ಮುಂಬೈ: ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ತಮ್ಮ ಪತ್ನಿ ಟ್ವಿಂಕಲ್ ಖನ್ನಾ ಅವರನ್ನು ಟ್ರೋಫಿ ವೈಫ್ (My Trophy wife) ಎಂದು ಹೇಳಿದ್ದಾರೆ. ‘ವೆಲ್ಕಮ್ ಟು ಪ್ಯಾರಡೈಸ್’ ಪುಸ್ತಕಕ್ಕೆ ಟ್ವಿಂಕಲ್ ಖನ್ನಾ ಪ್ರಶಸ್ತಿ ಪಡೆದ ನಂತರ ಅವರ ಈ ಪ್ರತಿಕ್ರಿಯೆ ಬಂದಿದೆ. 2024ರ ಕ್ರಾಸ್‌ವರ್ಡ್ ಪುಸ್ತಕ ಪ್ರಶಸ್ತಿಯ ಜನಪ್ರಿಯ ಫಿಕ್ಷನ್ ವಿಭಾಗದಲ್ಲಿ ಟ್ವಿಂಕಲ್ ಅವರ ಪುಸ್ತಕವನ್ನು ವಿಜೇತರಾಗಿ ಆಯ್ಕೆ ಮಾಡಲಾಗಿದೆ.
ಇದನ್ನು ಓದಿ: Pushpa 2 | ಈ ಪ್ಯಾನ್ ಇಂಡಿಯಾ ಯಶಸ್ಸಿಗೆ ಆ ಟಾಪ್ ನಿರ್ದೇಶಕರೇ ಕಾರಣ; ಸುಕುಮಾರ್ ಹೇಳಿದ Director ಯಾರು?
ಈ ಬಗ್ಗೆ ಅಕ್ಷಯ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಸುದೀರ್ಘ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ಆ ಪೋಸ್ಟ್ನಲ್ಲಿ ಟ್ವಿಂಕಲ್ ಟ್ರೋಫಿಯನ್ನು ಹಿಡದು ಫೋಟೋಗೆ ಪೋಸ್ ನೀಡುತ್ತಿದ್ದಾರೆ.
ನನ್ನ ಟ್ರೋಫಿ ಪತ್ನಿ. ಅವಳು ತನ್ನದೇ ಆದ ಪುರಸ್ಕಾರಗಳನ್ನು ಗಳಿಸುತ್ತಾಳೆ. ಟ್ವಿಂಕಲ್ ಖನ್ನಾ ಕ್ರಾಸ್‌ವರ್ಡ್ ಜನಪ್ರಿಯ ಆಯ್ಕೆ ಪ್ರಶಸ್ತಿ ವಿಜೇತರಾಗಿರುವ ಬಗ್ಗೆ ತುಂಬಾ ಹೆಮ್ಮೆಯಿದೆ ಎಂದು ಹೇಳಿದ್ದಾರೆ.
ಟ್ವಿಂಕಲ್ ಖನ್ನಾ ಸೋಮವಾರ ಪ್ರಶಸ್ತಿ ಪಡೆದ ಬಳಿಕ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಟ್ವಿಂಕಲ್ ಖನ್ನಾ ಅವರು 2015ರಲ್ಲಿ ತಮ್ಮ ಮೊದಲ ಪುಸ್ತಕ ಮಿಸೆಸ್ ಫನ್ನಿಬೋನ್ಸ್ ಅನ್ನು ಬಿಡುಗಡೆ ಮಾಡಿದರು. ಬಳಿಕ ಅವರಎರಡನೇ ಪುಸ್ತಕ ದಿ ಲೆಜೆಂಡ್ ಆಫ್ ಲಕ್ಷ್ಮಿ ಪ್ರಸಾದ್ ರಿಲೀಸ್ ಮಾಡಿದರು. ಆದರೆ ಅವರಿಗೆ ಲೇಖಕಿ ಎಂಬ ಗುರುತು ಅವರ ಮೂರನೇ ಪುಸ್ತಕ ಪೈಜಾಮಾಸ್ ಆರ್ ಫಾರ್ಗಿವಿಂಗ್ ಬಂದಿತು. ಈ ಪುಸ್ತಕ 2018ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗಿ ಮಹಿಳಾ ಲೇಖಕಿ ಎಂಬು ಗುರುತಿಸುವಂತೆ ಮಾಡಿತು. ಅವರ ನಾಲ್ಕನೇ ಪುಸ್ತಕ ‘ವೆಲ್ಕಮ್ ಟು ಪ್ಯಾರಡೈಸ್’ 2023ರಲ್ಲಿ ಬಿಡುಗಡೆಯಾಯಿತು.
ಟ್ವಿಂಕಲ್ ಖನ್ನಾ 2022ರಲ್ಲಿ ಲಂಡನ್ ವಿಶ್ವವಿದ್ಯಾನಿಲಯದ ಗೋಲ್ಡ್ ಸ್ಮಿತ್ಸ್‌ನಲ್ಲಿ ಫಿಕ್ಷನ್ ಬರವಣಿಗೆಯಲ್ಲಿ ತನ್ನ ಮಾಸ್ಟರ್ಸ್ ಅನ್ನು ಮುಂದುವರಿಸಲು ಹೋದರು. 2001ರಲ್ಲಿ ಅಕ್ಷಯ್ ಅವರನ್ನು ವಿವಾಹವಾದರು. ದಂಪತಿಗೆ ಆರವ್ ಮತ್ತು ನಿತಾರಾ ಎಂಬ ಇಬ್ಬರು ಮಕ್ಕಳಿದ್ದಾರೆ.(ಏಜೆನ್ಸೀಸ್)