ನ್ಯೂಸ್

ಹಿರಿಯರನು ಹೇಗೆ ಗೌರವಿಸಬೇಕೆಂದು ನೀವು ನಮಗೆ ಕಲಿಸಬೇಕಿಲ್ಲ; ನಿರ್ಮಾಪಕ ನಾಗ ವಂಶಿ ಹೀಗೆಳಿದ್ದೇಕೆ? | Naga Vamsi

ಹೈದರಾಬಾದ್​​: ಬಾಲಿವುಡ್ ಮತ್ತು ದಕ್ಷಿಣ ಚಿತ್ರರಂಗದ ಬಗ್ಗೆ ತೆಲುಗು ಚಿತ್ರ ನಿರ್ಮಾಪಕ ನಾಗ ವಂಶಿ(Naga Vamsi ) ನೀಡಿರುವ ಹೇಳಿಕೆಯು ವೈರಲ್​ ಆಗಿದ್ದು, ವಿವಾದದ ಕುರಿತು ನಿರ್ಮಾಪಕ ನಾಗ ವಂಶಿ ಮೌನ ಮುರಿದಿದ್ದಾರೆ. ಬೋನಿ ಕಪೂರ್ ಮತ್ತು ನಾಗ ವಂಶಿ ನಡುವಿನ ಮಾತುಕತೆಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಆ ಚರ್ಚೆಗೆ ಸಂಬಂಧಿಸಿದಂತೆ ನಾಗ ವಂಶಿ ನಾನು ಬೋನಿ ಕಪೂರ್​ ಅವರನ್ನು ಅವಮಾನಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಚರ್ಚೆಯಲ್ಲಿ ನಾಗ ವಂಶಿ, ಬೋನಿ ಕಪೂರ್​​ ಅವರಿಗೆ ದಕ್ಷಿಣ ಚಿತ್ರರಂಗವು ಬಾಲಿವುಡ್ ತನ್ನ ದೃಷ್ಟಿಕೋನವನ್ನು ಬದಲಾಯಿಸುವಂತೆ ಮಾಡಿದೆ ಎಂದು ಹೇಳುತ್ತಾರೆ. ಇದನ್ನು ಒಪ್ಪದ ಬೋನಿ ಕಪೂರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಕ್ಲಿಪ್​ ವೈರಲ್​ ಆಗುತ್ತಿದ್ದರಂತೆ ಬೋನಿ ಕಪೂರ್ ಅವರಂತಹ ಹಿರಿಯ ನಿರ್ಮಾಪಕರನ್ನು ನಾಗ ಅವಮಾನಿಸಿದ್ದಾರೆ ಎಂದು ಹಲವರು ಆರೋಪಿಸಿದರು.

ಅವರ ಹೇಳಿಕೆಯನ್ನು ಸ್ಪಷ್ಟಪಡಿಸಿದ ನಾಗ ವಂಶಿ, ಹಿರಿಯರನ್ನು ಹೇಗೆ ಗೌರವಿಸಬೇಕೆಂದು ನೀವು ನಮಗೆ ಕಲಿಸಬೇಕಾಗಿಲ್ಲ. ನಾವು ನಿಮ್ಮ ಹುಡುಗರಿಗಿಂತ ಹೆಚ್ಚಾಗಿ ಬೋನಿ ಜಿ ಅವರನ್ನು ಗೌರವಿಸುತ್ತೇವೆ. ಆ ಸಂಭಾಷಣೆಯಲ್ಲಿ ಬೋನಿ ಜಿ ಬಗ್ಗೆ ಯಾವುದೇ ಅಗೌರವ ಇರಲಿಲ್ಲ. ಅದು ಒಂದು ಆರೋಗ್ಯಕರ ಚರ್ಚೆ ಅಷ್ಟೆ. ನಾನು ಮತ್ತು ಬೋನಿ ಜೀ ಚೆನ್ನಾಗಿ ನಗುತ್ತಿದ್ದೆವು ಮತ್ತು ಒಬ್ಬರನ್ನೊಬ್ಬರು ತಬ್ಬಿಕೊಂಡೆವು. ಆದ್ದರಿಂದ ದಯವಿಟ್ಟು ಆ ಕ್ಲಿಪ್​ ನೋಡಿ ಯಾವುದೇ ತೀರ್ಮಾನಕ್ಕೆ ಬರಬೇಡಿ ಎಂದು ಹೇಳಿದ್ದಾರೆ.

ಈ ಚರ್ಚೆ ವೈರಲ್ ಆದ ನಂತರ ಚಲನಚಿತ್ರ ನಿರ್ದೇಶಕರಾದ ಸಂಜಯ್ ಗುಪ್ತಾ, ಹಂಸಲ್ ಮೆಹ್ತಾ ಮತ್ತು ಸಿದ್ಧಾರ್ಥ್ ಆನಂದ್ ಅವರು ನಾಗ ವಂಶಿಯನ್ನು ಟೀಕಿಸಿದರು. ಸಾಮಾಜಿಕ ಜಾಲತಾಣಲದಲ್ಲಿ ಅನೇಕ ಬಳಕೆದಾರರು ನಾಗ ವಂಶಿ ವರ್ತನೆ ಸರಿಯಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.(ಏಜೆನ್ಸೀಸ್​​)