ನ್ಯೂಸ್

Pink Pigeon; ಮುದ್ದಾದ ಪಿಂಕ್ ಪಾರಿವಾಳವನ್ನು ಎಂದಾದರೂ ನೋಡಿದ್ದೀರಾ?

ಅಮೆರಿಕಾ: ಪಾರಿವಾಳಗಳು ಸಾಮಾನ್ಯವಾಗಿ ಬೂದು, ಬಿಳಿ ಮತ್ತು ಕಂದು ಬಣ್ಣವನ್ನು ಹೊಂದಿರುತ್ತವೆ. ಕೆಲವು ಜಾತಿಯ ಪಾರಿವಾಳಗಳು ನೀಲಿ ಮತ್ತು ನೇರಳೆ ಸೇರಿದಂತೆ ಹಲವು ಬಣ್ಣಗಳಲ್ಲಿ ಬರುತ್ತವೆ. ಆದರೆ ಯುಕೆಯಲ್ಲಿ ಪಿಂಕ್ ಬಣ್ಣದ ಪಾರಿವಾಳ ಕಾಣಿಸಿಕೊಂಡು ಎಲ್ಲರನ್ನೂ ಅಚ್ಚರಿಗೆ ದೂಡಿದೆ.

ಯುಕೆಯ ಬರಿ ಟೌನ್ ಸೆಂಟರ್‌ನಲ್ಲಿ ಗುಲಾಬಿ ಪಾರಿವಾಳ ಕಾಣಿಸಿಕೊಂಡಾಗ ಯುಕೆ ಜನರಿಗೆ ಆಶ್ಚರ್ಯವಾಗಿದೆ. ಈ ಪಾರಿವಾಳ ಸ್ಥಳೀಯರು ನೀಡಿದ ಆಹಾರವನ್ನು ತಿನ್ನುತ್ತಿರುವುದು ಕಂಡುಬಂದಿದೆ. ಆದರೆ ಈ ಪಾರಿವಾಳವು ನೈಸರ್ಗಿಕವಾಗಿ ಗುಲಾಬಿಯಾಗಿದೆಯೇ? ಯಾರಾದರೂ ಅದನ್ನು ಬಣ್ಣಿಸಿದ್ದಾರೆಯೇ? ಎಂಬ ಅನುಮಾನವೂ ಅವರಿಗಿತ್ತು. ಈ ಪಾರಿವಾಳದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಾಗ ನೆಟ್ಟಿಗರು ಕೂಡ ಆಶ್ಚರ್ಯಚಕಿತರಾಗಿದ್ದಾರೆ.

ನ್ಯೂಯಾರ್ಕ್ ನಲ್ಲಿ ಗುಲಾಬಿ ಬಣ್ಣದ ಪಾರಿವಾಳವನ್ನು ರಕ್ಷಿಸಲಾಗಿತ್ತು. ಮ್ಯಾನ್‌ಹ್ಯಾಟನ್‌ನ ಮ್ಯಾಡಿಸನ್ ಸ್ಕ್ವೇರ್ ಪಾರ್ಕ್‌ನಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಪಕ್ಷಿಯನ್ನು ರಕ್ಷಿಸಲಾಯಿತು ಮತ್ತು ಚಿಕಿತ್ಸೆಗಾಗಿ ವೈಲ್ಡ್ ಬರ್ಡ್ ಫಂಡ್‌ಗೆ ಕರೆದೊಯ್ಯಲಾಗಿದೆ.