ಬೆಂಗಳೂರು: ( Namma Metro ) ಮೆಟ್ರೋ ಕಾಮಗಾರಿ ಸಿಬ್ಬಂದಿಯ ಎಡವಟ್ಟಿಗೆ ಆಟೋ ಚಾಲಕ ಬಲಿಯಾಗಿದ್ದಾನೆ. ಯಲಹಂಕ ಬಳಿಕ ಕೋಗಿಲು ಕ್ರಾಸ್ ಬಳಿ ಭೀಕರ ದುರಂತ ಸಂಭವಿಸಿದೆ.
ಮೃತ ದುರ್ದೈವಿಯೂ ಹೆಗ್ಗಡೆನಗರ ನಿವಾಸಿ ಆಟೋ ಚಾಲಕ ಖಾಸೀಂ ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ 12.30ರ ಸುಮಾರಿಗೆ ಮೆಟ್ರೋ ಪಿಲ್ಲರ್ಗೆ ತಡೆಗೋಡೆಯಾಗಿ ನಿಲ್ಲಿಸುವ ವಯಾಡಕ್ಟ್ ಅನ್ನು ಲಾರಿಯಲ್ಲಿ ತಗೊಂಡು ಹೋಗಲಾಗಿತ್ತು. ಇದೇ ವೇಳೆ ಲಾರಿ ಟರ್ನ್ ತೆಗೆದುಕೊಳ್ಳುತ್ತಿದ್ದ ಸಮಯದಲ್ಲಿ, ಘಟನೆ ಸಂಭವಿಸಿದೆ.
ಲಾರಿ ಚಾಲಕ ಕೋಗಿಲು ಕ್ರಾಸ್ ಮೂಲಕ ವೇಗವಾಗಿ ಸಾಗುತ್ತಿದ್ದಾಗ ವಯಾಡೆಕ್ಟ್ ಪಿಲ್ಲರ್ ಏಕಾಏಕಿ ಉರುಳಿದಿದೆ. ಅದೇ ವೇಳೆ ಲಾರಿ ಪಕ್ಕದಲ್ಲೇ ಆಟೋ ಕೂಡ ನಿಂತಿತ್ತು. ಆಟೋದಲ್ಲಿದ್ದ ಪ್ರಯಾಣಿಕರು ಲಾರಿ ಕಂಡ ತಕ್ಷಣ ಇಳಿದಿದ್ದಾರೆ. ಆದ್ರೆ, ಆಟೋ ಚಾಲಕ ಇಳಿಯುವಷ್ಟರಲ್ಲಿ ವಯಾಡೆಕ್ಟ್ ಆಟೋ ಮೇಲೆಯೇ ಉರುಳಿದೆ. ಈ ದುರಂತದಲ್ಲಿ ಆಟೋ ನುಜ್ಜುಗುಜ್ಜಾಗಿದ್ದು, ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.