ಬೆಂಗಳೂರು: ಇಂದು ನಾಗರಪಂಚಮಿ ಹಬ್ಬದ ಹಿನ್ನಲೆಯಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಇತಿಹಾಸ ಪ್ರಸಿದ್ದ ಘಾಟಿ ಸುಬ್ರಮಣ್ಯ ಕ್ಷೇತ್ರಕ್ಕೆ ಹರಿದು ಬರುತ್ತಿದೆ ಭಕ್ತಸಾಗರ.
ನಾಗರಕಲ್ಲುಗಳಿಗೆ ಭಕ್ತರಿಂದ ಪೂಜೆ ಪುನಸ್ಕಾರ ನೆರವೇರುತ್ತಿದ್ದು, ನಾಗರಕಲ್ಲುಗಳನ್ನು ಶುದ್ಧೀಕರಿಸಿ ಹಾಲೆರೆದು ಭಕ್ತರು ಪೂಜೆ ಮಾಡುತ್ತಿದ್ದಾರೆ. ಇಂದು ನಾಗರಕಲ್ಲುಗಳಿಗೆ ಪೂಜೆ ಸಲ್ಲಿಸಿದರೆ ಅಣ್ಣಂದಿರಿಗೆ ಒಳ್ಳೆಯದಾಗುತ್ತದೆ ಎನ್ನುವುದು ಭಕ್ತರ ನಂಬಿಕೆ.
ಬೆಳಗ್ಗೆಯಿಂದಲೂ ಘಾಟಿಗೆ ಭಕ್ತರು ಆಗಮಿಸುತ್ತಿದ್ದು, ನಾಗರಕಲ್ಲುಗಳಿಗೆ ಪೂಜೆ ಸಲ್ಲಿಸಿ ಸರದಿ ಸಾಲಿನಲ್ಲಿ ನಿಂತು ಸುಬ್ರಹ್ಮಣ್ಯ ಸ್ವಾಮಿ ದರ್ಶನಕ್ಕೆ ಕಾಯುತ್ತಿದ್ದಾರೆ.