ಅಹಮದಾಬಾದ್: ಇನ್ನು ಸ್ವಲ್ಪ ಹೊತ್ತಲ್ಲಿ ಭಾರತಕ್ಕೆ ಆಗಮಿಸಲಿರುವ ಅಮೆರಿಕ ಅಧ್ಯಕ್ಷರನ್ನು ಸ್ವಾಗತಿಸಲು ಪ್ರಧಾನಿ ನರೇಂದ್ರ ಮೋದಿಯವರು ಅಹಮದಾಬಾದ್ ತಲುಪಿದ್ದು, ಏರ್ಪೋರ್ಟ್ನಲ್ಲಿಯೇ ಕಾಯುತ್ತಿದ್ದಾರೆ.
ಅಹಮದಾಬಾದ್ನ ರಸ್ತೆಗಳ ಇಕ್ಕೆಲಗಳಲ್ಲಿ ಸಾವಿರಾರು ಜನರು ಸರತಿಸಾಲಿನಲ್ಲಿ ನಿಂತಿದ್ದಾರೆ. ನೃತ್ಯ ಪ್ರದರ್ಶನ ನೀಡುವವರು ಈಗಾಗಲೇ ನೃತ್ಯ ಮಾಡುತ್ತಿದ್ದಾರೆ. ಮೊಟೆರಾ ಸ್ಟೇಡಿಯಂನಲ್ಲೂ ಕೂಡ ಜನರು ತುಂಬಿದ್ದಾರೆ. ಕ್ರೀಡಾಂಗಣದ ವೇದಿಕೆ ಮೇಲೆ ಕೂಡ ಸಾಂಸ್ಕೃತಿಕ ಕಾರ್ಯಕ್ರಮ ಪ್ರಾರಂಭವಾಗಿದೆ.
ಟ್ರಂಪ್ ಅವರು ಮಧ್ಯಾಹ್ನ 12.15ಕ್ಕೆ ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಆಶ್ರಮದಲ್ಲಿ ಕೂಡ ಬಿಗಿ ಭದ್ರತೆ ಏರ್ಪಡಿಸಲಾಗಿದೆ. (ಏಜೆನ್ಸೀಸ್)