ನಗರದ ವನ್ಯಶ್ರೀ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಸಂಘರ್ಷ ಸಮಿತಿ ಸಭೆಯನ್ನು ರಾಜ್ಯಾಧ್ಯಕ್ಷ ಜಿ.ಎಸ್.ಮೃತ್ಯುಂಜಯ ಸ್ವಾಮಿ, ರಾಷ್ಟ್ರೀಯ ಸಂಯೋಜಕ ರಮಾಕಾಂತ್ ನರಗುಂದ ಉದ್ಘಾಟಿಸಿದರು. ಆರ್.ಸುಬ್ಬಣ್ಣ , ಎಚ್.ತಿಮ್ಮಪ್ಪ, ಮುಂಜುನಾಥ, ಪುಟ್ಟಾಚಾರ್, ಕುಲಕರ್ಣಿ, ಕೆ.ಆರ್.ನಾಗರಾಜ, ಟಿ.ಜಿ.ಬಸವರಾಜಯ್ಯ ಇದ್ದರು. 
ನ್ಯೂಸ್

ಇಪಿಎಸ್ ರಾಷ್ಟ್ರೀಯ ಸಂಘರ್ಷ ಸಮಿತಿಗೆ ನಾಗರಾಜ ಅಧ್ಯಕ್ಷ

ಶಿವಮೊಗ್ಗ: ಇಪಿಎಸ್ 95 ಪಿಂಚಣಿ ಕುರಿತು ರಾಷ್ಟ್ರೀಯ ಸಂಘರ್ಷ ಸಮಿತಿಯನ್ನು ರಚನೆ ಮಾಡಲಾಗಿದ್ದು ಶಿವಮೊಗ್ಗ ಕೆಎಸ್‌ಆರ್‌ಟಿಸಿಯ ನಿವೃತ್ತ ಸಹಾಯಕ ಸಂಚಾರ ನಿರೀಕ್ಷಕ ಕೆ.ಆರ್.ನಾಗರಾಜ ಅವರು ಸಮಿತಿ ಜಿಲ್ಲಾಧ್ಯಕ್ಷರಾಗಿ ಹಾಗೂ ಭದ್ರಾವತಿ ಎಂಪಿಎಂ ಕಾರ್ಖಾನೆಯ ನಿವೃತ್ತ ನೌಕರ ಟಿ.ಜಿ.ಬಸವರಾಜಯ್ಯ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಯಿತು.

ನಗರದ ವನ್ಯಶ್ರೀ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಸಮಿತಿ ರಾಜ್ಯಾಧ್ಯಕ್ಷ ಜಿ.ಎಸ್.ಮೃತ್ಯುಂಜಯ ಸ್ವಾಮಿ, ರಾಷ್ಟ್ರೀಯ ಸಂಯೋಜಕ ರಮಾಕಾಂತ್ ನರಗುಂದ ಸಮ್ಮುಖದಲ್ಲಿ ಸಮಿತಿ ರಚನೆ ಮಾಡಿ, ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.

ಬಳಿಕ ಇಪಿಎಸ್-95ಗೆ ಸಂಬಂಧಿಸಿದಂತೆ ಸದಸ್ಯರಿಗೆ ಮಾಸಿಕ 7,500 ರೂ., ಡಿಎ(ತುಟ್ಟಿ ಭತ್ಯೆ) ಹಾಗೂ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಗಳ ಬೇಡಿಕೆಯನ್ನು ಸಮಿತಿ ಮುಂದಿಡಲಾಯಿತು. ಸುಮಾರು 20ರಿಂದ 25 ಸಂಘ ಸಂಸ್ಥೆಗಳ ಪಿಂಚಣಿದಾರ ಸದಸ್ಯರು ಭಾಗವಹಿಸಿದ್ದರು. ರಾಷ್ಟ್ರೀಯ ಸಂಯೋಜಕ ಆರ್.ಸುಬ್ಬಣ್ಣ ಪ್ರಸ್ತಾವಿಕ ಮಾತನಾಡಿದರು. ಪ್ರಮುಖರಾದ ಎಚ್.ತಿಮ್ಮಪ್ಪ, ಮುಂಜುನಾಥ, ಪುಟ್ಟಾಚಾರ್, ಕುಲಕರ್ಣಿ ಸೇರಿ ಮತ್ತಿತರರು ಪಾಲ್ಗೊಂಡಿದ್ದರು.