ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮೆಲಾನಿಯಾ ಟ್ರಂಪ್ ಅವರು ಸಬರಮತಿ ಆಶ್ರಮದಿಂದ ಹೊರಟು ಮೊಟೆರಾ ಕ್ರೀಡಾಂಗಣಕ್ಕೆ ತಲುಪಿದರು.
ಜಗತ್ತಿನ ಅತಿದೊಡ್ಡ ಕ್ರೀಡಾಂಗಣವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೊಟೆರಾ ಸ್ಟೇಡಿಯಂನ್ನು ಟ್ರಂಪ್ ಉದ್ಘಾಟನೆ ಮಾಡಿದ ಬಳಿ ಇಲ್ಲಿ 'ನಮಸ್ತೆ ಟ್ರಂಪ್' ಅದ್ದೂರಿ ಸಮಾರಂಭ ನಡೆಯಲಿದೆ.
ದಿಗ್ಗಜರ ಆಗಮನಕ್ಕೂ ಮೊದಲೇ ಸ್ಟೇಡಿಯಂನಲ್ಲಿ ಹಾಡು, ಸಂಗೀತ, ನೃತ್ಯಗಳು ಪ್ರಾರಂಭವಾಗಿವೆ. ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ದೇಶದ 1.10 ಲಕ್ಷ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ.
ಈಗಾಗಲೇ ಕ್ರೀಡಾಂಗಣದಲ್ಲಿ ಜನಸಮೂಹ ಸಾಗರೋಪಾದಿಯಲ್ಲಿ ನೆರೆದಿದೆ. ಇಲ್ಲಿ ಟ್ರಂಪ್ ಭಾಷಣ ಮಾಡಲಿದ್ದಾರೆ. (ಏಜೆನ್ಸೀಸ್)