ನ್ಯೂಸ್

ನಾನು ನಂದಿನಿ ಬೆಂಗಳೂರಿಗೆ ಬಂದೀನಿ; ಸಖತ್​​​ ಫೇಮಸ್​​​ ಆದ ವಿಕಿಪೀಡಿಯಾ ರೀಲ್ಸ್​​, ಒಂದೇ ದಿನದಲ್ಲಿ 5 ಮಿಲಿಯನ್​ ವೀಕ್ಷಣೆ

ಬೆಂಗಳೂರು: ನಾನು ನಂದಿನಿ ಬೆಂಗಳೂರಿಗ್ ಬಂದೀನಿ. ಪಿಜಿಲಿ ಇರ್ತೀನಿ ಐಟಿ ಕೆಲಸ ಮಾಡ್ತೀನಿ. ಊಟ ಸರಿ ಇಲ್ಲ ಅಂದ್ರೂನೂ ತಿಂತೀನಿ. ಬಂದಿದ್ ದುಡ್ ಎಲ್ಲಾ ಮನೇಗ್​ ಕಳಸ್ತೀನಿ. ಬಾರೇ ನಂದಿನಿ ಗೋಬಿ ತಿನ್ನಸ್ತೀನಿ. ಬಾರೇ ನಂದಿನಿ ಬೆಂಗಳೂರ್ ತೋರಸ್ತೀನಿ. ಬಾರೆ ನಂದಿನಿ ಪೇಢಾ ತಿನ್ನಸ್ತೀನಿ. ಬಾರೇ ನಂದಿನಿ ಪಿಚ್ಚರ್ ತೋರಸ್ತೀನಿ. ಏನೀ ಸುದ್ದಿ ಅಂದುಕೊಂಡ್ರಾ?


ಯಸ್​, ಇದು ‘I am barbie girl, In the barbie World’ ಎಂಬ ಇಂಗ್ಲಿಷ್​​ ಹಾಡಿನ ಕನ್ನಡ ವರ್ಷನ್​​. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.


2004ರಲ್ಲಿ ಸಣ್ಣ ಊರುಗಳಿಂದ ಐಟಿ ಕೆಲಸಕ್ಕೆಂದು ಬೆಂಗಳೂರಿಗೆ ಬಂದು ಕಷ್ಟಪಟ್ಟ ಹುಡುಗಿಯರ ಜೀವನಶೈಲಿಯನ್ನು ಈ ಹಾಡಿನ ಮೂಲಕ ತಿಳಿಸುವ ಪ್ರಯತ್ನವನ್ನ ಮಾಡಲಾಗಿದೆ. ಜೊತೆಗೆ ಈ ಹಾಡು ಹಾಸ್ಯಾಸ್ಪದವಾಗಿದ್ದು, ಜನರು ಇದನ್ನ ಸಿಕ್ಕಾಪಟ್ಟೆ ಶೇರ್​​ ಮಾಡಿದ್ದಾರೆ.


ಒಂದು ದಿನದ ಹಿಂದೆ ಫೇಸ್​ಬುಕ್​ನಲ್ಲಿ ಮತ್ತು ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಲಕ್ಷಾಂತರ ಜನರು ಲೈಕ್ ಮಾಡಿದ್ದು ಸಾವಿರಾರು ಜನರು ಈ ಪೋಸ್ಟ್​ ಅನ್ನು ಹಂಚಿಕೊಂಡಿದ್ದಾರೆ ಮತ್ತು ಪ್ರತಿಕ್ರಿಯಿಸಿದ್ದಾರೆ. ವಿಡಿಯೋ ಮಾಡಿದ ವಿಕಾಸ ಮತ್ತು ತಂಡದವನ್ನ ನೆಟ್ಟಿಗರು ಶ್ಲಾಘಿಸಿದ್ದಾರೆ.


ಇಂಗ್ಲಿಷ್ ಬಾರ್ಬಿ ಈ ಹಾಡನ್ನು ನೋಡಿದರೆ ಎದೆ ಒಡೆದುಕೊಂಡು ಸತ್ತು ಹೋಗುತ್ತಾಳೆ ಅಷ್ಟರ ಮಟ್ಟಿಗೆ ಹಾಸ್ಯಾಸ್ಪದವಾಗಿದೆ ಅಂತಾ ನೆಟ್ಟಿಗರು ಕಾಮೆಂಟ್​​ ಮಾಡಿದ್ದಾರೆ. ಇನ್ನು ವಿಡಿಯೋದಲ್ಲಿ ನಿಮ್ಮ ವೇಷ ಭೂಷಣವಂತೂ ತುಂಬಾನೆ ಫನ್ನಿಯಾಗಿದೆ ಎಂದು ಮತ್ತೊಬ್ಬರು ಕಾಮೆಂಟ್​​ ಮಾಡಿದ್ದಾರೆ.


ಈ ಹಾಡಿನಲ್ಲಿ ಬಂದ ಹಣವನ್ನೆಲ್ಲಾ ಮನೆಗೆ ಕಳಿಸುತ್ತಿದ್ದೆ ಎಂಬ ಸಾಲುಗಳಿದ್ದು, ನಾನು ಸಣ್ಣ ಊರಿನಿಂದ ಬಂದ ಹುಡುಗಿ. ಬೆಂಗಳೂರಂಥ ದೊಡ್ಡ ಪಟ್ಟಣಕ್ಕೆ ಬಂದು ಅನುಭವಿಸಿದ್ದೆಲ್ಲ ನೆನಪಾಯಿತು. ಆದರೆ ನಾನು ಎಂದಿಗೂ ಊರಿಗೆ ಹಣ ಕಳಿಸುತ್ತಿರಲಿಲ್ಲ ಎಂದು ಮತ್ತೊಬ್ಬರು ಕಾಮೆಂಟ್​​ ಮಾಡಿದ್ದಾರೆ.