3ನೇ ಹಂತದ ಯೋಜನೆ ಆರೇಂಜ್​ ಲೈನ್ (ಕಿತ್ತಳೆ ಮಾರ್ಗ)​ ಆಗಿದೆ. ಇದು 44.65 ಕಿ.ಮೀ ದೂರ ಹೊಂದಿದ್ದು, ಇದನ್ನು ಅಂದಾಜು 15,611 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಈ ಮಾರ್ಗದ ರೈಲು ಜೆಪಿ ನಗರ 4ನೇ ಫೇಸ್​ನಿಂದ ಕೆಂಪಾಪುರದವರೆಗೆ ಸಾಗಲಿದೆ. ಒಟ್ಟು 31 ನಿಲ್ದಾಣಗಳು ಆರೆಂಜ್​ ಲೈನ್​ಗೆ ಒಳಪಟ್ಟಿದ್ದು, ಯೋಜನೆ 2030ರೊಳಗೆ ಪೂರ್ಣಗೊಳ್ಳಲಿದೆ.

ಯಾವೆಲ್ಲ ನಿಲ್ದಾಣಗಳು?

1. ಕೆಂಪಾಪುರ

2. ಹೆಬ್ಬಾಳ ರೈಲು ನಿಲ್ದಾಣ

3. ನಾಗಶೆಟ್ಟಿಹಳ್ಳಿ

4. ಬಿಇಎಲ್‌ ಸರ್ಕಲ್

5. ಮುತ್ಯಾಲನಗರ

6. ಪೀಣ್ಯ

7. ಕಂಠೀರವ ನಗರ

8. ಸ್ವಾತಂತ್ರ್ಯ ಯೋಧರ ಕಾಲೊನಿ

9. ಚಾಡೇಶ್ವರಿನಗರ

20. ನಾಗರಬಾವಿ ಬಿಡಿಎ

11. ಪಾಪರೆಡ್ಡಿಪಾಳ್ಯ

12. ವಿನಾಯಕ ಲೇಔಟ್

13. ನಾಗರಬಾವಿ ವೃತ್ತ

14. ಮೈಸೂರು ರಸ್ತೆ

15. ದ್ವಾರಕಾನಗರ

16. ಹೊಸಹಳ್ಳಿ–ಕಡಬಗೆರೆ ಎರಡನೇ ಕಾರಿಡಾರ್‌

17. ಹೊಸಹಳ್ಳಿ

18. ಕಾಮಾಕ್ಷಿಪಾಳ್ಯ

19. ಕೆ.ಎಚ್‌.ಬಿ.ಕಾಲೊನಿ

20. ಸುಮನಹಳ್ಳಿ ಕ್ರಾಸ್

21. ಸುಂಕದಕಟ್ಟೆ‌

22. ಹೇರೋಹಳ್ಳಿ

23. ಬ್ಯಾಡರಹಳ್ಳಿ

24. ಕಾಮತ್‌ ಲೇಔಟ್

25. ಕಡಬಗೆರೆ