ನ್ಯೂಸ್

ವಿದ್ಯುತ್​ ಕಂಬಕ್ಕೆ ಡಿಕ್ಕಿ ಹೊಡೆದ ಭಜರಂಗಿ ಸಿನಿಮಾ ಕಲಾವಿದರ ಬಸ್​: ಕೂದಲೆಳೆ ಅಂತರದಲ್ಲಿ ಕಲಾವಿದರು ಅಪಾಯದಿಂದ ಪಾರು

manjunatha

ನೆಲಮಂಗಲ: ಹ್ಯಾಟ್ರಿಕ್​ ಹಿರೋ ಶಿವರಾಜ್​ ಕುಮಾರ್​ ಅಭಿನಯದ ಭಜರಂಗಿ-2 ಸಿನಿಮಾದ ಸೆಟ್​ ಬೆಂಕಿಗೆ ಆಹುತಿಯಾದ ಬೆನ್ನಲ್ಲೆ ಚಿತ್ರ ತಂಡ ಸಂಚರಿಸುತ್ತಿದ್ದ ಬಸ್​ ಅಪಘಾತಕ್ಕೆ ತುತ್ತಾಗಿದೆ.

ನೆಲಮಂಗಲದ ಬಳಿ ಇರುವ ಮೋಹನ್​ ಬಿ ಕೆರೆ ಸ್ಟುಡಿಯೋಗೆ ಬೆಂಗಳೂರಿನಿಂದ ಕಲಾವಿದರು ಸಂಚರಿಸುತ್ತಿದ್ದ ಬಸ್​ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿಗೆ ಡಿಕ್ಕಿ ಹೊಡೆದು ನಂತರ ವಿದ್ಯುತ್​ ಕಂಬಕ್ಕೆ ಅಪ್ಪಳಿಸಿ ನಿಂತಿತು.

ಬಸ್​ ಅಪ್ಪಳಿಸಿದ ರಭಸಕ್ಕೆ ವಿದ್ಯುತ್​ ಕಂಬ ತುಂಡಾಗಿ ಬಸ್​ ಮೇಲೆ ಬಿತ್ತು. ತಂತಿ ಬಿದ್ದರೂ ಯಾವುದೇ ಅಪಾಯ ಸಂಭವಿಸಿಲ್ಲ. ಕಲಾವಿದರು ಅಲ್ಪದರದಲ್ಲೇ ಅಪಾಯದಿಂದ ಪಾರಾದರು.

ಸ್ಟುಡಿಯೋದಲ್ಲಿ ಇತ್ತೀಚೆಗೆ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಸೆಟ್​ಗೆ ಬೆಂಕಿ ಹರಡಿ ಅವಘಡ ಸಂಭವಿಸಿತ್ತು. ಈಗ ಅಪಘಾತ ಸಂಭವಿಸಿರುವುದು ಚಿತ್ರತಂಡಕ್ಕೆ ಭೀತಿ ಮೂಡಿಸಿದೆ. (ದಿಗ್ವಿಜಯ ನ್ಯೂಸ್​)