ನ್ಯೂಸ್

ನಾಮದೇವಗೆ "ಯುನಿಟಿ ಇನ್​ ಡೈವಸ್ರಿಟಿ ಅವಾರ್ಡ'

Haveri - Kariyappa Aralikatti

ರಾಣೆಬೆನ್ನೂರ: ಕೋಲ್ಕತ್ತಾದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ದೇಶ ಕಾ ರಂಗ ಅವಾರ್ಡ- ರಾಷ್ಟ್ರಮಟ್ಟದ ಚಿತ್ರಕಲಾ ಪ್ರದರ್ಶನ ಹಾಗೂ ಸ್ಪರ್ಧೆಯಲ್ಲಿ ನಗರದ ಕಲಾವಿದ ನಾಮದೇವ ಕಾಗದಗಾರ ಅವರಿಗೆ "ಯುನಿಟಿ ಆ್ಯಂಡ್​ ಪೀಸ್​' ( ಏಕತೆ ಮತ್ತು ಶಾಂತಿ) ಮಿಶ್ರ ಮಾಧ್ಯಮದ ಕಲಾಕೃತಿಗೆ "ಯುನಿಟಿ ಇನ್​ ಡೈವಸ್ರಿಟಿ ಅವಾರ್ಡ' ಲಭಿಸಿದೆ.

ಕಲಾ ಗ್ಯಾಲರಿಯ ಫೌಂಡರ್​ ಸುಮಿತಾ ಚಕ್ರವತಿರ್ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಪ್ರದರ್ಶನದಲ್ಲಿ ದೇಶದ ನೂರಾರು ಕಲಾವಿದರು ಭಾಗವಹಿಸಿದ್ದರು.