ಸಿರಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಬಿ.ಆರ್.ನಾಗರಾಜ್ ಅವರನ್ನು ನಿರ್ದೇಶಕ ಎಸ್.ಪಿ.ಚೇತನ್ ಅಭಿನಂದಿಸಿದರು. ಎನ್.ಲೋಕೇಶಪ್ಪ, ಕೆ.ವಿ.ಅನಂತಕಿಣಿ, ವೆಂಕಟೇಶಪ್ಪ, ಡಿ.ಮಹೇಶ್ವರಪ್ಪ, ಮೀನಾಕ್ಷಮ್ಮ, ಜಿ.ಬಿ.ಲತಾ, ಫರೀನ್‌ಬಾನು, ನಾಗರಾಜ್, ಎಚ್.ಮಂಜಪ್ಪ, ಕೆ.ಎಚ್.ಛಾಯಪ್ಪ, ಎಸ್.ಸಿದ್ದರಾಮಪ್ಪ ಇದ್ದರು.  
ನ್ಯೂಸ್

ಸಿರಿಗೆರೆ ಪಿಕೆಪಿಎಸ್‌ಗೆ ನಾಗರಾಜ್ ನೂತನ ಅಧ್ಯಕ್ಷ

ಶಿವಮೊಗ್ಗ: ತಾಲೂಕಿನ ಸಿರಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಆರ್.ನಾಗರಾಜ್ ಮತ್ತು ಉಪಾಧ್ಯಕ್ಷೆಯಾಗಿ ನಾಗಮ್ಮ ಅವಿರೋಧವಾಗಿ ಆಯ್ಕೆಯಾದರು.

ಬುಧವಾರ ಚುನಾವಣಾಧಿಕಾರಿ ಜೆ.ಲತಾ ಅವರ ಅಧ್ಯಕ್ಷತೆಯಲ್ಲಿ ಆಡಳಿತ ಮಂಡಳಿ ಸಭೆ ಬಳಿಕ ಚುನಾವಣೆ ನಡೆಸಲಾಯಿತು. ನಿರ್ದೇಶಕರಾದ ಎಸ್.ಪಿ.ಚೇತನ್, ಎನ್.ಲೋಕೇಶಪ್ಪ, ಕೆ.ವಿ.ಅನಂತಕಿಣಿ, ವೆಂಕಟೇಶಪ್ಪ, ಡಿ.ಮಹೇಶ್ವರಪ್ಪ, ಮೀನಾಕ್ಷಮ್ಮ, ಜಿ.ಬಿ.ಲತಾ, ಫರೀನ್‌ಬಾನು, ನಾಗರಾಜ್, ಎಚ್.ಮಂಜಪ್ಪ, ಕ್ಷೇತ್ರಾಧಿಕಾರಿ ಕೆ.ಎಚ್.ಛಾಯಪ್ಪ, ಸಂಘದ ಮುಖ್ಯ ಕಾರ್ಯನಿರ್ವಾಹಕ ಎಸ್.ಸಿದ್ದರಾಮಪ್ಪ, ಬಿ.ದೊಡ್ಡಪ್ಪ ಸೇರಿ ಸಿರಿಗೆರೆ, ಇಟ್ಟಿಗೆಹಳ್ಳಿ, ಬಿಲ್ವಾಡೇರಕೊಪ್ಪ ಮತ್ತು ಕಾಚಿಕೊಪ್ಪ ಗ್ರಾಮಸ್ಥರು ಉಪಸ್ಥಿತರಿದ್ದರು.