ನ್ಯೂಸ್

PHOTOS: ಮಾಸ್ಕ್ ಮರೆತುಬಿಟ್ಟರೇ ಮೈಸೂರು ರಾಜವಂಶಸ್ಥ ಯದುವೀರ್?

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾಕ್ಕೆ ಇಂದು ತೆರೆಬಿದ್ದಿದೆ. ಕರೊನಾ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಅತ್ಯಂತ ಸರಳವಾಗಿ ಆಚರಿಸಲಾಗಿದೆ. ಸೋಂಕಿನ ಭೀತಿಯಿಂದಾಗಿ ವಜ್ರಮುಷ್ಠಿ ಕಾಳಗ ನಡೆದಿಲ್ಲ. ತುಂಬ ಜನ ಪಾಲ್ಗೊಳ್ಳಲು ಅವಕಾಶವನ್ನೂ ಕೊಟ್ಟಿಲ್ಲ.

ಹಾಗೇ ದಸರಾ ಉತ್ಸವ, ಪೂಜೆಗಳಲ್ಲಿ ಪಾಲ್ಗೊಳ್ಳುವವರು ಸಾಮಾಜಿಕ ಅಂತರ ನಿಯಮ ಪಾಲನೆ ಮಾಡಬೇಕು, ಮಾಸ್ಕ್ ಧರಿಸಬೇಕು ಎಂದು ಹೇಳಲಾಗಿತ್ತು. ಆದರೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರೇ ಮಾಸ್ಕ್​ ಧರಿಸದೆ ಪೂಜೆಗಳನ್ನು ನಡೆಸಿದ್ದಾರೆ. ಇದನ್ನೂ ಓದಿ: ಕೋವಿಡ್​-19ಗೆ ಸಂಭಾವ್ಯ ಚಿಕಿತ್ಸೆ; 25 ಸಾವಿರ ಡಾಲರ್​ ಗೆದ್ದ ಭಾರತೀಯ ಮೂಲದ ವಿದ್ಯಾರ್ಥಿನಿ

ನಿನ್ನೆ ಆಯುಧ ಪೂಜೆ ನೆರವೇರಿಸುವಾಗಲೂ ಯದುವೀರ ಅವರು ಮಾಸ್ಕ್​ ಹಾಕಿಕೊಂಡಿರಲಿಲ್ಲ. ಇಂದು ಕೂಡ ಆಯುಧಗಳಿಗೆ ಉತ್ತರಪೂಜೆ, ಬನ್ನಿ ಮರಕ್ಕೆ ಪೂಜೆಗಳನ್ನು ನೆರವೇರಿಸಿದ್ದಾರೆ. ಈ ವೇಳೆ ಅವರೊಂದಿಗೆ ಇರುವವರೆಲ್ಲರೂ ಮಾಸ್ಕ್ ಧರಿಸಿದ್ದರೂ, ಯದುವೀರ ಒಡೆಯರ್​ ಅವರು ಮಾಸ್ಕ್​ ಹಾಕಿರಲಿಲ್ಲ. ಯದುವೀರ್​ ಒಡೆಯರ್ ಅವರು ಮಾಸ್ಕ್​ ಮರೆತು ಬಿಟ್ಟರಾ? ಎಂಬ ಮಾತು ಕೇಳಿಬರುತ್ತಿದೆ.