ನ್ಯೂಸ್

Naga Chaitanya & Sobhita Dhulipala | ಮದುವೆ ಸಮಾರಂಭ ಆರಂಭ; ಫೋಟೋ ವೈರಲ್​

ಹೈದರಾಬಾದ್​​: ಟಾಲಿವುಡ್(Tollywood) ನಟ ನಾರ್ಗಾಜುನ ಪುತ್ರ ನಾಗ ಚೈತನ್ಯ ಹಾಗೂ ಸೋಭಿತಾ ಧೂಳಿಪಾಲ(Naga Chaitanya & Sobhita Dhulipala) ಆಗಸ್ಟ್ 9 ರಂದು ನಾಗಾರ್ಜುನ ಮನೆಯಲ್ಲಿ ಕೆಲವು ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ವಿಚಾರ ಗೊತ್ತೆ ಇದೆ. ಆ ಸಮಯದಲ್ಲಿ ಮದುವೆ ಯಾವಾಗ ಎಂಬುದನ್ನು ಎರಡು ಕುಟುಂಬಗಳು ಬಹಿರಂಗಪಡಿಸಿರಲಿಲ್ಲ.

ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ ದಂಪತಿಗಳು ಆಗಸ್ಟ್‌ನಲ್ಲಿ ಖಾಸಗಿ ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಈಗ ನಾಗ ಚೈತನ್ಯ ಮತ್ತು ಸೋಭಿತಾ ಧೂಳಿಪಾಲ ತಮ್ಮ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಸಜ್ಜಾಗಿದ್ದಾರೆ. ಮದುವೆ ಕೆಲಸ ಶುರುವಾಗಿದೆ ಎಂಬುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸೋಭಿತಾ ಪ್ರೀ ವೆಡ್ಡಿಂಗ್ ಫಂಕ್ಷನ್‌ನ ಫೋಟೋಗಳು ವೈರಲ್​ ಆಗುತ್ತಿವೆ.

ಹಳದಿ ಶಾಸ್ತ್ರದ ಫೋಟೋಗಳನ್ನು ಸ್ವತಂ ಸೋಭಿತಾ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಗೋಧುಮ ರೈ ಪಸುಪು ದಂಚಟಂ ಆ್ಯಂಡ್​​ ಇಟ್​​ ಬಿಗಿನ್ಸ್​(Godhuma Raayi Pasupu danchatam And so it begins!) ​ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಪಸುಪು ದಂಚಟಂ ಎಂದರೆ: ಸಾಂಪ್ರದಾಯಿಕ ತೆಲುಗು ಪೂರ್ವ ವಿವಾಹ ಸಮಾರಂಭವಾಗಿದ್ದು, ಇದು ಮದುವೆಯ ಸಂಭ್ರಮದ ಆರಂಭವನ್ನು ಸೂಚಿಸುತ್ತದೆ. ಉತ್ತರ ಭಾರತದ ಮದುವೆಗಳಲ್ಲಿ ನೀವು ನೋಡುವ ಹಲ್ದಿ ಸಮಾರಂಭಗಳಿಗೆ ಹೋಲುತ್ತದೆ. ವೈರಲ್ ಫೋಟೊಗಳನ್ನು ನೋಡಿ ಅಭಿಮಾನಿಗಳು ಈಗ ಮದುವೆ ಎಲ್ಲಿ ನಡೆಯಲಿದೆ ಎಂದು ಊಹಿಸುತ್ತಾ ಕಾಮೆಂಟ್​ ಮಾಡುತ್ತಿದ್ದಾರೆ.

ಸೋಭಿತಾ ಧೂಳಿಪಾಲ ಅವರನ್ನು ಪ್ರೀತಿಸುವ ಮುನ್ನ ನಾಗ ಚೈತನ್ಯ ಅವರು ನಟಿ ಸಮಂತಾ ರುತ್ ಪ್ರಭು ಅವರನ್ನು ವಿವಾಹವಾಗಿದ್ದರು. 2017ರಲ್ಲಿ ಮದುವೆಯಾಗಿದ್ದ ಈ ಜೋಡಿ ನಾಲ್ಕು ವರ್ಷಗಳ ಬಳಿಕ ವಿಚ್ಛೇದನ ಪಡೆದರು. ಇದೀಗ ಚೈತನ್ಯಗೆ ಎರಡನೇ ಪ್ರೀತಿ ಸಿಕ್ಕಿದ್ದು ಸೋಭಿತಾ ಜತೆ ಹೊಸ ಜೀವನ ಆರಂಭಿಸಲಿದ್ದಾರೆ.(ಏಜೆನ್ಸೀಸ್​​)