ಹೈದರಾಬಾದ್: ಸಚಿವೆ ಎಲ್ಲಿಯೂ ಮಲಗಲು ಹೇಳಿಲ್ಲ, ಮಾನನಷ್ಟ ಪ್ರಕರಣ ತಮಾಷೆ ಮತ್ತು ಹಾಸ್ಯಾಸ್ಪದ ಎಂದು ಹಿರಿಯ ನಟ ನಾಗಾರ್ಜುನ ದಾಖಲಿಸಿರುವ ಮಾನನಷ್ಟ ಮೊಕದ್ದಮೆ(Nagarjuna defamation case) ತೆಲಂಗಾಣ ಸಚಿವೆ ಕೊಂಡಾ ಸುರೇಖ ಪರ ವಕೀಲೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ತನ್ನ ಕುಟುಂಬದ ವಿರುದ್ಧ ತೆಲಂಗಾಣ ಸಚಿವೆ ಕೊಂಡಾ ಸುರೇಖಾ ನಾಲಿಗೆ ಹರಿಬಿಟ್ಟಿದ್ದನ್ನು ವಿರೋಧಿಸಿ ನಟ ನಾಗಾರ್ಜುನ ಮಾನನಷ್ಟ ಮೊಕದ್ದಮೆ ದಾಖಲಿಸಿರುವುದು ತಿಳಿದ ಸಂಗತಿಯೇ. ಇದರ ಭಾಗವಾಗಿ ನಾಗಾರ್ಜುನ ನಾಂಪಲ್ಲಿ ಕೋರ್ಟ್‌ಗೆ ಹಾಜರಾಗಿದ್ದರು. ಸಚಿವೆ ಹೇಳಿಕೆಗಳು ತಮ್ಮ ಕುಟುಂಬವನ್ನು ಬೆಚ್ಚಿಬೀಳಿಸಿದ್ದು, ತೀವ್ರ ಮಾನಸಿಕ ಯಾತನೆ ಅನುಭವಿಸಿ್ದೇವೆ ಎಂದು ನಾಗಾರ್ಜುನ್ ಪೀಠದ ಮುಂದೆ ಹೇಳಿದರು. ಆದರೆ, ಕೊಂಡಾ ಸುರೇಖಾ ಪರ ವಕೀಲೆ ಸುದ್ದಿಗೋಷ್ಠಿಯಲ್ಲಿ ಸಂಚಲನ ಹೇಳಿಕೆ ನೀಡಿದರು. ಸುರೇಖಾ ಎಲ್ಲಾದರೂ ಮಲಗಲು ಹೇಳಿದ್ದರೇ? ಅಶ್ಲೀಲತೆ ಎಂದರೆ ಏನು ಎಂದು ಪ್ರಶ್ನಿಸಿದರು.
ಇದು ಅವರಿಗೆ ಮಾಡಿದ ಅವಮಾನದಂತೆ ತೋರುತ್ತಿರುವುದು ತಮಾಷೆಯಾಗಿದೆ. ಇದು ನಮಗೂ ನಗೆ ತರಿಸುವಂತಿದೆ. ನಟಿ ಸಮಂತಾಗೆ ಕ್ಷಮೆಯಾಚಿಸಲಿಲ್ಲ ಎಂದು ಕೇಳುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಹೇಳಿದರು.
ಆದರೆ ಒಬ್ಬ ಮಹಿಳೆಯಾಗಿ ನೀವು ಸುರೇಖಾ ಅವರ ಕಾಮೆಂಟ್‌ಗಳನ್ನು ಸಮರ್ಥಿಸುತ್ತೀರಾ? ಎಂಬ ಪ್ರಶ್ನೆಗೆ ಆಕೆ ಏನು ತಪ್ಪು ಹೇಳಿದ್ದಾರೆ? ಸಿನಿಮಾ ಕ್ಷೇತ್ರ ಏನು ಎಂದು ಎಲ್ಲರಿಗೂ ಗೊತ್ತು. ನಾಯಕ, ನಾಯಕಿ ನಡೆ ಎಲ್ಲರಿಗೂ ಗೊತ್ತು ಎಂದು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ಪೀಠ ಮೊದಲ ಸಾಕ್ಷಿಯಾಗಿ ವಕೀಲೆ ಸುಪ್ರಿಯಾ ಹೇಳಿಕೆಯನ್ನೂ ದಾಖಲಿಸಿಕೊಂಡಿದೆ.
ಸಭೆಯೊಂದರಲ್ಲಿ ಸಚಿವೆ ಕೊಂಡಾ ಸುರೇಖಾ ಅವರು ಕೆಟಿಆರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ನಾಗಾರ್ಜುನಾಗೆ ಸೇರಿದ ಎನ್ ಕನ್ವೆನ್ಷನ್ ಹಾಲ್ ಅನ್ನು ಕೆಡವದಿರಲು ಸೊಸೆ ಸಮಂತಾ ಅವರನ್ನು ಕೆಟಿಆರ್ ಬಳಿ ಕಳುಹಿಸಬೇಕಿತ್ತು. ಇದಕ್ಕೆ ಒಪ್ಪದ ಕಾರಣ ಡೈವರ್ಸ್ ನೀಡಲಾಗಿದೆ ಎಂದು ಸುರೇಖಾ ಹೇಳಿದ್ದರು.
ಸಮಂತಾ ನಾಗ ಚೈತನ್ಯ ವೈಯುಕ್ತಿಕ ಕಾರಣಗಳಿಂದ ಬೇರ್ಪಟ್ಟಿದ್ದು ಗೊತ್ತೇ ಇದೆ.