ವಿಜಯವಾಣಿ ಸುದ್ದಿಜಾಲ ಧಾರವಾಡ
ಸಪ್ತಕ ಬೆಂಗಳೂರು, ಸ್ವರ ಸಂವೇದನ ಪ್ರತಿಷ್ಠಾನ ವತಿಯಿಂದ ಇಲ್ಲಿನ ಸೃಜನಾ ರಂಗ ಮಂದಿರದಲ್ಲಿ ನ. 23ರಂದು ಸಂಜೆ 6 ಗಂಟೆಗೆ ಏರ್ಪಡಿಸಲಾಗಿದೆ.
ಜಿ. ಸೃಷ್ಟಿ ಸುರೇಶ ಸಿತಾರ ವಾದನ ನುಡಿಸಲಿದ್ದು, ಡಾ. ಶ್ರೀಹರಿ ದಿಗ್ಗಾವಿ ತಬಲಾ ಸಾಥ್ ನೀಡಲಿದ್ದಾರೆ. ನಂತರ ನಾಸಿಕ್ನ ಮಂಜಿರಿ ಅಸನಾರೆ ಗಾಯನ ಪ್ರಸ್ತುತಪಡಿಸುವರು. ಅವರಿಗೆ ತಬಲಾದಲ್ಲಿ ಶ್ರೀಧರ ಮಾಂಡ್ರೆ, ಗುರುಪ್ರಸಾದ ಹೆಗಡೆ ಸಾರಂಗಿ ಸಾಥ್ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.