Naga Chaitanya : ಟಾಲಿವುಡ್ ನಟ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಡಿಸೆಂಬರ್ 4 ರಂದು ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ, ನವದಂಪತಿ ತಮ್ಮ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಆದರೆ ಚೈತು ಯಾವಗಾಲೂ ಶೋಭಿತಾಳನ್ನು ಒಂದು ವಿಷಯ ಕೇಳುತ್ತಲೆ ಇರುತ್ತಾರಂತೆ. ಈ ಕುರಿತಾಗಿ ದಂಪತಿ ಹೇಳಿಕೊಂಡಿದ್ದಾರೆ.
ನಾಗ ಚೈತನ್ಯ ತೆಲುಗು ಮಾತನಾಡುತ್ತಿದ್ದರೂ, ಚೆನ್ನೈನಲ್ಲಿ ಹುಟ್ಟಿ ಬೆಳೆದು ಇಂಗ್ಲಿಷ್ ಮಾಧ್ಯಮವನ್ನು ಓದಿದ್ದರಿಂದ ಅವರು ಹೆಚ್ಚಾಗಿ ತಮಿಳು ಮತ್ತು ಇಂಗ್ಲಿಷ್ ಮಾತನಾಡುತ್ತಾರೆ. ಅವರು ತೆಲುಗಿನಲ್ಲಿ ಮಾತನಾಡಬಹುದಾದರೂ, ಅವರು ಸಂಪೂರ್ಣವಾಗಿ ಮತ್ತು ಸರಳವಾಗಿ ಮಾತನಾಡಲು ಬರುವುದಿಲ್ಲ.
ನಾಗ ಚೈತನ್ಯ ಮಾತನಾಡಿ, ಚಿತ್ರರಂಗದ ವಿವಿಧ ಭಾಷೆಯ ನಟರನ್ನು ಭೇಟಿಯಾಗುವುದರಿಂದ ಅವರು ತೆಲುಗು ಮತ್ತು ಇಂಗ್ಲಿಷ್ ಮಿಶ್ರಣವನ್ನು ಮಾತನಾಡುತ್ತೇನೆ. ಸರಳವಾಗಿ ಮಾತನಾಡಲು ಬರುವುದಿಲ್ಲ. ತೆಲುಗು ಮಾತನಾಡುವವರನ್ನು ಇಷ್ಟಪಡುತ್ತೇನೆ ಎಂದು ಹೇಳಿದರು.
ಸೋಭಿತಾ ಅವರಿಗೆ ಪರಿಚಯವಾದಾಗ ಆಕೆ ತೆಲುಗು ಹುಡುಗಿಯಾದ್ದರಿಂದ ತೆಲುಗಿನಲ್ಲೇ ಮಾತನಾಡಬೇಕು ಎಂಬ ಷರತ್ತು ಹಾಕಿದ್ದೇನು. ಸೋಭಿತಾ ಅವರೊಂದಿಗೆ ತೆಲುಗಿನಲ್ಲಿ ಮಾತನಾಡುವಂತೆ ಕೇಳುತ್ತಿರುತ್ತೇನೆ, ಇದರಿಂದ ತೆಲುಗು ಸುಧಾರಿಸುತ್ತದೆ ಎಂದು ನಾಗ ಚೈತನ್ಯ ಹೇಳಿದ್ದಾರೆ.
ತನ್ನ ಭಾಷಾ ಕೌಶಲ್ಯವನ್ನು ಸುಧಾರಿಸಲು ಸಹಾಯ ಮಾಡಲು ತನ್ನೊಂದಿಗೆ ತೆಲುಗಿನಲ್ಲಿ ಮಾತನಾಡಲು ನಾಗ ಚೈತನ್ಯ ಅವರು ಆಗಾಗ್ಗೆ ಶೋಭಿತಾ ಅವರನ್ನು ಕೇಳುತ್ತಾರಂತೆ ಎಂದು ಬಹಿರಂಗಪಡಿಸಿದ್ದಾರೆ.
ನಾಗಾರ್ಜುನ ಇತ್ತೀಚೆಗೆ ನಾಗ ಮತ್ತು ಸೋಭಿತಾ ಅವರ ಮದುವೆಯ ಮೊದಲ ಅಧಿಕೃತ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ, ನವವಿವಾಹಿತರಿಗೆ ಅಭಿಮಾನಿಗಳು ಹಾಗೂ ಸೆಲೆಬ್ರೆಟಿಗಳು ಕಾಮೆಂಟ್ ಮಾಡುವ ಮೂಲಕವಾಗಿ ಆಶೀರ್ವಾದವನ್ನು ವ್ಯಕ್ತಪಡಿಸಿದ್ದಾರೆ.