ನ್ಯೂಸ್

ಗುಡಿಸಲು ನಿವಾಸಿಗಳಿಗೆ ಹಾಲು ವಿತರಿಸಿ ನಾಗರ ಪಂಚಮಿ ಆಚರಣೆ

ರಾಣೆಬೆನ್ನೂರ: ನಾಗರ ಪಂಚಮಿ ನಿಮಿತ್ತ ತಾಲೂಕು ಮಾನವ ಬಂಧುತ್ವ ವೇದಿಕೆ ವತಿಯಿಂದ ಸೋಮವಾರ ನಗರದ ಮಾಗೋಡ ರಸ್ತೆಯ ಗುಡಿಸಲು ನಿವಾಸಿಗಳಿಗೆ ಹಾಲು ವಿತರಣೆ ಮಾಡಲಾಯಿತು.
ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಚಂದ್ರಣ್ಣ ಬೇಡರ ಮಾತನಾಡಿ, ಮನುಷ್ಯನ ಯಾವುದೆ ತಿನ್ನುವ ಪದಾರ್ಥಗಳನ್ನು ಹಾಳು ಮಾಡದೆ ಬಡವರಿಗೆ ವಿತರಣೆ ಮಾಡಬೇಕು. ಇಂಥ ಕಾರ್ಯಗಳನ್ನು ದೇವರು ಸಹ ಮೆಚ್ಚುತ್ತಾನೆ ಎಂದರು.
ವೇದಿಕೆಯ ಸಂಚಾಲಕ ಕರಬಸಪ್ಪ ಕೂಲೇರ, ಪ್ರಮುಖರಾದ ಬಸವರಾಜ ತಳವಾರ, ಸಂಜೀವ ಶಿಡಗನಾಳ ಮತ್ತಿತರರು ಪಾಲ್ಗೊಂಡಿದ್ದರು.